ಭೋಪಾಲ್‌[ಡಿ.28]: ಮಧ್ಯ ಪ್ರದೇಶದ ಜಿವಾಜಿ ವಿಶ್ವವಿದ್ಯಾಲಯದ ಅಧೀನ ಕಾಲೇಜೊಂದು ಮೂರನೇ ಸೆಮಿಸ್ಟರ್‌ನ ಎಂ.ಎ. ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಪ್ರಶ್ನೆಯಲ್ಲಿ ಕ್ರಾಂತಿಕಾರಿ ಭಯೋತ್ಪಾದಕರು ಅಂದರೆ ಯಾರು ವಿವರಿಸಿ. ಕ್ರಾಂತಿಕಾರಿಗಳು ಮತ್ತು ಕ್ರಾಂತಿಕಾರಿ ಭಯೋತ್ಪಾದಕರಿಗೂ ಇರುವ ವ್ಯತ್ಯಾಸ ಏನು? ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ವಿದ್ಯಾರ್ಥಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇದೇ ವೇಳೆ ಸ್ವಾಂತಂತ್ರ್ಯ ಹೋರಾಟಗಾರರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.