Asianet Suvarna News Asianet Suvarna News

ಶಬಾನಾ ಅಜ್ಮಿ, ಜಾವೇದ್‌ ಅಖ್ತರ್‌, ನಾಸಿರುದ್ಧಿನ್‌ ಷಾ 'ತುಕ್ಡೆ ತುಕ್ಡೆ' ಗ್ಯಾಂಗ್‌ನ ಸ್ಲೀಪರ್‌ ಸೆಲ್‌ಗಳು!

ಶಬಾನಾ ಅಜ್ಮಿ ಹೇಳಿಕೆಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿರುಗೇಟು ನೀಡಿದ್ದಾರೆ. ಕನ್ಹಯ್ಯಾಲಾಲ್ ಹತ್ಯೆಯ ಬಗ್ಗೆ ಇವರೆಲ್ಲ ಬಾಯಿ ಬಿಟ್ಟಿರಲಿಲ್ಲ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಏನಾದರೂ ಸಂಭವಿಸಿದರೆ, ಅವರು ದೇಶದಲ್ಲಿ ಉಳಿಯಲು ಹೆದರುತ್ತಾರೆ ಎಂದು ಅವರು ಲೇವಡಿ ಮಾಡಿದರು.
 

MP Home Minister says Shabana Azmi Javed Akhtar Naseeruddin Shah sleeper cells of tukde tukde gang san
Author
First Published Sep 3, 2022, 4:09 PM IST

ಭೋಪಾಲ್‌ (ಸೆ.3): ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಬಾಲಿವುಡ್‌ನ ಖ್ಯಾತ ನಟ ಹಾಗೂ ಸಾಹಿತಿಯಾದ ಶಬಾನಾ ಅಜ್ಮಿ, ಜಾವೇದ್‌ ಅಖ್ತರ್‌ ಹಾಗೂ ಖ್ಯಾತ ನಟ ನಾಸಿರರುದ್ದೀನ್‌ ಶಾ ಅವರನ್ನು ತುಕ್ಡೆ ತುಕ್ಡೆ ಗ್ಯಾಂಗ್‌ನ ಸ್ಪೀಪರ್‌ ಸೆಲ್‌ ಆಗಿ ಕಾರ್ಯನಿವರ್ಹಿಸುತ್ತಿರುವ ವ್ಯಕ್ತಿಗಳು ಎಂದು ಟೀಕೆ ಮಾಡಿದ್ದಾರೆ. ಇತ್ತೀಚೆಗೆ ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದ ಶಬಾನಾ ಅಜ್ಮಿ, 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ನೇರಪ್ರಸಾರದಲ್ಲಿಯೇ ಕಣ್ಣೀರಿಟ್ಟಿದ್ದಾರೆ. 'ವಿಚಾರ ಏನೆಂದರೆ, ಈ ಶಬಾನಾ ಅಜ್ಮಿ, ಜಾವೇದ್‌ ಅಖ್ತರ್‌ ಹಾಗೂ ನಾಸಿರುದ್ದೀನ್‌ ಶಾ ತುಕ್ಡೆ, ತುಕ್ಡೆ ಗ್ಯಾಂಗ್‌ನ ಸ್ಲೀಪರ್‌ ಸೆಲ್‌ಗಳು. ರಾಜಸ್ಥಾನದಲ್ಲಿ ಕನ್ಹಯ್ಯಲಾಲ್‌ನನ್ನು ಉಗ್ರವಾಗಿ ಶಿರಚ್ಛೇದ ಮಾಡಿ ಕೊಲೆ ಮಾಡಲಾಯಿತು. ಇವ್ಯಾರೂ ಒಂದು ಶಬ್ದ ಕೂಡ ಮಾತನಾಡಿರಲಿಲ್ಲ. ಜಾರ್ಖಂಡ್‌ನಲ್ಲಿ ನಮ್ಮ ಹಿಂದು ಹೆಣ್ಣುಮಗಳನ್ನು ಪೆಟ್ರೋಲ್‌ ಹಾಕಿ ಸುಟ್ಟುಹಾಕಲಾಯಿತು. ಈ ಬಗ್ಗೆ ಇವರುಗಳು ಏನಾದರೂ ಮಾತನಾಡಿದ್ದಾರೆಯೇ? ಏನಾದರೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಣ್ಣ ಘಟನೆಗಳು ಆದರೂ ಸಾಕು, ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡಲು ಆರಂಭ ಮಾಡುತ್ತಾರೆ ಎಂದು ನರೋತ್ತಮ್‌ ಮಿಶ್ರಾ ಕಟು ಪದಗಳಲ್ಲಿ ಇವರನ್ನು ಟೀಕಿಸಿದ್ದಾರೆ.


ಬಿಜೆಪಿ ಆಡಳಿತವಿರುವ (BJP Ruled States) ರಾಜ್ಯಗಳಲ್ಲಿ ಏನಾದರೂ ಅಹಿತಕರವಾದ ಘಟನೆ ಆದರೂ ಸಾಕು. ನಾಸಿರುದ್ದೀನ್‌ ಶಾಗೆ (Naseeruddin Shah ) ಈ ದೇಶದಲ್ಲಿ ಇರಲು ಕೂಡ ಭಯವಾಗುತ್ತದೆ. ನಂತರ ಈ ಅವಾರ್ಡ್‌ ವಾಪ್ಸಿ ಗ್ಯಾಂಗ್‌ ಕೂಡ ಸಕ್ರಿಯವಾಗುತ್ತದೆ. ತಮ್ಮ ಮನಸ್ಸಿಗೆ ಶಾಂತಿ ಆಗುವ ತನಕ ಇವರೆಲ್ಲ ಟೀಕೆ ಮಾಡುತ್ತಾರೆ. ಇವರನ್ನು ನಾವು ಸೆಕ್ಯುಲರ್‌ ಎಂದು ಹೇಗೆ ಕರೆಯಲು ಸಾಧ್ಯ. ಈಗ ನಮ್ಮ ದೇಶದ ಎಲ್ಲಾ ಜನರು ಇವರ ನಿಜರೂಪವನ್ನು ತಿಳಿದುಕೊಂಡಿದ್ದಾರೆ ಎಂದು ಸಚಿವ (Madhya Pradesh home minister Narottam Mishra) ಹೇಳಿದ್ದಾರೆ.

ಬಾಲಿವುಡ್‌ಗೂ ಪ್ರವೇಶಿಸಿದ ಹಿಜಾಬ್ ವಿವಾದ; Kangana ಹೇಳಿಕೆಗೆ ಪ್ರತಿಕ್ರಿಯಿಸಿದ ಶಬಾನಾ ಅಜ್ಮಿ, ಸೋನಮ್ ಕಪೂರ್!

ಆಗಸ್ಟ್‌ 15 ರಂದು ಶಬಾನಾ ಅಜ್ಮಿ (Shabana Azmi) ಟಿವಿಯೊಂದಕ್ಕೆ ಸಂದರ್ಶನ ನೀಡಿದ್ದರು. ಗ್ಯಾಂಗ್‌ರೇಪ್‌ನ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ಬಳಿಕ ಇಡೀ ದೇಶ ಎದುರಿಸಿದ ಮೌನಕ್ಕೆ ನನ್ನಲ್ಲಿ ಪದಗಳೇ ಇಲ್ಲ ಎಂದು ಹೇಳಿದ್ದಲ್ಲದೆ, ನೇರಪ್ರಸಾರದಲ್ಲಿಯೇ ಕಣ್ಣೀರಿಟ್ಟಿದ್ದರು. “ಈ ವ್ಯಕ್ತಿಗೆ ನ್ಯಾಯ ಸಿಗುವಂತೆ ನಾವು ಛಾವಣಿಯ ಮೇಲಿಂದ ಕೂಗಬೇಕಲ್ಲವೇ? ಮತ್ತು ಈ ದೇಶದಲ್ಲಿ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿರುವ ಮಹಿಳೆಯರು, ದಿನನಿತ್ಯದ ಅತ್ಯಾಚಾರದ ಬೆದರಿಕೆಯನ್ನು ಎದುರಿಸುತ್ತಿರುವ ಮಹಿಳೆಯರು - ಅವರು ಸ್ವಲ್ಪ ಸುರಕ್ಷತೆಯ ಭಾವನೆಯನ್ನು ಪಡೆಯಬೇಕಲ್ಲವೇ? ನನ್ನ ಮಕ್ಕಳಿಗೆ, ನನ್ನ ಮೊಮ್ಮಕ್ಕಳಿಗೆ ನಾನು ಏನು ಉತ್ತರಿಸಲಿ? ಬಿಲ್ಕಿಸ್‌ಗೆ ನಾನು ಏನು ಹೇಳಬಲ್ಲೆ? ನನಗೆ ನಾಚಿಕೆಯಾಗುತ್ತಿದೆ" ಎಂದು ನಟಿ ಹೇಳಿದ್ದರು. ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ಖಂಡನೆ ಮಾಡಿದ್ದ ಅವರು,  ಪರಿಸ್ಥಿತಿ ತುಂಬಾ ಭೀಕರವಾಗಿದೆ ಎಂದು ಹೇಳಿದರು. ಒಂದು ಕಡೆಯಿಂದ ದೇಶದಲ್ಲಿ ಸ್ತ್ರೀಶಕ್ತಿಯನ್ನು ಉತ್ತೇಜಿಸುವ ಮಾತು ಜೋರಾಗಿ ಮಾತನಾಡುತ್ತಿದ್ದರೂ ಇದೆಲ್ಲವನ್ನು ನೋಡಿದ ನಂತರ ನಾನು ಈ ಬಗ್ಗೆ ಯೋಚನೆ ಮಾಡುತ್ತಿರುವುದಾಗಿ ಹೇಳಿದ್ದರು.

'ಬುರ್ಖಾ ನಿಷೇಧಿಸಿದರೆ, ಗೂಂಗಟ್‌ಗೂ ನಿಷೇಧ ಹಾಕಿ'

ಬಿಲ್ಕಿಸ್‌ ಬಾನು ಗ್ಯಾಂಗ್‌ರೇಪ್‌ನ (Bilkis Bano gang rape case) ಅಪರಾಧಿಗಳ ಬಿಡುಗಡೆಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಈ ವಿಷಯವು ಸದ್ಯ ಸುಪ್ರೀಂ ಕೋರ್ಟ್‌ನ ( Supreme Court) ಮೆಟ್ಟಿಲೇರಿದ್ದು. ಅದು ಗುಜರಾತ್ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೇಳಿದೆ. ಪ್ರಮುಖ ರಾಜಕೀಯ ನಾಯಕರು ಹಾಗೂ ಎಡಪಂತೀಯರು ಈಗಾಗಲೇ ಈ ಆರೋಪಿಗಳನ್ನು ಬಿಡುಗಡೆ ಮಾಡಿದ್ದನ್ನು ಟೀಕಿಸಿದ್ದಾರೆ.

 

Follow Us:
Download App:
  • android
  • ios