ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಮುಖವಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 34,113 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 42 ದಿನದ ಕನಿಷ್ಠ.

ನವದೆಹಲಿ (ಫೆ.15): ದೇಶದಲ್ಲಿ (India) ಕೊರೋನಾ ಪ್ರಕರಣಗಳ (Corona Cases) ಸಂಖ್ಯೆ ಮತ್ತಷ್ಟುಇಳಿಮುಖವಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 34,113 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 42 ದಿನದ ಕನಿಷ್ಠ. ಇದೇ ಅವಧಿಯಲ್ಲಿ 346 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು 27 ದಿನದ ಕನಿಷ್ಠ.

ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 4.78 ಲಕ್ಷಕ್ಕೆ ಕುಸಿದಿದೆ. ಇದು 37 ದಿನಗಳ ಕನಿಷ್ಠ. ಚೇತರಿಕೆ ಪ್ರಮಾಣ ಶೇ.97.68ಕ್ಕೆ ಏರಿಕೆಯಾಗಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.3.19ರಷ್ಟಿದೆ. ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.26 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 5,09,011ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 4.16 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ದೇಶಾದ್ಯಂತ 172.95 ಕೋಟಿ ಡೋಸ್‌ ಲಸಿಕೆ (Covid Vaccine) ವಿತರಣೆ ಮಾಡಲಾಗಿದೆ.

Covid Crisis: 50 ಸಾವಿರಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸು: 40 ದಿನಗಳ ಕನಿಷ್ಠ

ಮಾಸ್ಕ್‌ ಕಡ್ಡಾಯ ನಿಯಮ ರದ್ದತಿಗೆ ಮಹಾರಾಷ್ಟ್ರ ಚಿಂತನೆ: ದೇಶದಲ್ಲಿ ಕೊರೋನಾ(Coronavirus) ಸೋಂಕಿನ ಅಬ್ಬರ ಮತ್ತಷ್ಟು ತಗ್ಗಿದೆ. ಪಾಸಿಟಿವಿಟಿ ದರ(Positivity Rate) ಶೇ.5ಕ್ಕಿಂತ ಕೆಳಕ್ಕಿಳಿದು, ಶೇ.3.47ರಷ್ಟು ದಾಖಲಾಗಿದೆ. ಶುಕ್ರವಾರ 58,077 ಕೋವಿಡ್‌ ಕೇಸ್‌ಗಳು ದೃಢಪಟ್ಟಿವೆ. ಕರ್ನಾಟಕದಲ್ಲೂ(Karnataka) ಪಾಸಿಟಿವಿಟಿ ದರ ಶೇ.3.47ಕ್ಕೆ ಇಳಿದಿದ್ದು, 3976 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌(Covid-19) ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೂರದ ಸ್ವೀಡನ್‌ ಸರ್ಕಾರ(Government of Sweden) ಸೋಂಕು ಪತ್ತೆ ಪರೀಕ್ಷೆಯನ್ನೇ ಕೈಬಿಟ್ಟಿದ್ದರೆ ಇತ್ತ ಮಹಾರಾಷ್ಟ್ರ ಸರ್ಕಾರ(Government of Maharashtra) ರಾಜ್ಯದಲ್ಲಿ ಮಾಸ್ಕ್‌(Mask) ಧರಿಸುವುದನ್ನು ಕಡ್ಡಾಯ ಎಂಬ ನಿಯಮ ಕೈಬಿಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ಅದು ಇಂಥ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. 

ಈ ಕುರಿತು ಶುಕ್ರವಾರ ಮಾತನಾಡಿದ ರಾಜ್ಯದ ಆರೋಗ್ಯ ಸಚಿವ ಆರೋಗ್ಯ ಸಚಿವ ರಾಜೇಶ್‌ ಟೋಪೆ(Rajesh Tope), ಬ್ರಿಟನ್‌(Britain) ಸೇರಿ ಇತರೆ ದೇಶಗಳಲ್ಲಿ ಈಗಾಗಲೇ ಜನರು ಮಾಸ್ಕ್‌ ಇಲ್ಲದೆ ಸ್ವತಂತ್ರವಾಗಿ ಓಡಾಡಲು ಅವಕಾಶ ನೀಡಲಾಗಿದೆ. ಈ ಕುರಿತು ನಾವು ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ. ಆ ದೇಶಗಳಲ್ಲಿ ಇದು ಸಾಧ್ಯವಾಗಿದ್ದು ಹೇಗೆ ಎಂಬ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. 

Covid Crisis: 1.27 ಲಕ್ಷ ಕೋವಿಡ್‌ ಕೇಸು ದಾಖಲು: 1 ತಿಂಗಳ ಕನಿಷ್ಠ

ಜೊತೆಗೆ ಕೋವಿಡ್‌ ಕೇಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ ನಿಯಮ ಕೈಬಿಡುವ ಸಂಬಂಧ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಕೋವಿಡ್‌ ಕಾರ‍್ಯಪಡೆಯಿಂದ ಮಾಹಿತಿ ಕೋರಲಾಗಿದೆ ಎಂದು ತಿಳಿಸಿದ್ದಾರೆ.ಮಹಾರಾಷ್ಟ್ರದಲ್ಲಿ ಬುಧವಾರ 7142, ಗುರುವಾರ 6248 ಕೋವಿಡ್‌ ಕೇಸ್‌ಗಳು ಪತ್ತೆಯಾಗಿದ್ದವು.

ಕೋವಿಡ್ ಕೇಸು ಇಳಿಕೆ: ಈವ​ರೆಗೆ ದೈನಂದಿ​ನ ಹೆಚ್ಚು ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸು​ತ್ತಿದ್ದ ಕರ್ನಾ​ಟಕ, ಮಹಾ​ರಾಷ್ಟ್ರ ಸೇರಿ​ದಂತೆ ದೇಶದ 34 ರಾಜ್ಯ​ಗ​ಳಲ್ಲಿ ಕೊರೋನಾ ವೈರ​ಸ್ಸಿನ ತೀವ್ರತೆ ಗಣ​ನೀಯ ಪ್ರಮಾ​ಣ​ದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿ​ಟಿ​ವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯ​ಗ​ಳಲ್ಲಿ ಹೆಚ್ಚು ಕೋವಿಡ್‌ ಪ್ರಕ​ರ​ಣ​ಗಳು ದಾಖ​ಲಾ​ಗು​ತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿ​ಸಿದೆ. ದೇಶದ ಒಟ್ಟಾರೆ ಜಿಲ್ಲೆ​ಗಳ ಪೈಕಿ 268 ಜಿಲ್ಲೆ​ಗ​ಳಲ್ಲಿ ಕೋವಿಡ್‌ ಪಾಸಿ​ಟಿ​ವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿ​ಣಾ​ಮ​ಕಾರಿ ಲಸಿಕೆ ಅಭಿ​ಯಾ​ನದಿಂದಾಗಿ ಕೋವಿ​ಡ್‌ಗೆ ಬಲಿ​ಯಾ​ಗುವವರ ಸಂಖ್ಯೆ ನಿಯಂತ್ರ​ಣಕ್ಕೆ ಬಂದಿದೆ.