ಲಕ್ನೋ(ಜ. 01) ಕ್ಯಾಲೆಂಡರ್ ವರ್ಷ ಬದಲಾಗಿದೆ. ಕೊರೋನಾ..ಭೀಕರ ಪ್ರವಾಹಗಳಿಂದ ಜಗತ್ತೇ ನಡುಗಿದ್ದು ಇನ್ನೊಂದು ವರ್ಷಕ್ಕೆ ಕಾಲಿಟ್ಟಿದ್ದೇವೆ.  ಲಸಿಕೆ ನೀಡುವುದು  ಹೊಸ ವರ್ಷದ ಮೊದಲ ಆದ್ಯತೆ ಎಂದು ಉತ್ತರ  ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಆಂಗ್ರ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, 2020 ರಲ್ಲಿ ಎದುರಾದ ಎಲ್ಲ ಸವಾಲುಗಳನ್ನು ನಾವು ಅವಕಾಶಗಳನ್ನಾಗಿ ಪರಿವರ್ತನೆ ಮಾಡಿಕೊಂಡೆವು ಎಂದಿದ್ದಾರೆ. ಲಾಕ್ ಡೌನ್ ಮತ್ತು ನಂತರ ಸ್ಥಿತಿಗಳ ಬಗ್ಗೆ ಅವರದ್ದೇ ಆದ ದಾಟಿಯಲ್ಲಿ ಮಾತನಾಡಿದ್ದಾರೆ.

ಉತ್ತರ ಪ್ರದೇಶದ ಪಠ್ಯದಲ್ಲಿ ಸಿಖ್ ಗುರುಗಳ ಜೀವನ

ನಾವು ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಾಯಿಸಿಕೊಂಡೆವು. ನರೇಂದ್ರ ಮೋದಿ ನೇತೃತ್ವದ ತೀರ್ಮಾನಗಳನ್ನು ಅನುಷ್ಠಾನ ಮಾಡುವುದಕ್ಕೆ ಮೊದಲ ಆದ್ಯತೆ   ನೀಡಿದೆವು.  ನನ್ನ ಸರ್ಕಾರಕ್ಕೆ ಮೂರು ವರ್ಷ ತುಂಬಿದ್ದರೂ ಕೊರೋನಾ ಕಾರಣಕ್ಕೆ ಸಂಭ್ರಮಾಚರಣೆ ಮಾಡಲಿಲ್ಲ.  ನಾವು ರಚನೆ ಮಾಡಿದ್ದ ತಂಡ ಆರಂಭದಿಂದಲೂ ಕೊರೋನಾ ನಿಯಂತ್ರಣಕ್ಕೆ ಒಂದಾದ ಮೇಲೆ ಒಂದು ಕ್ರಮ ತೆಗೆದುಕೊಳ್ಳುತ್ತಾ ಬಂತು.

ಪ್ರಧಾನಿ ಮೋದಿ ಲಾಕ್ ಡೌನ್ ಘೋಷಣೆ ಮಾಡಿದ ದಿನ ನಾವು ಟೀಮ್ 11 ಸಿದ್ಧಮಾಡಿದೆವು.  ಎಲ್ಲ ವಿಭಾಗದ ಜನರನ್ನು ತಂಡ ಒಳಗೊಂಡಿತ್ತು. ಪ್ರತಿದಿನ ಮೀಟಿಂಗ್ ಮಾಡಿ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು.  ವೈರಸ್ ನ್ನು ಮೆಟ್ಟಿ ನಿಲ್ಲಬೇಕು ಎಂದು ನಮ್ಮ ತಂಡಕ್ಕೆ ಸೂಚನೆ ನೀಡಿದ್ದು ಅದನ್ನು ಕಾರ್ಯಗತಮಾಡಿದ ತೃಪ್ತಿಯೂ ಇದೆ ಎಂದು ಯೋಗಿ ಹೇಳುತ್ತಾರೆ.

ಯೋಗಿ ಲವ್ ಜಿಹಾದ್ ವಿರುದ್ಧ ಕಾನೂನು ತಂದಿದ್ದು ಯಾಕೆ?

ವಲಸೆ  ಕಾರ್ಮಿಕರು ತವರಿಗೆ ತಂಡೋಪತಂಡವಾಗಿ ಹಿಂದಿರುಗಿದ್ದು ನನಗೆ ಒಂದು ರೀತಿಯ ಭಾವನಾತ್ಮಕ ಸಂಗತಿ.  ದೆಹಲಿ ಸರ್ಕಾರ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಕಾರ್ಮಿಕರನ್ನು ತನ್ನ ಗಡಿಯಿಂದ ಹೊರ ಹಾಕಿತ್ತು. ಅವರು ತವರಿಗೆ ಮರಳಲು ಯಾವುದೇ ಆಸರೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ನಡೆದುಕೊಂಡು, ಸೈಕಲ್ ಸವಾರಿ ಮಾಡಿಕೊಂಡು ಬರಬೇಕಾದ ಸ್ಥಿತಿಯಲ್ಲಿ ಇದ್ದರು.

ಈ ಸವಾಲನ್ನು ಎದುರಿಸಿದ ನಮ್ಮ ಸರ್ಕಾರ ತಕ್ಷಣ ಯುಪಿಎಸ್‌ಆರ್ ಟಿಸಿ ಬಸ್ ವ್ಯವಸ್ಥೆ ಮಾಡಿ ಅವರಿಗೆ ಆಹಾರ ನೀಡುವ ಕೆಲಸವನ್ನು ಮಾಡಿದೆವು. ಪ್ರಯಾಗ್ ರಾಜ್ ಮತ್ತು ಕೋಟಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವತ್ತು ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡಲಾಯಿತು. ತಬ್ಲಿಘಿಗಳಿಂದಾದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದೆವು ಎಂದು ಯೋಗಿ ವರ್ಷದ ಸವಾಲುಗಳನ್ನು ತಿಳಿಸುತ್ತಾರೆ.

ಇದಲ್ಲದೇ ಮೂವತ್ತಾರು ಲಕ್ಷ ಕಾರ್ಮಿಕರು ದೇಶದ ವಿವಿಧ ಕಡೆಯಿಂದ ಉತ್ತರ ಪ್ರದೇಶಕ್ಕೆ ಬರಬೇಕಾಗಿತ್ತು. ಅವರಿಗೂ ವ್ಯವಸ್ಥೆ ಮಾಡಿದೆವು.. ರೇಶನ್ ನೀಡಿ ಆರೋಗ್ಯ ಕಾಪಾಡಿಕೊಳ್ಳುವ ಸೌಲಭ್ಯವನ್ನು ನೀಡಲಾಯಿತು.  ಸ್ಥಳೀಯ ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ಜನರಿಗೆ ಮರು ಉದ್ಯೋಗ ನೀಡುವ ಕೆಲಸವನ್ನೂ ಮಾಡಲಾಯಿತು.

ಸಮುದಾಯಕ್ಕೆ ಹರಡಿದ್ದ ವೈರಸ್ ಪತ್ತೆ ಮಾಡಿದ್ದು ಅಲ್ಲದೇ ಅಗತ್ಯ ಇದ್ದ ಕಡೆ ಕ್ವಾರಂಟೈನ್ ವ್ಯವಸ್ಥೆ ಮಾಡಿಕೊಡಲಾಯಿತು.

ನಮ್ಮ ವೈದ್ಯಕೀಯ ತಂಡ ಮೊದಲಿನಿಂದಲೂ ಒಂದು ಹೆಜ್ಜೆ ಮುಂದೆ ಇತ್ತು.   ಕೊರೋನಾ ಟೆಸ್ಟಿಂಗ್ ಲ್ಯಾಬ್ ಗಳನ್ನು  2 ರಿಂದ 62ಕ್ಕೆ ಏರಿಕೆ ಮಾಡಲಾಯಿತು. ದಿನಕ್ಕೆ 72 ಕೊರೋನಾ ಕೇಸ್ ಟೆಸ್ಟಿಂಗ್ ಇದ್ದಿದ್ದನ್ನು 1.80  ಲಕ್ಷಕ್ಕೆ ಏರಿಕೆ ಮಾಡಿದೆವು.  ಇದೇ ಕಾರಣಕ್ಕೆ ಒಟ್ಟು  2. 4  ಕೋಟಿ ಟೆಸ್ಟಿಂಗ್ ಸಾಧ್ಯವಾಯಿತು.  ಕೊರೋನಾ ಆರೈಕೆಗಾಗಿಯೇ ವಿಶೇಷ ಆಸ್ಪತ್ರೆಗಳನ್ನು, ಲ್ಯಾಬ್ ಗಳನ್ನು ತೆರೆದೆವು.   ಪ್ರತಿ ಜಿಲ್ಲೆಯಲ್ಲಿ ವೆಂಟಿಲೇಟರ್ ಬೆಡ್ ಗಳ ವ್ಯವಸ್ಥೆ ಮಾಡಲಾಯಿತು.

ವಲಸೆ  ಕಾರ್ಮಿಕರು ವಾಪಸ್ ಬಂದಾಗ ನಮ್ಮ 60,000 ಪಂಚಾಯಿತಿಗಳು ಅವರ ಮೇಲೆ ನಿಗಾ ಇಟ್ಟವು.  ಆರೋಗ್ಯ ಕಾರ್ಯಕರ್ತರಿಗೆ ನೀಡಿದ ವಿಶೇಷ ತರಬೇತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಮೆಚ್ಚಿಕೊಂಡಿತು. ಎರಡನೇ ಅಲೆ  ಕಾಣಿಸಿಕೊಳ್ಳದಂತೆಯೂ ಎಚ್ಚರಿಕೆ ತೆಗೆದುಕೊಂಡೆವು.

ರಾಮ ಮಂದಿರರಕ್ಕೆ ಶಿಲಾನ್ಯಾಸ ಈ ವರ್ಷದ ಅತಿದೊಡ್ಡ ಘಟನೆಗಳಲ್ಲಿ ಒಂದು. ಕೊರೋನಾ ಮುನ್ನೆಚ್ಚರಿಕೆ ತೆಗೆದುಕೊಂಡೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.  ನಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ದೇಶದ ಭಕ್ತರಿಗೂ ಮುಂದಿನ ದಿನಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು.

ವರ್ಷದ ಆರಂಭದಲ್ಲಿ ಎನ್‌ಆರ್ ಸಿ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಗಳು ದಾಖಲಾದವು.  ಇದರ ಹಿಂದೆ ಯಾರ ಕೈವಾಡ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾನೂನಿನ ಅಡಿ ಯಾರೂ ಪೌರತ್ವ ಕಳೆದುಕೊಳ್ಳುವುದಿಲ್ಲ.  ಇಪ್ಪತ್ತು ಜಿಲ್ಲೆಗಳಲ್ಲಿ ಹಿಂಸಾಚಾರ ಕಂಡು ಬಂತು. ನಾವು ಅದನ್ನು ಮೆಟ್ಟಿ ನಿಂತೆವು.

ನಾವು ಹೇಳಿದಂತೆ ಗೋಹತ್ಯೆ ನಿಷೇಧ ಕಾನೂನು ಪಾಸ್ ಮಾಡಿದೆವು.  ಗೋ ರಕ್ಷಣೆಗೆ ಅನೇಕ ಯೋಜನೆ ಜಾರಿ ಮಾಡಿದ್ದು ಅದರ ಸಮರ್ಪಕ ಅನುಷ್ಠಾನವನ್ನು ಕೈಗೆತ್ತಿಕೊಂಡೆವು.

ರಾಮಮಂದಿರ ಕರಸೇವೆಗೆ ಎಲ್ಲರಿಗೂ ಅವಕಾಶ

ಮಹಿಳಾ ಸುರಕ್ಷತೆಗೆ  ರೊಮೀಯೋ ವಿರೋಧಿ ತಂಡ ರಚನೆ ಮಾಡಲಾಯಿತು.  ಬಲವಂತದ ಮತಾಂತರ ಮತ್ತು ಮದುವೆ ವಿರುದ್ಧ  ಕಾನೂನು ಜಾರಿ ಮಾಡಿದೆವು. ಮಹಿಳಾ ಸಬಲೀಕರಣಕ್ಕೆ ಮಿಷನ್ ಶಕ್ತಿ ಯೋಜನೆ ತರಲಾಯಿತು. 58,000 ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಬ್ಯಾಂಕಿಂಗ್ ತರಬೇತಿ ನೀಡಿ ಉದ್ಯೋಗ ಕಲ್ಪಿಸಿಕೊಡಲಾಯಿತು.

ಕ್ರಿಮಿನಲ್ ಗಳು ಮತ್ತು ಮಾಫಿಯಾ ಮಟ್ಟ ಹಾಕಿ ಕೇಸ್ ಬುಕ್ ಮಾಡಲಾಯಿತು. ಸಮಾಜ ವಿರೋಧಿ ಚಟುವಟಿಕೆಗೆ ಬಳಕೆಯಾಗುತ್ತಿದ್ದ  758 ಕೋಟಿ ರೂ. ಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಬಲವಂತದ ಮತಾಂತರ ಮತ್ತು ಮದುವೆಗೆ ಬ್ರೇಕ್ ಹಾಕಲು ಕಾನೂನು ಜಾರಿ ಮಾಡಲಾಗಿದೆ.  ಬಲವಂತದ ಮತಾಂತರಕ್ಕೆ ಸಂಬಂಧಿಸಿ ನೂರಾರು ದೂರುಗಳು ದಾಖಲಾಗುತ್ತಲೆ ಇವೆ.  ಸುಗ್ರೀವಾಜ್ಞೆಗೂ ಮುನ್ನ ಇದೊಂದು ಚೀಟಿಂಗ್ ಕೇಸ್ ಆಗಿತ್ತು. ಆದರೆ ಕಠಿಣ ಕಾನೂನು ತಂದ ಮೇಲೆ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ.

ಕೃಷಿಕರ ಪರವಾಗಿಯೇ ಸರ್ಕಾರ ಸದಾ ನಿಂತಿದೆ. ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ನಿರ್ಧಾರಗಳನ್ನು ಪಾಲಿಸಿಕೊಂಡು ಬರಲಾಗಿದೆ. ದೆಹಲಿ ಗಡಿ ಬಿಟ್ಟರೆ ಬೇರೆ ಎಲ್ಲಿಯೂ ಪ್ರತಿಭಟನೆ ಕಂಡುಬರುತ್ತಿಲ್ಲ.   ಈ ಪ್ರತಿಭಟನೆ ಹಿಂದೆ ದಲ್ಲಾಳಿಗಳು ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯದ ರೈತರೊಂದಿಗೆ ನಿರಂತರವಾಗಿ ಮಾತನಾಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಹಕ್ಕು  ಕಾಪಾಡಿಕೊಂಡೇ ಬಂದಿದ್ದೇವೆ.

ಲಸಿಕೆ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ. ಮೊದಲ ಹಂತಕ್ಕೆ ಸಿದ್ಧವಾಗಿದ್ದು 2.5 ಲೀಟರ್ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಒಂಭತ್ತು ಲಕ್ಷ ಜನ ಆರೋಗ್ಯ ಕಾರ್ಯಕರ್ತರು ಜವಾಬ್ದಾರಿ ಹೊರಲಿದ್ದಾರೆ.

ಕೊರೋನಾ ಲಾಕ್ ಡೌನ್ ಆರ್ಥಿಕ ಹೊಡೆತ ನೀಡಿದೆ. ಕೆಲ ಸಲಹೆಗಳನ್ನು ಅಳವಡಿಕೆ ಮಾಡಿಕೊಂಡ ನಂತರ ನಿಧಾನಕ್ಕೆ ಸುಧಾರಿಸಿಕೊಳ್ಳುತ್ತಿದ್ದೇವೆ. ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲದೇ ವಿದೇಶಿ ಬಂಡವಾಳ  ಹೂಡಿಕೆಗೂ ಅವಕಾಶ ಮಾಡಿಕೊಟ್ಟಿದ್ದೇವೆ.

ಆನ್ ಲೈನ್  ಲೋನ್ ಕ್ಯಾಂಪ್ ಗಳನ್ನು ನಡೆಸಲಾಗಿದೆ. ಎಂಎಸ್‌ ಎಂಇ ಮತ್ತು ಉದ್ಯೋಗ ಖಾತ್ರಿ ಯೋಜನೆ ಬಳಸಸಿಕೊಂಡು ಜನರನ್ನು ಆರ್ಥಿಕ ಸಂಕಷ್ಟದಿಂದ ಹೊರಗೆ ತಂದಿದ್ದೇವೆ.

ಕೊರೋನಾ ಕಾಲದಲ್ಲಿಯೇ 52,000  ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ.  ಚೀನಾವನ್ನು ಬಿಟ್ಟು ಸ್ಯಾಮ್ ಸಂಗ್ ಅಂಥ ಕಂಪನಿ ಉತ್ತರ ಪ್ರದೇಶಕ್ಕೆ ಬಂದಿದೆ.  ದೇಶದ ವಿಚಾರದಲ್ಲಿ ಉತ್ತರ ಪ್ರದೇಶ ವಾಣಿಜ್ಯಕ್ಕೆ ಸಂಬಂಧಿಸಿ ನಂಬರ್ 2  ಪ್ಲೇಸ್ ಗೆ ಬಂದಿದೆ.

ಕಳೆದ ನಾಲ್ಕು ತಿಂಗಳಲ್ಲಿ ಆದಾಯ ಸಂಗ್ರಹಣೆ ಪಾಸಿಟಿವ್ ಆಗಿದೆ. ನೋಯ್ಡಾ ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದೇವೆ.  ನೋಯ್ಡಾದಲ್ಲಿ ಫಿಲ್ಮ್ ಸಿಟಿ ಸಿದ್ಧವಾಗಲಿದೆ. ಪೂರ್ವಾಂಚಲ  ಮತ್ತು ಬುಂದೇಲಖಂಡ ಎಕ್ಸ್ ಪ್ರೆಸ್  ಹೈವೇ  ಕೆಲಸಗಳು ಪ್ರಗತಿಯಲ್ಲಿವೆ. 

ಲಸಿಕೆ  ಎಲ್ಲರಿಗೆ ನೀಡುವುದು ಹೊಸ ವರ್ಷದ ಮೊದಲ ಆದ್ಯತೆ. ಅಭಿವೃದ್ಧಿ ಕೆಲಸಗಳಿಗಿಂತಲೂ ಮುಖ್ಯವಾಗಿ ಜನರ ಆರೋಗ್ಯ ಕಾಪಾಡಿಕೊಳ್ಳಬೇಕು. ರಾಮ ಮಂದಿರ ನಿರ್ಮಾಣ ಮತ್ತಷ್ಟು ಪ್ರಗತಿ ನಡೆಯುತ್ತಲೇ ಇರುತ್ತದೆ.

ರೈತರು, ಮಹಿಳೆಯರು ಮತ್ತು ಯುವಕರ ಅಭಿವೃದ್ಧಿಗೆ ಆದ್ಯತೆ, ನಾಲ್ಕು ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಇನ್ನು ಒಂದು  ಲಕ್ಷ ನಮ್ಮ ಟಾರ್ಗೆಟ್  ಖಾಸಗಿಯಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಿದ್ದೇವೆ ಎಂದು ಯೋಗಿ ಈ ವರ್ಷದ ಗುರಿಗಳನ್ನು ಹೇಳುತ್ತಾರೆ.