ಒಂದೂವರೆ ವರ್ಷದ ಮಗುವಿನ ಮೇಲೆ ಅಮಾನುಷ ಹಲ್ಲೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್ನಾಗರ್‌ ತೆಹ್ಸಿಲ್‌ನಲ್ಲಿ ಘಟನೆ ತಾಯಿ ವಿರುದ್ಧ ಸ್ವಯಂ ದೂರು ದಾಖಲಿಸಿದ ಮಕ್ಕಳ ಸಹಾಯವಾಣಿ

ಭೋಪಾಲ್‌(ಫೆ.28): ತಾಯಿಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್ನಾಗರ್‌ ತೆಹ್ಸಿಲ್‌ನಲ್ಲಿ ನಡೆದಿದೆ. ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್‌ ಆಗಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಮಗು ಮನೆ ಮುಂದಿನ ಖಾಲಿ ಜಾಗದಲ್ಲಿ ಅಳುತ್ತಾ ಮಲಗಿಕೊಂಡಿದ್ದು, ತಾಯಿಯ ಕೈಯಲ್ಲಿ ಲಟ್ಟಣಿಗೆ ಇದೆ. ಜೋರಾಗಿ ಮಗುವಿಗೆ ಬೈಯುತ್ತಿರುವ ತಾಯಿ ನಂತರ ಮಗುವನ್ನು ಒಂದು ಕೈಯಲ್ಲಿ ಹಿಡಿದು ಎತ್ತಿಕೊಂಡು ಹೋಗಿ ಹೊರಗೆ ಬಿಸಾಕುತ್ತಾಳೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೇ ರಾಷ್ಟ್ರೀಯ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಯಾರೋ ಕರೆ ಮಾಡಿ ಮಗುವಿನ ಮೇಲೆ ತಾಯಿ ಹಲ್ಲೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಕ್ಕಳ ಸಹಾಯವಾಣಿಯವರು ಸ್ವಯಂಪ್ರೇರಿತರಾಗಿ ತಾಯಿ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Scroll to load tweet…

ನಂತರ ಸ್ಥಳಕ್ಕೆ ಭೇಟಿ ನೀಡಿದ ಮಕ್ಕಳ ಸಹಾಯವಾಣಿ ತಂಡ ಸ್ಥಳೀಯರಲ್ಲಿ ವಿಚಾರಿಸಿದಾಗ, ಮಗು ಲತಿಕಾಳ(Latika) ತಂದೆ ಧರ್ಮೆಂದ್ರ ಚೌಹಾಣ್‌(Dharmendra Chauhan) ಜುನಾ ನಗರದ ಬಾಲಾಜಿ ದೇಗುಲದ ಸಮೀಪವೇ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ತಾಯಿ ಕೋಮಲ್‌ (Komal) ಪ್ರತಿದಿನವೂ ಮಗುವಿಗೆ ಅಮಾನುಷವಾಗಿ ಹಲ್ಲೆ ಮಾಡುತ್ತಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ. ನಂತರ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಾಯಿ ಕೋಮಲ್ ವಿರುದ್ಧ ಬದ್ನಾಗರ್‌ (Badnagar) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಸಾಲದ ಹಣದ ವಿಚಾರದಲ್ಲಿ ಜಗಳ.. ಒಂದು ತಿಂಗಳ ಮಗುವಿನ ಮೇಲೆ ಹಲ್ಲೆ

ಆರೈಕೆಗೆ ಬಿಟ್ಟಿದ್ದ ಮಹಿಳೆಯಿಂದಲೇ ಮಗುವಿನ ಮೇಲೆ ಬರ್ಬರ ಹಲ್ಲೆ
ಈ ತಿಂಗಳ ಪ್ರಾರಂಭದಲ್ಲಿ ಮಗುವನ್ನು ನೋಡಿಕೊಳ್ಳಲೆಂದು ನಿಯೋಜಿಸಿದ್ದ ಮಹಿಳೆಯೇ ಎಂಟು ತಿಂಗಳ ಮಗುವಿನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ ಘಟನೆ ಗುಜರಾತ್‌ನಲ್ಲಿ ನಡೆದಿತ್ತು. ಘಟನೆಯಿಂದ ಗಂಭೀರ ಗಾಯಗೊಂಡ ಮಗುವಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಜರಾತ್‌ನ (Gujarat) ಸೂರತ್ (Surat)ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿತ್ತು. ಮಗುವಿನ ಕುಟುಂಬವು ಸೂರತ್‌ನ ರಾಂದರ್ ಪಾಲನ್‌ಪುರ್ ಪಾಟಿಯಾ (Rander Palanpur Patiya)ದಲ್ಲಿ ವಾಸಿಸುತ್ತಿದೆ. ಮಗುವಿನ ಪೋಷಕರು ಇಬ್ಬರೂ ಉದ್ಯೋಗಿಗಳಾಗಿದ್ದು, ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಕೇರ್‌ಟೇಕರ್ ಅನ್ನು ನೇಮಿಸಿಕೊಂಡಿದ್ದರು. ಆದರೆ, ಮಗು ಪೋಷಕರ ಅನುಪಸ್ಥಿತಿಯಲ್ಲಿ ಅಳುತ್ತಿರುವ ಬಗ್ಗೆ ನೆರೆಹೊರೆಯವರು ತಿಳಿಸಿದ ನಂತರ ದಂಪತಿಗಳು ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. 

ಚಡ್ಡಿಯಲ್ಲಿ ಸೂಸು ಮಾಡಿದ ಮಗುವಿಗೆ ಚಾಕುವಿನಿಂದ ಹಲ್ಲೆ

ಇದರಿಂದ ಕೇರ್‌ಟೇಕರ್ ಮಗುವನ್ನು ಅಮಾನುಷವಾಗಿ ಥಳಿಸುವ ದೃಶ್ಯ ಬಯಲಿಗೆ ಬಂದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಮಗುವನ್ನು ನೋಡಿಕೊಳ್ಳುವಾಕೆ ಅವರು ಪದೇ ಪದೇ ಮಗುವಿನ ತಲೆಯನ್ನು ಹಾಸಿಗೆಗೆ ಹೊಡೆಯುತ್ತಿರುವುದು, ಮಗುವಿನ ಕೂದಲನ್ನು ತಿರುಚಿ ಎಳೆಯುವುದು ಯಾವುದೇ ಕರುಣೆ ಇಲ್ಲದೇ ಕ್ರೂರವಾಗಿ ವರ್ತಿಸುವುದನ್ನು ಕಾಣಬಹುದು. ಘಟನೆಯ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯ ಪುಟ್ಟ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.