ನವದೆಹಲಿ(ಮೇ.01): ಕೊರೋನಾ ವೈರಸ್ ಭಾರತದಲ್ಲಿ ತನ್ನ ಕಬಂದ ಬಾಹು ಚಾಚುತ್ತಿದೆ. ಇಷ್ಟು ದಿನ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೋಂಕು ಹೆಚ್ಚಾಗಿ ತಗಲುತ್ತಿದೆ ಅನ್ನೋ ಅಂಕಿ ಅಂಶ ಇದೀಗ ಬುಡಮೇಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಯುವ ಜನತೆಯಲ್ಲೇ ಹೆಚ್ಚಾಗಿ ಕೊರೋನಾ ವೈರಸ್‌ ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ ಯುವ ಜನತೆಯನ್ನು ಹೆಚ್ಚು ಬಲಿ ಪಡೆಯುತ್ತಿದೆ.

ಮೇ 17ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಏನಿರುತ್ತೆ.? ಏನಿರೋಲ್ಲ...?.

ಭಾರತದಲ್ಲಿ ಕೊರೋನಾಗೆ ಬಲಿಯಾದವರ ಪೈಕಿ ಶೇಕಡಾ 50 ರಷ್ಟು ಮಂದಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಆರೋಗ್ಯ ಇಲಾಖೆ ನೂತನ ವರದಿ ಬಹಿರಂಗ ಮಾಡಿದೆ. ಹೀಗಾಗಿ ಆರೋಗ್ಯವಾಗಿದ್ದೇನೆ ಎಂದು ಸುಖಾಸುಮ್ಮನೆ ತಿರುಗಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದನ್ನು ಗಮನದಲ್ಲಿಡಬೇಕು. 

ನಿಮ್ಗೆ ಕರೆ ಮಾಡುವವರೆಲ್ಲಾ ಬೆಳದಿಂಗಳ ಬಾಲೆ ಆಗಿರೋದಿಲ್ಲ; ಬೆಂಗ್ಳೂರು ಪೊಲೀಸ್ರಿಂದ ಎಚ್ಚರಿಕೆ!.

ಭಾರತದಲ್ಲಿ ಕೊರೋನಾ ವೈರಸ್‌ಗೆ 1075 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ 18ರ ಅಂಕಿಅಂಶಗಳ ಪ್ರಕಾರ 45-60 ವರ್ಷಗಳ ವಯೋಮಾನದವರ ಸಾವು ಶೇ 10.3 ಇತ್ತು  ಆದ್ರೆ 10 ದಿನಗಳ ಅವಧಿಯಲ್ಲಿ ಸಾವಿನ ಸಂಖ್ಯೆ ಶೇ 34.8 ಏರಿಕೆಯಾಗಿರೋದು ಆತಂಕ ಹೆಚ್ಚಿಸಿದೆ. ಕೊರೋನಾ ಬಲಿ ಪಡೆದವರ ವಯೋಮಾನದ ವಿವರ ಇಲ್ಲಿದೆ.

ಕೊರೋನಾಗೆ ಬಲಿಯಾದವರ ವಯಸ್ಸಿನ ವಿವರ:
ಶೇ.14 ರಷ್ಟು ಮಂದಿ 45 ವರ್ಷಕ್ಕೂ ಕೆಳಗಿನವರು
ಶೇ 34.8 ರಷ್ಟು ಮಂದಿ 45 ರಿಂದ 60 ವರ್ಷದೊಳಗಿನವರು
ಶೇ 42 ರಷ್ಟು ಮಂದಿ 60 ರಿಂದ 75 ವರ್ಷದೊಳಗಿನವರು
ಶೇ 9.2 ರಷ್ಟು ಮಂದಿ 75 ಮೇಲಿನ ವಯಸ್ಸಿನವರು 

ಆರೋಗ್ಯ ಇಲಾಖೆ ಮಾಹಿತಿ ಇದೀಗ ಯುವ ಜನತೆಗೂ ಎಚ್ಚರಿಕೆ ಕರೆಗಂಟೆಯಾಗಿದೆ. ಇತ್ತ ಕೇಂದ್ರ ಸರ್ಕಾರ ಲಾಕ್‌ಡೌನ್ ಮೇ.17ರ ವರೆಗೆ ವಿಸ್ತರಿಸಿದೆ. ಹೀಗಾಗಿ ಪರಿಸ್ಥಿತಿಯ ಗಂಭೀರತೆ ಅರಿತರೆ ಕೊರೋನಾ ವೈರಸ್ ತಡೆಯುವಲ್ಲಿ ಸಹಕಾರಿಯಾಗಲಿದೆ.