Asianet Suvarna News Asianet Suvarna News

UPSC Recruitment 2022; ತಾಂತ್ರಿಕ ಸಲಹೆಗಾರ ಸೇರಿ 16 ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗವು ತಾಂತ್ರಿಕ ಸಲಹೆಗಾರ, ಸಹಾಯಕ ನಿರ್ದೇಶಕ ಮತ್ತು   ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನವಾಗಿದೆ.

UPSC Recruitment 2022 notification Apply for Technical Advisor and other posts gow
Author
Bengaluru, First Published Jul 25, 2022, 6:08 PM IST

ಬೆಂಗಳೂರು (ಜು.25): ಕೇಂದ್ರ ಲೋಕಸೇವಾ ಆಯೋಗವು ತಾಂತ್ರಿಕ ಸಲಹೆಗಾರ, ಸಹಾಯಕ ನಿರ್ದೇಶಕ ಮತ್ತು   ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಲು ಕೋರಲಾಗಿದೆ. ಒಟ್ಟು 16 ಹುದ್ದೆಗಳು ಖಾಲಿ ಇದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನವಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  ಆಯ್ಕೆಯಾದ ಅಭ್ಯರ್ಥಿಗಳಿ ಉತ್ತಮ ವೇತನ ಕೂಡ ದೊರೆಯಲಿದೆ. ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು, ಹೇಗೆ ಅರ್ಜಿ ಸಲ್ಲಿಸಬೇಕು, ವಯಸ್ಸಿನ ಮಿತಿ, ಶಿಕ್ಷಣ ಮತ್ತು ವಿದ್ಯಾರ್ಹತೆಯ ವಿವರಗಳು ಈ ಕೆಳಗಿನಂತಿದೆ

ಒಟ್ಟು 16 ಹುದ್ದೆಗಳ ಮಾಹಿತಿ ಇಂತಿದೆ
ತಾಂತ್ರಿಕ ಸಲಹೆಗಾರ (ಬಾಯ್ಲರ್): 1 ಹುದ್ದೆ
ಸಹಾಯಕ ನಿರ್ದೇಶಕ: 11 ಹುದ್ದೆಗಳು
ಸಹಾಯಕ ಸ್ಟೋರ್ಸ್ ಅಧಿಕಾರಿ: 1 ಹುದ್ದೆ
ರೀಡರ್: 1 ಪೋಸ್ಟ್
ಹಿರಿಯ ಉಪನ್ಯಾಸಕರು: 2 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:
ತಾಂತ್ರಿಕ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಮಾಡಿರಬೇಕು.

ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ
 ಹಿಂದಿಯನ್ನು ಕಡ್ಡಾಯ ವಿಷಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ; ಅಥವಾ  10+2 ಮಟ್ಟದಲ್ಲಿ ಹಿಂದಿಯನ್ನು ಕಡ್ಡಾಯ ವಿಷಯವಾಗಿ ಹೊಂದಿರುವ ಸ್ನಾತಕೋತ್ತರ ಪದವಿ.
ಹಿಂದಿ ಶೀಘ್ರಲಿಪಿಯಲ್ಲಿ ನಿಮಿಷಕ್ಕೆ 100 ಪದಗಳು ಮತ್ತು ಹಿಂದಿ ಟೈಪ್‌ರೈಟಿಂಗ್‌ನಲ್ಲಿ ನಿಮಿಷಕ್ಕೆ 40 ಪದಗಳ ವೇಗದೊಂದಿಗೆ ಹಿಂದಿ ಸ್ಟೆನೋಗ್ರಫಿಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಒಂದು ವರ್ಷದ ಡಿಪ್ಲೊಮಾ ಅಥವಾ ಹಿಂದಿ ಟೈಪ್ ರೈಟಿಂಗ್ ಮತ್ತು ಹಿಂದಿ ಸ್ಟೆನೋಗ್ರಫಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ರಾಷ್ಟ್ರೀಯ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೇನಿಂಗ್ (NCVT) ಅಡಿಯಲ್ಲಿ ನಡೆಸುವ ಇತರ ಸಂಸ್ಥೆಗಳಿಂದ ಪಡೆದಿರಬೇಕು.

ಸಹಾಯಕ ಸ್ಟೋರ್ಸ್ ಅಧಿಕಾರಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಅರ್ಥಶಾಸ್ತ್ರ ಅಥವಾ ವಾಣಿಜ್ಯ ಅಥವಾ ಅಂಕಿಅಂಶಗಳು ಅಥವಾ ವ್ಯಾಪಾರ ಅಧ್ಯಯನಗಳು ಅಥವಾ ಸಾರ್ವಜನಿಕ ಆಡಳಿತದೊಂದಿಗೆ ಸ್ನಾತಕೋತ್ತರ ಪದವಿ ಅಥವಾ ಪದವಿ.
ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ ಅಥವಾ ವೇರ್‌ಹೌಸಿಂಗ್ ಮ್ಯಾನೇಜ್‌ಮೆಂಟ್ ಅಥವಾ ಖರೀದಿ ಅಥವಾ ಲಾಜಿಸ್ಟಿಕ್ಸ್ ಅಥವಾ ಸಾರ್ವಜನಿಕ ಸಂಗ್ರಹಣೆಯಲ್ಲಿ ಡಿಪ್ಲೊಮಾ ಮಾಡಿರಬೇಕು

ರೀಡರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಜವಳಿ ಸಂಸ್ಕರಣೆ ಅಥವಾ ಜವಳಿ ರಸಾಯನಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ / ಎಂಜಿನಿಯರಿಂಗ್ ಪದವಿ ಮಾಡಿರಬೇಕು.

ಹಿರಿಯ ಉಪನ್ಯಾಸಕರು ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ ಸಂಸ್ಥೆಯಿಂದ  ಎಂ.ಎಸ್. (ಆರ್ಥೋಪೆಡಿಕ್ಸ್), M.D.(ರೇಡಿಯೊಡಯಾಗ್ನೋಸಿಸ್)/ M.D.(ರೇಡಿಯಾಲಜಿ)/ಎಂಎಸ್ (ರೇಡಿಯಾಲಜಿ) ಅಥವಾ ತತ್ಸಮಾನ ಪಡೆದಿರಬೇಕು. ಜೊತೆಗೆ  ಮೂಲ ವಿಶ್ವವಿದ್ಯಾನಿಲಯ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆ, 1956 (102 ಆಫ್ 1956) ಮತ್ತು ರಾಜ್ಯ ವೈದ್ಯಕೀಯ ನೋಂದಣಿ ಅಥವಾ ಭಾರತೀಯ ವೈದ್ಯಕೀಯ ನೋಂದಣಿಯಲ್ಲಿ ನೋಂದಾಯಿಸಿರಬೇಕು.

ಕೋಡಿಂಗ್ ಪಾಸಾದ ಭಾರತದ ಬಾಲಕನಿಗೆ ಭಾರಿ ಆಫರ್: ವಯಸ್ಸು ತಿಳಿದು ಆಫರ್ ವಾಪಸ್ ಪಡೆದ US ಸಂಸ್ಥೆ

ಅರ್ಜಿ ಶುಲ್ಕ: ಅಭ್ಯರ್ಥಿಗಳು  25 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. SBI ಯ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ಬಳಸುವ ಮೂಲಕ ಪಾವತಿಸಬೇಕು. SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

EXIM Bank Recruitment 2022: ಒಟ್ಟು 19 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು  ಆಯ್ಕೆ ಪ್ರಕ್ರಿಯೆಯ 100 ಅಂಕಗಳ ಸಂದರ್ಶನದಲ್ಲಿ  ವರ್ಗಾನುಸಾರ ಅಂಕಗಳನ್ನು ಪಡೆದಿರಬೇಕು. UR/EWS-50 ಅಂಕಗಳು, OBC-45 ಅಂಕಗಳು, SC/ST/PwBD-40 ಅಂಕಗಳು, ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಬಹುದು. 

Follow Us:
Download App:
  • android
  • ios