ಭೋಪಾಲ್‌[ಮೇ.03]: ಈಗಾಘಲೇ ಬುರ್ಖಾ ನಿಷೇಧಕ್ಕೆ ಸಣಂಬಂಧಿಸಿದಂತೆ ಪರ ವಿರೋಧಗಳು ಕೇಳಿ ಬರುತ್ತಿವೆ. ಶಿವಸೇನೆ ಸೇರಿದಂತೆ ಹಲವರು ಬುರ್ಖಾ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದರೆ, ಅನೇಕರು ನಿಷೇಧ ಬೇಡ ಎನ್ನುತ್ತಿದ್ದಾರೆ.

ಸದ್ಯ ಶ್ರೀಲಂಕಾದಂತೆ ಭಾರತದಲ್ಲಿಯೂ ಬುರ್ಖಾ ಪದ್ಧತಿ ರದ್ದು ಮಾಡಬೇಕೆಂದು ಶಿವಸೇನೆ ಮುಖವಾಣಿ ಸಾಮ್ನಾ ಒತ್ತಾಯಿಸಿದ ಬೆನ್ನಲ್ಲೇ, ಬುರ್ಖಾ ನಿಷೇಧಕ್ಕೆ ಭಾರತ ಸರ್ಕಾರ ಕಾನೂನು ತಂದರೆ ಅದಕ್ಕೆ ತಮ್ಮ ಅಭ್ಯಂತರವೇನೂ ಇಲ್ಲ. ಆದರೆ ಈ ನಿಷೇಧವನ್ನು ರಾಜಸ್ಥಾನ, ಗುಜರಾತ್‌, ಬಿಹಾರದ ಮಹಿಳೆಯರು ಅನುಸರಿಸುವ ಗೂಂಗಟ್‌ (ಹಿಂದೂ ಮಹಿಳೆಯರು ಸೆರಗಿನಿಂದ ಮುಖ ಮುಚ್ಚಿಕೊಳ್ಳುವುದು)ಗೂ ವಿಸ್ತರಿಸಬೇಕು ಎಂದು ಖ್ಯಾತ ಸಾಹಿತಿ ಜಾವೇದ್‌ ಅಖ್ತರ್‌ ಪ್ರತಿಪಾದಿಸಿದ್ದಾರೆ. ಜೊತೆಗೆ ಅದನ್ನು ರಾಜಸ್ಥಾನದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನವೇ ಜಾರಿಗೆ ತರಬೇಕು ಎಂದಿದ್ದಾರೆ.

ನಿನ್ನೆ ಗುರುವಾರ ಕೇರಳದ ಕಾಲೇಜೊಂದರಲ್ಲಿ ಬುರ್ಖಾ ಸಂಪೂರ್ಣವಾಗಿ ನಿಷೇಧಿಸಿದ್ದು, ಭಾರೀ ಚರ್ಚೆ ಹುಟ್ಟು ಹಾಕಿದೆ.