ನವದೆಹಲಿ(ಡಿ.27): ಫ್ರಾನ್ಸ್‌ನಿಂದ ಮತ್ತೆ ಮೂರು ರಫೇಲ್‌ ಯುದ್ಧ ವಿಮಾನಗಳು ಜನವರಿಯಲ್ಲಿ ಭಾರತಕ್ಕೆ ಆಗಮಿಸಲಿವೆ. ಈ ಮೂಲಕ ವಾಯು ಪಡೆಯಲ್ಲಿ ರಫೇಲ್‌ ವಿಮಾನಗಳ ಸಂಖ್ಯೆ 11ಕ್ಕೆ ಏರಿಕೆ ಆಗಲಿದೆ. ಇದರಿಂದಾಗಿ ಲಡಾಖ್‌ನಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಇನ್ನಷ್ಟುಬಲ ದೊರೆಯಲಿದೆ.

59,000 ಕೋಟಿ ರು. ವೆಚ್ಚದಲ್ಲಿ ಫ್ರಾನ್ಸ್‌ನಿಂದ ಭಾರತ ಒಟ್ಟು 36 ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಮೊದಲ ಕಂತಿನಲ್ಲಿ 5 ಯುದ್ಧ ವಿಮಾನಗಳು ಜು.29ರಂದು ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದವು.

ಭಾರತೀಯ ವಾಯುಸೇನಾ ದಿನ: ಹಿಂಡನ್ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಬಲ ಪ್ರದರ್ಶನ!

ಬಳಿಕ ಎರಡನೇ ಕಂತಿನಲ್ಲಿ ಮೂರು ವಿಮಾನಗಳು ನವೆಂಬರ್‌ನಲ್ಲಿ ಗುಜರಾತಿನ ಜಾಮ್‌ನಗರ ವಾಯುನೆಲೆಗೆ ಬಂದಿದ್ದವು. 2022ರ ವೇಳೆಗೆ ಎಲ್ಲಾ 36 ರಫೇಲ್‌ ವಿಮಾನಗಳು ಭಾರತೀಯ ವಾಯುಪಡೆಯ ಬತ್ತಳಿಕೆಯನ್ನು ಸೇರಲಿವೆ.

ಫ್ರಾನ್ಸ್‌ ನಿರ್ಮಿತ ಇನ್ನೂ ಮೂರು ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು ನವೆಂಬರ್‌ನಲ್ಲಿ ಆಗಮಿಸಿತ್ತು. ಫ್ರಾನ್ಸ್‌ನ ಇಸ್ಟೆ್ರಸ್‌ ವಾಯುನೆಲೆಯಿಂದ ಪಯಣ ಆರಂಭಿಸಿದ ಈ ಮೂರು ಯುದ್ಧ ವಿಮಾನಗಳು ಎಲ್ಲೂ ನಿಲುಗಡೆಯಾಗದೆ ದಾಖಲೆಯ 6852 ಕಿ.ಮೀ(3700 ನಾಟಿಕಲ್‌ ಮೈಲ್‌) ಕ್ರಮಿಸಿ ಭಾರತದ ನೆಲದಲ್ಲಿ ಲ್ಯಾಂಡ್‌ ಆಗಿದ್ದವು.