ಸಂಸದ ಪ್ರತಾಪ್‌ ಸಿಂಹ, ಶಿಲ್ಪಿ ಅರುಣ್ ಯೋಗಿರಾಜ್ ಪ್ರಧಾನಿ ಮೋದಿ ಭೇಟಿ: ಯೋಗ ದಿನಾಚರಣೆಗೆ ಮೈಸೂರಿಗೆ ಆಹ್ವಾನ

ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರಿನ ಯುವ ಶಿಲ್ಪಿ ಅರುಣ್ ಯೋಗಿರಾಜ್ ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ

MP Pratap Simha sculptor Arun Yogiraj meet PM Narendra Modi invited to Mysuru for Yoga Day celebrations mnj

ನವದೆಹಲಿ (ಏ. 06): ಮೈಸೂರು ಸಂಸದ ಪ್ರತಾಪ್ ಸಿಂಹ ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಭೇಟಿ ಮಾಡಿ ಜೂನ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಲು ಮತ್ತು ಭಾಗವಹಿಸಲು ಆಹ್ವಾನಿಸಿದ್ದಾರೆ. ಜತೆಯಲ್ಲಿ ನವೆಂಬರ್ 2021 ರಲ್ಲಿ ಕೇದಾರನಾಥದಲ್ಲಿ ಸ್ಥಾಪಿಸಲಾದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿಸಿದ ಮೈಸೂರಿನ ಯುವ ಶಿಲ್ಪಿ ಅರುಣ್ ಯೋಗಿರಾಜ್ ಕೂಡ ಪ್ರಧಾನಿ ಭೇಟಿ ಮಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ನೀಡಿದ್ದಾರೆ.

ತಮ್ಮ ಕುಟುಂಬ ಸದಸ್ಯರೊಂದಿಗೆ ಮೋದಿ ಭೇಟಿ ಮಾಡಿದ ಪ್ರತಾಪ್‌ ಸಿಂಹ ಯೋಗದ ಮಹತ್ವ ಸಾರುವಲ್ಲಿ ಮೈಸೂರಿನ ಮಹತ್ವವನ್ನು ವಿವರಿಸಿದ್ದು ಮತ್ತು ಇದು ಅಷ್ಟಾಂಗ ಯೋಗದ ರಾಜಧಾನಿಯಾಗಿದ್ದು ಯೋಗ ಕಲಿಯಲು ಸೂಕ್ತವಾದ ಸ್ಥಳವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿಬಿಜೆಪಿ ಸಂಸ್ಥಾಪನಾ ದಿನ: ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ

ಯೋಗ ದಿನಾಚರಣೆ:  2020 ಮತ್ತು 2021 ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಯೋಗ ದಿನಾಚರಣೆಯನ್ನು ಈವೆಂಟನ್ನು ವರ್ಚುವಲ್ ಮೋಡ್‌ನಲ್ಲಿ ನಡೆಸಲಾಗಿತ್ತು. ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ 2015 ರಲ್ಲಿ ಪ್ರಾರಂಭವಾದಾಗಿನಿಂದ  ಮೈಸೂರುನಲ್ಲಿ ಎಲ್ಲಾ ವರ್ಗಗಳ ಸಾವಿರಾರು ಯೋಗ ಸಾಧಕರನ್ನು ಒಟ್ಟೂಗೂಡಿಸುವ ಮೂಲಕ ದೊಡ್ಡ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಪ್ರತಾಪ್‌ ಸಿಂಹ ತಿಳಿಸಿದ್ದಾರೆ. 2017 ರಲ್ಲಿ, ಮೈಸೂರು 55,000 ಕ್ಕೂ ಹೆಚ್ಚು ಜನರ ಭಾಗವಹಿಸುವಿಕೆಯ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿತ್ತು. 

 

 

‘ಈ ವರ್ಷ 1.10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಮೂಲಕ ಹಿಂದಿನ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯಲು ನಾವು ಸಂಪೂರ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ, ಇದಕ್ಕಾಗಿ ಮೈಸೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ನಾವು ನಿಮ್ಮನ್ನು ಮನಃಪೂರ್ವಕವಾಗಿ ವಿನಂತಿಸುತ್ತಿದ್ದೇವೆ’ ಎಂದು ಪ್ರಧಾನಿಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.

ಅರುಣ್‌ ಯೋಗಿರಾಜ್‌ ಭೇಟಿ: ಇನ್ನು ಪ್ರಧಾನಿ ಮೋದಿ  ಕೇದಾರನಾಥದಲ್ಲಿ ಸ್ಥಾಪಿಸಲಾದ ಆದಿ ಶಂಕರಾಚಾರ್ಯರ ಪ್ರತಿಮೆಯಿಂದ ಪ್ರಭಾವಿತರಾಗಿದ್ದರು ಅಲ್ಲದೇ ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಪ್ರತಿಷ್ಠಾಪನಾ ಸಮಾರಂಭದಂದು ಯೋಗಿರಾಜ್  ಕೇದಾರನಾಥದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: 370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಕಾಶ್ಮೀರ ಭೇಟಿಗೆ ದಿನಾಂಕ ಫಿಕ್ಸ್!

ಈ ಬಗ್ಗೆ ಟ್ವೀಟ್‌ ಮಾಡಿರು ಶಿಲ್ಪಿ ಯೋಗಿರಾಜ್ "ಎರಡು ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿಗೆ ನೀಡಿರುವುದಾಗಿ ತಿಳಿಸಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿ ಭೇಟಿಗೆ ವ್ಯವಸ್ಥೆ ಮಾಡಿದರು" ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು"ಇಂದು ಅರುಣ್ ಯೋಗಿರಾಜ್ ಅವರನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ನೇತಾಜಿ ಬೋಸ್ ಅವರ ಈ ಅಸಾಧಾರಣ ಶಿಲ್ಪವನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಕೃತಜ್ಞರಾಗಿರುತ್ತೇನೆ" ಎಂದು ಹೇಳಿದ್ದಾರೆ.

 

 

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರುಣ್ ಯೋಗಿರಾಜ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ: "ನಮ್ಮದೇ ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಂದು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಭೇಟಿಯಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಎರಡು ಅಡಿ ಏಕಶಿಲೆಯ ಕಲ್ಲಿನ ಮಾದರಿಯನ್ನು ಅವರಿಗೆ ನೀಡಿದರು. ಪ್ರಧಾನಮಂತ್ರಿಯವರು ಹಾವಭಾವ ಮತ್ತು ಸುಂದರ ಶಿಲ್ಪಕ್ಕಾಗಿ ಎಲ್ಲರೂ ಶ್ಲಾಘಿಸಿದರು. ಅಭಿನಂದನೆಗಳು @yogiraj_arun" ಎಂದಿದ್ದಾರೆ.

 

Latest Videos
Follow Us:
Download App:
  • android
  • ios