Asianet Suvarna News Asianet Suvarna News

ಮಗನ ಪ್ರೋತ್ಸಾಹಿಸಲು ಪುಸ್ತಕ ಹಿಡಿದ ಮಹಿಳೆ, ಸರ್ಕಾರಿ ಸೇವೆಗೆ ತಾಯಿ, ಪುತ್ರ ಇಬ್ಬರೂ ಒಟ್ಟಿಗೆ ಸೇರ್ಪಡೆ!

ಮಗನಿಗೆ ಓದಲು ಪ್ರೋತ್ಸಾಹಿಸುವುದಕ್ಕೆ ಪುಸ್ತಕ ಹಿಡಿದ ತಾಯಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದೀಗ ತಾಯಿ ಹಾಗೂ ಮಗ ಜೊತೆಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ. 

Mother and son cleared Kerala public service commission exams set to join Government service together ckm
Author
Bengaluru, First Published Aug 9, 2022, 1:04 PM IST

ಮಲಪ್ಪುರಂ(ಆ.09): ಮಕ್ಕಳು ಕೆಲಸಕ್ಕೆ ಸೇರುವ ವೇಳೆ ಪೋಷಕರು ಖುಷಿ ಪಡುವುದು ಸಹಜ. ಆದರೆ ತನ್ನ ಪುತ್ರ ಕೆಲಸಕ್ಕೆ ಸೇರುವ ವೇಳೆ ಆತನ ತಾಯಿಯೂ ಸರ್ಕಾರಿ ಉದ್ಯೋಗ ಪಡೆದುಕೊಂಡು ಸಂಭ್ರಮಿಸುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. ಬಿಂದು (42) ಎಂಬ ಮಹಿಳೆ, 10ನೇ ತರಗತಿಯಲ್ಲಿರುವಾಗ ಆತನನ್ನು ಓದುವಂತೆ ಪ್ರೋತ್ಸಾಹಿಸಲು ತಾನೂ ಪುಸ್ತಕ ಓದಲು ಆರಂಭಿಸಿದ್ದರು. ಹೀಗೆ ಆರಂಭವಾದ ಪುಸ್ತಕ ಓದುವ ಹವ್ಯಾಸದಿಂದ ಆಕೆ 9 ವರ್ಷಗಳ ಬಳಿಕ ಮಗನ ಜೊತೆಯಲ್ಲೇ ಕೇರಳದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾಳೆ. ಬಿಂದು ಕಡೆಯ ಸ್ತರದ ಸೇವಕರ (ಎಲ್‌ಜಿಎಸ್‌) ಪರೀಕ್ಷೆಯಲ್ಲಿ 92ನೇ ರಾರ‍ಯಂಕ್‌ ಪಡೆದುಕೊಂಡರೆ, 24 ವರ್ಷದ ಆಕೆಯ ಮಗ ಕೆಳ ಸ್ತರದ ವಿಭಾಗೀಯ ಗುಮಾಸ್ತನ ಪರೀಕ್ಷೆಯಲ್ಲಿ 38ನೇ ರಾರ‍ಯಂಕ್‌ ಪಡೆದುಕೊಂಡಿದ್ದಾನೆ. ಬಿಂದು ಕಳೆದ 10 ವರ್ಷಗಳಿಂದಲೂ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಬಿಡುವಿನ ಅವಧಿಯಲ್ಲಿಯೇ ಓದಿ ಬಿಂದು ಈ ಸಾಧನೆ ಮಾಡಿದ್ದಾಳೆ. ‘ಕೆಲಸದ ನಿಮಿತ್ತ ಮಗನೊಂದಿಗೆ ಕೂತು ಓದಲು ಸಾಧ್ಯವಾಗದಿದ್ದರೂ ಇಬ್ಬರು ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಪರೀಕ್ಷೆಯ 6 ತಿಂಗಳ ಮುಂಚೆ ತಾನು ಸಿದ್ಧತೆ ಆರಂಭಿಸಿದ್ದೆ’ ಎಂದು ಬಿಂದು ಹೇಳಿದ್ದಾಳೆ. 3 ವಿಫಲ ಪ್ರಯತ್ನಗಳ ಬಳಿಕ 4ನೇ ಪ್ರಯತ್ನದಲ್ಲಿ ಬಿಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾಳೆ.

‘ನನ್ನ ನಿಜವಾದ ಗುರಿ ಐಸಿಡಿಎಸ್‌ ಮೇಲ್ವಿಚಾರಕರ ಹುದ್ದೆ ಪಡೆಯುವುದಾಗಿತ್ತು ಆದರೆ ಎಲ್‌ಜಿಎಸ್‌ ಆಗಿ ನೇಮಕಾತಿಯಾಗಿದ್ದೇನೆ. ವೈಫಲ್ಯಗಳ ಹೊರತಾಗಿಯೂ ಪ್ರಯತ್ನವನ್ನು ಮುಂದುವರೆಸಿ, ಅಂತಿಮವಾಗಿ ಯಶಸ್ಸು ನಿಮಗೆ ಕಟ್ಟಿಟ್ಟಬುತ್ತಿ’ ಎಂದು ಬಿಂದು ಹೇಳಿದ್ದಾಳೆ.

UPSC Recruitment 2022; ತಾಂತ್ರಿಕ ಸಲಹೆಗಾರ ಸೇರಿ 16 ಹುದ್ದೆಗಳಿಗೆ ನೇಮಕಾತಿ

LGS ಮತ್ತು LDC ಸೇವೆಗೆ ಸೇರಿಕೊಳ್ಳಲು ಸತತ 3 ಬಾರಿ ಪರೀಕ್ಷೆ ಬರೆದು ನಿರಾಸೆ ಅನುಭವಿಸಿದ್ದ ಬಿಂದು ಛಲ ಬಿಡದೇ ನಾಲ್ಕನೇ ಪ್ರಯತ್ನದಲ್ಲಿ 92ನೇ ಶ್ರೇಕಾಂಕದೊಂದಿದೆ ಪಾಸ್ ಆಗಿದ್ದಾರೆ. ಬಿಂದು ಅವರ ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್(ICDS) ಸೇವೆಗೆ ಸೇರಿಕೊಳ್ಳಲು ಬಯಸಿದ್ದರು. ಆದರೆ LGS ಪರೀಕ್ಷೆಯಲ್ಲಿ ಪಾಸ್ ಆಗಿರುವುದು ಬೋನಸ್ ಆಗಿದೆ ಎಂದು ಬಿಂದು ಸಂತಸ ಹಂಚಿಕೊಂಡಿದ್ದಾರೆ.

ಇಬ್ಬರು ಕೇರಳ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡಿರುವುದು ಕುಟುಂಬದ ಸಂತಸ ಇಮ್ಮಡಿಗೊಳಿಸಿದೆ. ಈ ಕುರಿತು ಬಿಂದು ಪತ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತು ತಾಯಿ ಜೊತೆಯಾಗಿ ಓದುತ್ತಿರಲಿಲ್ಲ. ಆದರೆ ಕೆಲ ವಿಷಯಗಳನ್ನು ಚರ್ಚೆ ಮಾಡುತ್ತಿದ್ದೆವು. ತಾಯಿ ಅಂಗವಾಡಿ ಕರ್ತವ್ಯ ಮುಗಿಸಿ ಮನೆಯ ಕೆಲಸಗಳನ್ನು ಮುಗಿಸಿ ಓದುತ್ತಿದ್ದರು. ನನಗೆ ಸಿಕ್ಕಿದ್ದಷ್ಟು ಸಮಯ ತಾಯಿಗೆ ಸಿಕ್ಕಿಲ್ಲ. ಆದರೂ 92ನೇ ರಾರ‍ಯಂಕ್‌ ಪಡೆದುಕೊಂಡಿದ್ದಾರೆ ಎಂದು ಪುತ್ರ ಹೇಳಿದ್ದಾರೆ.

11 ಅಂಕದಿಂದ 10 ವರ್ಷದ ಶ್ರಮ ಬೂದಿಯಾಯ್ತು.. ವೈರಲ್ ಆದ ಐಎಎಸ್ ಆಕಾಂಕ್ಷಿಯ ಟ್ವೀಟ್ !
 

Follow Us:
Download App:
  • android
  • ios