ಹಿಂಡನ್(ಅ.08): ಭಾರತೀಯ ವಾಯುಸೇನೆಗೆ ಇಂದು ವಿಶೇಷ ದಿನ, ಇಂದು ನಮ್ಮ ವಾಯುಪಡೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಘಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ಆಯೋಜಿಸಲಾಗಿದೆ. ಈ ವಿಶೇಷ ಪರೇಡ್‌ನಲ್ಲಿ ಭಾರತೀಯ ಯೋಧರು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಲೋಹದ ಹಕ್ಕಿಗಳ ಸಾಹಸ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ.
ರಿಗೂ ತಿಳಿದಿರುವ 

ಇನ್ನು ಈ ವರ್ಷದ ವಿಶೇಷ ಪರೇಡ್ ಪ್ರಮುಖ ಆಕರ್ಷಣೆ ರಫೇಲ್ ಯುದ್ಧ ವಿಮಾನ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇನ್ನು ಈ ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜ| ಮನೋಜ್ ಮುಕುಂದ್ ನರಾವಣೆ ಮತ್ತು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಕೂಡಾ ಭಾಗಿಯಾಗಿದ್ದಾರೆ.

ಭಾರತೀಯ ವಾಯುಸೇನಾ ದಿನವನ್ನು 1932, ಅಕ್ಟೋಬರ್‌ 8 ರಂದು ಮೊದಲ ಬಾರಿ ಆಚರಿಸಲಾಯಿತು. ಇದಾದ ಬಳಿಕ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ನೆರೆ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್‌ ವಿಜಯ್‌, ಆಪರೇಷನ್‌ ಮೇಘದೂತ್‌, ಆಪರೇಷನ್‌ ಕ್ಯಾಕ್ಟಸ್‌, ಆಪರೇಷನ್‌ ಪೂಮಲೈ, ಆಪರೇಷನ್‌ ರಾಹತ್‌ ಇತ್ಯಾದಿಗಳು ಅತ್ಯಂತ ಪ್ರಮುಖವಾಗಿವೆ.