ಕೆಂಗೇರಿಯ ನಿವಾಸಿಗಳಾದ ಶೋಭಾ ಮತ್ತು ಸತೀಶ್ ದಂಪತಿಯ ಮಗುವಿನ ಮೇಲೆ ಹಲ್ಲೆ

ಬೆಂಗಳೂರು(ಸೆ.11): ಸಾಲದ ದುಡ್ಡು ಕೊಟ್ಟಿಲ್ಲವೆಂದು ಒಂದು ತಿಂಗಳ ಮಗುವಿನ ಮೇಲೆ ಮಹಿಳೆಯೊಬ್ಬಳು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಂಗೇರಿಯ ನಿವಾಸಿಗಳಾದ ಶೋಭಾ ಮತ್ತು ಸತೀಶ್ ದಂಪತಿ ತಮ್ಮ ಮನೆ ಓನರ್ ಸರಸ್ವತಿ ಎಂಬಾಕೆಯ ಮಧ್ಯೆ ಹಣಕಾಸಿನ ವಿಚಾರಕ್ಕೆ ನಿನ್ನೆ ಜಗಳ ನಡೆದಿದೆ. ಈ ವೇಳೆ, ಮೊದಲಿಗೆ ಶೋಭಾ ಮೇಲೆ ಹಲ್ಲೆ ನಡೆಸಿದ ಸರಸ್ವತಿ, ಮಗುವನ್ನೂ ಹೊಡೆದಿದ್ದಾಳೆ. ಇದ್ರಿಂದ, ಮಗುವಿನ ಕಿವಿಯ ಬಳಿ ರಕ್ತ ಹೆಪ್ಪುಗಟ್ಟಿದಂತಾಗಿದೆ. ಹೀಗಾಗಿ, ಪೋಷಕರು ಸರಸ್ವತಿ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.