Asianet Suvarna News Asianet Suvarna News

ದೇಶದಲ್ಲಿ ಮತ್ತೆ ಏರುತ್ತಿದೆ ಸೋಂಕು : ಸತತ 3ನೇ ದಿನ 40,000ಕ್ಕೂ ಹೆಚ್ಚು ಕೇಸ್‌

  • ಕೊರೋನಾ 3ನೇ ಅಲೆಯ ಆತಂಕದಲ್ಲಿರುವ ದೇಶದಲ್ಲಿ ಶುಕ್ರವಾರ ಕೋವಿಡ್‌ ಸೋಂಕಿತರ ಸಂಖ್ಯೆ ಭಾರಿ ಏರಿಕೆ
  • ಒಂದೇ ದಿನ 44,230 ಹೊಸ ಪ್ರಕರಣಗಳು ಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ
  • ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷವನ್ನು ದಾಟಿದೆ
More than 40 thousand Cases reported in 3rd days in india snr
Author
Bengaluru, First Published Jul 31, 2021, 8:28 AM IST

 ನವದೆಹಲಿ (ಜು.31):  ಕೊರೋನಾ 3ನೇ ಅಲೆಯ ಆತಂಕದಲ್ಲಿರುವ ದೇಶದಲ್ಲಿ ಶುಕ್ರವಾರ ಕೋವಿಡ್‌ ಸೋಂಕಿತರ ಸಂಖ್ಯೆ ಭಾರಿ ಏರಿಕೆಯಾಗಿದ್ದು, 44,230 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರೊಂದಿಗೆ, ಸತತ 3ನೇ ದಿನವೂ ದೇಶದಲ್ಲಿ 40,000ಕ್ಕೂ ಅಧಿಕ ಪ್ರಕರಣ ಪತ್ತೆಯಾದಂತಾಗಿದೆ. ಶುಕ್ರವಾರ ಒಟ್ಟು 555 ಜನರು ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಪತ್ತೆಯಾದ 44,230 ಕೇಸು ಕಳೆದ ಮೂರು ವಾರದ ಗರಿಷ್ಠವಾಗಿದೆ. ಅದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷವನ್ನು ದಾಟಿದೆ. ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕೋವಿಡ್‌ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅದರ ಪರಿಣಾಮ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚತೊಡಗಿದೆ.

ಕೇರಳದಲ್ಲಿ ಕೊರೋನಾ ಭಾರಿ ಏರಿಕೆ : ಕರ್ನಾಟದಲ್ಲಿ ಹೈ ಅಲರ್ಟ್

ಇನ್ನು, ಪ್ರತಿ 100 ಜನರಿಂದ ಎಷ್ಟುಜನರಿಗೆ ಕೋವಿಡ್‌ ಹರಡುತ್ತಿದೆ ಎಂಬುದನ್ನು ಅಳೆಯುವ ಮಾನದಂಡವಾದ ಆರ್‌ ವ್ಯಾಲ್ಯೂ ಕೂಡ ಕೇರಳ ಮತ್ತು ಈಶಾನ್ಯದಲ್ಲಿ ಏರಿಕೆಯಾಗಿ 1.11ನ್ನು ತಲುಪಿದೆ. ಇದು ಆತಂಕಕಾರಿ ಸಂಖ್ಯೆ ಎಂದು ತಜ್ಞರು ಹೇಳಿದ್ದಾರೆ. ಆರ್‌ ವ್ಯಾಲ್ಯೂ 1ಕ್ಕಿಂತ ಕಡಿಮೆಯಿದ್ದರೆ 100 ಜನರಿಂದ 100ಕ್ಕಿಂತ ಕಡಿಮೆ ಜನರಿಗೆ ಸೋಂಕು ಹರಡುತ್ತದೆ. ಆಗ ಸೋಂಕಿತರ ಸಂಖ್ಯೆ ಬೇಗ ಹೆಚ್ಚಳವಾಗುವುದಿಲ್ಲ. ಆರ್‌ ವ್ಯಾಲ್ಯೂ 1ಕ್ಕಿಂತ ಹೆಚ್ಚಿದ್ದರೆ ಸೋಂಕು ಅತ್ಯಂತ ವೇಗವಾಗಿ ಹರಡುತ್ತದೆ.

ಶುಕ್ರವಾರ ದೇಶದಲ್ಲಿ 18 ಲಕ್ಷ ಟೆಸ್ಟ್‌ಗಳು ನಡೆದಿವೆ. ಪಾಸಿಟಿವಿಟಿ ದರ ಶೇ.2.44 ಇದೆ. ಮರಣ ದರ ಶೇ.1.34 ಇದೆ.

Follow Us:
Download App:
  • android
  • ios