370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಕಾಶ್ಮೀರ ಭೇಟಿಗೆ ದಿನಾಂಕ ಫಿಕ್ಸ್!
370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು 2019 ರಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ಕಣಿವೆಗೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಎನಿಸಿಕೊಳ್ಳಲಿದೆ.
ನವದೆಹಲಿ (ಏ.5): ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಏಪ್ರಿಲ್ 24 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅಶೋಕ್ ಕೌಲ್ ( BJP's general secretary (organisation) Ashok Koul) ಮಂಗಳವಾರ ಖಚಿತಪಡಿಸಿದ್ದಾರೆ.
2019 ರಲ್ಲಿ ಆರ್ಟಿಕಲ್ 370 ರದ್ದತಿ (abrogation of Article 370) ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ಕಣಿವೆಗೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಎನಿಸಿಕೊಳ್ಳಲಿದೆ. ಪ್ರಧಾನ ಮಂತ್ರಿ ಮತ್ತು ಕಾಶ್ಮೀರಿ ಪಂಡಿತ್ (Kashmiri Pandit community ) ಸಮುದಾಯದ ಪ್ರತಿನಿಧಿಗಳ ನಡುವೆ ಸಭೆ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೌಲ್ ದೃಢಪಡಿಸಿದರು, ಇದರಿಂದಾಗಿ ಕಾಶ್ಮೀರಿ ಪಂಡಿತರು ತಮ್ಮ ಕಳವಳವನ್ನು ಪ್ರಧಾನಿಯೊಂದಿಗೆ ನೇರವಾಗಿ ವ್ಯಕ್ತಪಡಿಸುವ ಅವಕಾಶ ನೀಡಲಾಗುತ್ತದೆ. ಇಂದು ಮುಂಜಾನೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು "ಭಯೋತ್ಪಾದನೆಯ ರಾಜಧಾನಿ" ಯಿಂದ "ಪ್ರವಾಸೋದ್ಯಮ ರಾಜಧಾನಿ" ಯಾಗಿ ಪರಿವರ್ತಿಸಿದೆ ಎಂದು ಹೇಳಿದ್ದರು.
ಕಣಿವೆಯಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಮೋದಿ ಶ್ರಮಿಸಿದ್ದಾರೆ. ಬಿಜೆಪಿಯು ಭಯೋತ್ಪಾದನೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು ಮತ್ತು ಯಾವುದೇ ಪ್ರಜೆಯ ಮೇಲೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ದಾಳಿ ಮಾಡಿದರೆ ಅವನ ಸಮಾಧಿಯನ್ನು ತಾನೇ ತೋಡಿಕೊಂಡಂತೆ ಎಂಬ ಸ್ಪಷ್ಟ ದೃಷ್ಟಿಯೊಂದಿಗೆ ಭಯೋತ್ಪಾದಕರ ಅಟ್ಟಹಾಸವನ್ನೂ ಸಹ ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
"ಭಯೋತ್ಪಾದನೆಯನ್ನು ತೊಡೆದುಹಾಕಲು ಮತ್ತು ಜಮ್ಮು ಮತ್ತು ಕಾಶ್ಮೀರದ ಎರಡೂ ಪ್ರದೇಶಗಳ ಸಮಾನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಪ್ರತಿಜ್ಞೆಯಾಗಿದೆ. ಇದು ನಮ್ಮ ಕನಸು ಮತ್ತು ಬದ್ಧತೆಯಾಗಿದೆ ಮತ್ತು ನಾವು ಇದನ್ನು ಸಾಧಿಸುವವರೆಗೆ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಚುಗ್ ಮಾಧ್ಯಮಗಳಿಗೆ ತಿಳಿಸಿದರು.
ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಸ್ಪತ್ರೆಗೆ ದಾಖಲು
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಯ ಸ್ಪಷ್ಟ ಉಲ್ಲೇಖ ಮಾಡಿದ ಚುಗ್, "ಅವರು ಯಾವಾಗಲೂ ಕಾಶ್ಮೀರವನ್ನು ಜಮ್ಮುವಿನ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಲು ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಸ್ನೇಹದ ಬಗ್ಗೆ ಮಾತನಾಡುತ್ತಾರೆ. ಏಕೆಂದರೆ, ವಿಷ ಎನ್ನುವುದು ಅವರ ಡಿಎನ್ಎಯಲ್ಲಿ ಇನ್ನೂ ಜೀವಂತವಾಗಿದೆ ಎಂದು ಕಿಡಿಕಾರಿದ್ದಾರೆ.
ಆದರೆ, 'ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ'ದಲ್ಲಿ ನಂಬಿಕೆಯಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿ ಸರ್ಕಾರ ಇರುವಾಗ ಈ ಬಾರಿ ಅವರು ಯಶಸ್ವಿಯಾಗುವುದಿಲ್ಲ ಎಂದು ಚುಗ್ ಹೇಳಿದರು. "ಆರ್ಟಿಕಲ್ 370 ರ ರದ್ದು ಮಾಡಿದ್ದು (2019 ರಲ್ಲಿ) ಹಲವು ಸರ್ಕಾರಗಳಿಂದ ವಂಚನೆಗೆ ಒಳಗಾದವರಿಗೆ ನ್ಯಾಯದ ಬಾಗಿಲು ತೆರೆದಂತಾಗಿದೆ" ಎಂದು ಬಿಜೆಪಿ ನಾಯಕ ಹೇಳಿದರು.
ಕಾಂಗ್ರೆಸ್ ರಕ್ಷಿಸಬೇಕಾದ್ರೆ, ರಾಹುಲ್, ಪ್ರಿಯಾಂಕರನ್ನು ಹೊರಹಾಕಿ!
ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡುವುದಾಗಿ ಈ-ಮೇಲ್ ಬೆದರಿಕೆ ಬಂದ ನಡುವೆಯೂ ಅವರ ಭೇಟಿ ನಿಗದಿಯಾಗಿದೆ. ಈ ಮೇಲ್ ನಲ್ಲಿ 20 ಕೆಜಿ ಆರ್ ಡಿಎಕ್ಸ್ ಬಳಸಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳಿಗೆ ಈ ಮಾಹಿತಿ ಸಿಕ್ಕಿದ್ದು, ಈ ಮೇಲ್ ನ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎನ್ ಐಎ ಹೇಳಿತ್ತು. ರಾಷ್ಟ್ರೀಯ ತನಿಖಾ ತಂಡಕ್ಕೆ (National investigation agency) ಇಮೇಲ್ ರವಾನೆಯಾಗಿದೆ. ಇದರ ಬೆನ್ನಲ್ಲಿಯೇ ಭದ್ರತಾ ಏಜೆನ್ಸಿಗಳು ಕಂಗಾಲಾಗಿದ್ದು, ಪ್ರತಿ ಚಲನವಲನದ ಮೇಲೆ ಹದ್ದಿ ಕಣ್ಣಿಟ್ಟಿದ್ದಾರೆ. ತಮ್ಮ ಈ ಷಡ್ಯಂತ್ರ ಬಯಲಾಗಬಾರದು. ಹಾಗೇನಾದರೂ ಆದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೂ ಈ ಮೇಲ್ ಕಳುಹಿಸಿದ ವ್ಯಕ್ತಿ ಬರೆದಿದ್ದಾನೆ.