ಇಬ್ಬರು ಮಕ್ಕಳ ತಾಯಿಯಾದ ಅತ್ತಿಗೆ, ತನ್ನ ಅಪ್ರಾಪ್ತ ಮೈದುನನೊಂದಿಗೆ ಮನೆಯ ಚಿನ್ನಾಭರಣಗಳನ್ನು ದೋಚಿಕೊಂಡು ಓಡಿಹೋಗಿದ್ದಾಳೆ. ಪತಿ ಪೊಲೀಸರಿಗೆ ದೂರು ನೀಡಿದ್ದಾನೆ ಮತ್ತು ಪೊಲೀಸರು ಇಬ್ಬರನ್ನೂ ಹುಡುಕುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಮನೆಯಲ್ಲಿ ಗಂಡನೊಂದಿಗೆ ಸುಖ-ಸಂಸಾರ ನಡೆಸುತ್ತಾ 2 ಮಕ್ಕಳಿಗೆ ಜನ್ಮ ನೀಡಿದ ಅತ್ತಿಗೆ ಇತ್ತೀಚೆಗೆ ಅಪ್ರಾಪ್ತ ಮೈದುನನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಇದೀಗ, ಗಂಡನೊಂದಿಗೆ ಸಂಸಾರ ಮಾಡಿಕೊಂಡು ಇರಲಾಗದೇ ಅಪ್ರಾಪ್ತ ಮೈದುನನೊಂದಿಗೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ದೋಚಿಕೊಂಡು ಓಡಿ ಹೋಗಿದ್ದಾರೆ. ಇದೀಗ ಆಕೆಯ ಗಂಡ, ಹೆಂಡತಿಯೂ ಇಲ್ಲ, ಮನೆಯಲ್ಲಿದ್ದ ಚಿನ್ನಾಭರಣವೂ ಇಲ್ಲ ಹಾಗೂ ತಮ್ಮನೂ ಇಲ್ಲವೆಂದು ಗೋಳಾಡುತ್ತಿದ್ದಾನೆ.
ಗ್ವಾಲಿಯರ್ ಜಿಲ್ಲೆಯಲ್ಲಿ ಅತ್ತಿಗೆ-ಮೈದುನ ಪ್ರೇಮ ಪ್ರಕರಣದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಇಬ್ಬರು ಮಕ್ಕಳ ತಾಯಿಯಾದ ಅತ್ತಿಗೆ, ತನ್ನ ಅಪ್ರಾಪ್ತ ಮೈದುನಜೊತೆ ಮನೆಯಿಂದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಪತಿ ಮತ್ತು ಕುಟುಂಬಸ್ಥರು ಇಬ್ಬರನ್ನೂ ಹುಡುಕುತ್ತಿದ್ದಾರೆ ಮತ್ತು ಪೊಲೀಸರಿಗೆ ದೂರು ನೀಡಲಾಗಿದೆ. ಪತ್ನಿಗೆ ಅಪ್ರಾಪ್ತ ಮೈದುನಜೊತೆ ಅಕ್ರಮ ಸಂಬಂಧವಿತ್ತು ಮತ್ತು ಈಗ ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.
ಅತ್ತಿಗೆ ಮತ್ತು ಮೈದುನ ಪ್ರೇಮ ಪ್ರಕರಣ: ಗ್ವಾಲಿಯರ್‌ನ ಭಿತರ್‌ವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಶುಕ್ರವಾರ ಸಂಜೆ ತನ್ನ ಪತ್ನಿ ಹೊಲದಲ್ಲಿ ದೀಪ ಹಚ್ಚುವ ನೆಪದಲ್ಲಿ ಮನೆಯಿಂದ ಹೊರಟಿದ್ದಳು. ಆದರೆ ಮರಳಿ ಬರಲಿಲ್ಲ ಎಂದು ತಿಳಿಸಿದ್ದಾರೆ. ತನ್ನ ಪತ್ನಿಯನ್ನು ಹುಡುಕಲು ಪ್ರಾರಂಭಿಸಿದಾಗ, ಅವನ ಅಪ್ರಾಪ್ತ ತಮ್ಮ ಕೂಡ ಅದೇ ದಿನದಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಪತ್ನಿ ಮತ್ತು ಅಪ್ರಾಪ್ತ ಮೈದುನ ನಡುವೆ ಪ್ರೇಮ ಸಂಬಂಧವಿತ್ತು ಮತ್ತು ಈಗ ಇಬ್ಬರೂ ಓಡಿಹೋಗಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.
ಇಬ್ಬರು ಮಕ್ಕಳನ್ನು ಬಿಟ್ಟು ಓಡಿಹೋದಳು: ಆಕೆಯ ಪತಿ ಹೇಳುವ ಪ್ರಕಾರ, ತನ್ನ ಪತ್ನಿ ಇಬ್ಬರು ಚಿಕ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಚಿನ್ನಾಭರಣಗಳನ್ನು ತೆಗೆದುಕೊಂಡು ಅಪ್ರಾಪ್ತ ಮೈದುನ ಜೊತೆ ಓಡಿಹೋಗಿದ್ದಾಳೆ. ಪತ್ನಿ ಕೆಲವು ದಿನಗಳ ಹಿಂದೆ ತವರಿನಿಂದ ವಾಪಸ್ ಬಂದಿದ್ದಳು. ಅಂದಿನಿಂದ ಮನೆಯಲ್ಲಿ ಕೋಪ ಮತ್ತು ಜಗಳಗಳು ಹೆಚ್ಚಾಗಿದ್ದವು ಎಂದು ಪತಿ ಹೇಳಿದ್ದಾರೆ. ಈಗ ತನ್ನ ಪತ್ನಿ ಅಪ್ರಾಪ್ತ ಮೈದುನನನ್ನು ಪ್ರೀತಿಸುತ್ತಿದ್ದಳು ಮತ್ತು ಇಬ್ಬರೂ ಮನೆಯಿಂದ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಲಿವ್-ಇನ್ ಪ್ರೇಮಿ ಜೊತೆ ವಂಚನೆ, ನವಜಾತ ಶಿಶು ಜೀವಂತ ಸಮಾಧಿ!
ಪೊಲೀಸರಿಂದ ಶೋಧ ಕಾರ್ಯ: ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಹುಡುಕಲು ಪ್ರಾರಂಭಿಸಿದ್ದಾರೆ. ಭಿತರ್‌ವಾರ್ ಠಾಣಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಇದೀಗ ಮನೆಯಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ಪೊಲೀಸರಿಗೆ ಹೇಗಾದರೂ ಮಾಡಿ ಇಬ್ಬರನ್ನೂ ಹುಡುಕಿಕೊಡಿ. ನಾವು ಅವರಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರುತ್ತೇವೆ ಎಂದು ಕುಟುಂಬಸ್ಥರು ಪೊಲೀಸರ ಮುಂದೆ ಮನವಿ ಮಾಡಿಕೊಂಡಿದ್ದಾರೆ.
