ಓದಿಕೊಂಡಿರುವ ಹುಡುಗಿಯನ್ನು ಮಗನಿಗೆ ಮದುವೆ ಮಾಡಿದ್ದಾರೆ. ಆದರೆ ಸೊಸೆ ಫೇಸ್‌ಬುಕ್‌ನಲ್ಲಿ ಅನೈತಿಕ ಸಂಬಂಧ ಹೊಂದಿದ್ದಳು. ಅತ್ತೆ, ಸೊಸೆಯ ಫೇಸ್‌ಬುಕ್ ಗೆಳೆಯನಿಗೆ ಬೇಟಿಯಾಗುವಂತೆ ಮಾಡಿಸಿ ಮಾರುಕಟ್ಟೆಗೆ ಬರಲು ಸೂಚಿಸಿದ್ದಾಳೆ. ಅಲ್ಲಿಗೆ ಬಂದ ಯುವಕನನ್ನು ಅತ್ತೆ ಹಿಡಿದುಕೊಂಡಿದ್ದಾಳೆ.
ನನ್ನ ಮಗನಿಗೆ ಓದಿಕೊಂಡಿರುವ ಹುಡುಗಿಯನ್ನು ನೋಡಿ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳಬೇಕು ಎಂದು ವಿದ್ಯಾವಂತೆ ಯುವತಿಯನ್ನು ನೋಡಿ ಮಗನಿಗೆ ಮದುವೆ ಮಾಡಿದ್ದಾರೆ. ಆದರೆ, ಮಗ ದುಡಿಮೆಗೆ ಹೋದಾಗ ಮನೆಯಲ್ಲಿ ಸೊಸೆ ಮೊಬೈಲ್ ಹಿಡಿದು ಕಿಸಿ-ಕಿಸಿ ನಗಾಡುತ್ತಿದ್ದಳು. ಅತ್ತೆ ಅನುಮಾನದಿಂದ ಸೊಸೆಯ ಎಲ್ಲ ನಡೆಯನ್ನು ವೀಕ್ಷಣೆ ಮಾಡುತ್ತಿದ್ದಾಗ ಆಕೆಗೆ ಫೇಸ್‌ಬುಕ್‌ನಲ್ಲಿ ಅವಿವಾಹಿತ ಯುವಕನೊಬ್ಬ ಪರಿಚಿತವಾಗಿ, ಅನೈತಿಕ ಸಂಬಂಧಕ್ಕೆ ಆಹ್ವಾನ ನೀಡುತ್ತಿದ್ದುದು ಗಮನಕ್ಕೆ ಬಂದಿದೆ. ಕೂಡಲೇ ಅತ್ತೆ, ಸೊಸೆಯ ಫೇಸ್‌ಬುಕ್ ಗೆಳೆಯನಿಗೆ ಬೇಟಿಯಾಗುವಂತೆ ಮೆಸೇಜ್ ಮಾಡಿಸಿ ಮಾರುಕಟ್ಟೆಗೆ ಬರಲು ಸೂಚಿಸಿದ್ದಾಳೆ. ಅಲ್ಲಿಗೆ ತನ್ನ ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಬಂದ ಯುವಕನನ್ನು ಅತ್ತೆ ಹಿಡಿದುಕೊಂಡಿದ್ದಾಳೆ. ಮುಂದೇನಾಯ್ತು ನೀವೇ ನೋಡಿ...
ಈ ಘಟನೆ ಉತ್ತರ ಪ್ರದೇಶ ರಾಜ್ಯದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಸಂಭಾಲ್‌ನ ಯುವಕನಿಗೆ ಬಿಜ್ನೋರ್ ಜಿಲ್ಲೆಯ ವಿವಾಹಿತ ಮಹಿಳೆಯೊಂದಿಗೆ ಫೇಸ್‌ಬುಕ್ ಮೂಲಕವೇ ಪ್ರೀತಿಯಾಗಿದೆ. ಭಾನುವಾರ ಪ್ರೇಮಿ ಆಕೆಯನ್ನು ಭೇಟಿಯಾಗಲು ಕರೆದಿದ್ದಾನೆ. ಆದರೆ ವಿವಾಹಿತ ಮಹಿಳೆಗಿಂತ ಮೊದಲು ಆಕೆಯ ಅತ್ತೆ ಮತ್ತು ಕುಟುಂಬದ ಇತರ ಸದಸ್ಯರು ಅಲ್ಲಿಗೆ ಬಂದಿದ್ದಾರೆ. ಆ ಯುವಕನನ್ನು ನೋಡುತ್ತಲೇ ಅತ್ತೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದಳು. ಆತನಿಗೆ ಮನಸೋ ಇಚ್ಛೆ ಥಳಿಸಿದ ಅತ್ತೆ, ಒಂದು ಸಂಸಾರವನ್ನು ಕೆಡಿಸುತ್ತಿದ್ದ ಯುವಕನನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಕರೆ ಮಾಡಿದ್ದಾರೆ. ಆದರೆ, ಪೊಲೀಸರು ಬರುವ ಯುವಕ ಪರಾರಿ ಆಗಿದ್ದರಿಂದ, ಅತ್ತೆ ಕೂಡ ತಮ್ಮ ಕುಟುಂಬ ಮರ್ಯಾದೆ ಪೊಲೀಸ್ ಠಾಣೆ ಮೆಟ್ಟಿಲೇರಬಾರದು ಎಂದು ಅಲ್ಲಿಂದ ಪರಾರಿ ಆಗಿದ್ದಾರೆ.
ಏನಿದು ಪ್ರಕರಣ?
ಈ ಪ್ರಕರಣ ಸಂಭಾಲ್ ಜಿಲ್ಲೆಯ ಗಜರೌಲಾ ನಗರದ ಇಂದಿರಾ ವೃತ್ತದಲ್ಲಿ ನಡೆದಿದೆ. ಮೂರು ತಿಂಗಳಿನಿಂದ ಸಂಭಾಲ್ ಜಿಲ್ಲೆಯ ಒಂದು ಗ್ರಾಮದ ಯುವಕ ಬಿಜ್ನೋರ್ ಜಿಲ್ಲೆಯ ವಿವಾಹಿತ ಮಹಿಳೆಯೊಂದಿಗೆ ಮಾತನಾಡುತ್ತಿದ್ದ. ಇಬ್ಬರ ನಡುವೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಇಬ್ಬರೂ ಪರಸ್ಪರ ಪ್ರೀತಿ ವ್ಯಕ್ತಪಡಿಸಿದ್ದರು. ಹುಡುಗ ಹುಡುಗಿಯನ್ನು ಭೇಟಿಯಾಗಲು ಗಜರೌಲಾಗೆ ಕರೆದಿದ್ದ, ಆದರೆ ಈ ವಿಷಯ ಅತ್ತೆಯ ಮನೆಯವರಿಗೆ ತಿಳಿದುಬಂದಿತು.
ಇದನ್ನೂ ಓದಿ: ಅಪ್ರಾಪ್ತ ಮೈದುನನೊಂದಿಗೆ 2 ಮಕ್ಕಳನ್ನು ಬಿಟ್ಟು ಓಡಿಹೋದ ಅತ್ತಿಗೆ; ಕಣ್ಣೀರಿಡುತ್ತಿರುವ ಅಣ್ಣ!
ರಸ್ತೆಯಲ್ಲಿ ಚಪ್ಪಲಿಯಿಂದ ಹೊಡೆದರು: ಅವಿವಾಹಿತ ಫೇಸ್‌ಬುಕ್ ಪ್ರೇಮಿ ಮತ್ತು ವಿವಾಹಿತ ಮಹಿಳೆ ನಿರಂತರವಾಗಿ ಕರೆ ಮೂಲಕ ಸಂಪರ್ಕದಲ್ಲಿದ್ದರು. ಆ ಸಮಯದಲ್ಲಿ ಮಹಿಳೆಯ ಅತ್ತೆಯ ಮನೆಯವರು ಕೂಡ ಆಕೆಯೊಂದಿಗಿದ್ದರು. ಪ್ರೇಮಿ ತಾನು ಇಂದಿರಾ ಚೌಕದಲ್ಲಿ ನಿಂತಿದ್ದೇನೆ ಎಂದು ಹೇಳಿದ್ದಾನೆ. ಆಗ ಒಂದು ಕಾರು ಅವನ ಬಳಿ ನಿಂತಿತು ಮತ್ತು ಅದರಿಂದ ವಿವಾಹಿತ ಮಹಿಳೆಯ ಅತ್ತೆ ಮತ್ತು ಇತರರು ಇಳಿದರು. ಅವರು ಯುವಕನನ್ನು ಗುರುತಿಸುತ್ತಲೇ ಸಾರ್ವಜನಿಕವಾಗಿ ಹೊಡೆಯಲು ಪ್ರಾರಂಭಿಸಿದರು. ವಿವಾಹಿತ ಮಹಿಳೆಯ ಅತ್ತೆ ಅವನನ್ನು ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸಿದಳು. ಘಟನೆಯನ್ನು ನೋಡಿ ಸ್ಥಳದಲ್ಲಿ ಜನಸಂದಣಿ ಸೇರಿತು. ಜನರು ಹೊಡೆಯಲು ಕಾರಣ ಕೇಳಿದಾಗ, ವಿವಾಹಿತ ಮಹಿಳೆಯ ಅತ್ತೆ ಸಂಪೂರ್ಣ ವಿಷಯ ತಿಳಿಸಿದಳು. ಜನಸಂದಣಿಯಲ್ಲಿದ್ದ ಯಾರೋ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಪೊಲೀಸರು ಬರುವ ಮೊದಲೇ ಇಬ್ಬರೂ ಅಲ್ಲಿಂದ ಪರಾರಿಯಾದರು.
ಇದನ್ನೂ ಓದಿ: ಬೇಕಿರುವುದು 17 ಲಕ್ಷ ರೂ ಪರಿಹಾರವಲ್ಲ, ಜಡ್ಜ್ ಮುಂದೆ ಕಣ್ಣೀರಿಟ್ಟ ಕೋಲ್ಕತಾ ವೈದ್ಯೆ ಸಂತ್ರಸ್ತೆ ಪೋಷಕರು
