ಬಿಜೆಪಿ ಅಶ್ವಮೇಧ ಯಾಗ ಕಟ್ಟಿಹಾಕುತ್ತಾ ‘INDIA’? ಈಗ ಲೋಕಸಭೆ ಚುನಾವಣೆ ನಡೆದ್ರೆ ಗೆಲ್ಲೋದು ಇವರೇ..!

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 306 ಸ್ಥಾನಗಳನ್ನು ಗೆಲ್ಲುತ್ತದೆ. ಹಾಗೂ ವಿಪಕ್ಷಗಳ ‘INDIA’ ಮೈತ್ರಿಕೂಟ 193 ಸ್ಥಾನಗಳನ್ನು ಗಳಿಸಲಿದೆ.

mood of the nation nda sweep again if polls held today but india sees jump ash

ನವದೆಹಲಿ (ಆಗಸ್ಟ್‌ 24, 2023): ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದ್ರೂ, ಮುಂಬರುವ ಲೋಕಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸುತ್ತಿದೆ. ಈಗಾಗಲೇ ಸಾಕಷ್ಟು ಸಮೀಕ್ಷೆಗಳು ಸಹ ನಡೆಯುತ್ತಿದೆ. ಈಗ ಅದೇ ರೀತಿ, ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ನಿಖರವಾಗಿ ಹೇಳಿದ್ದ ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಲೋಕಸಭೆ ಚುನಾವಣೆ ಬಗ್ಗೆ ಭವಿಷ್ಯ ನುಡಿದಿದ. ಅವರು ಹೇಳೊದೇನ, ಗೆಲ್ಲೋದು ಎನ್‌ಡಿಎನೋ ಅಥವಾ ‘INDIA’ ಮೈತ್ರಿಕೂಟನೋ ಅಂತೀರಾ..?

ಇಂದು ಸಂಸತ್ತಿಗೆ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಚುಕ್ಕಾಣಿ ಹಿಡಿದಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) 306 ಸ್ಥಾನಗಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ. ಒಂದು ರಾಜಕೀಯ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 272 ಅನ್ನು ಎನ್‌ಡಿಎ ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಇದನ್ನು ಓದಿ: ‘ಲೋಕ’ ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌: ಶೀಘ್ರದಲ್ಲೇ ಎಲ್‌ಪಿಜಿ ಬೆಲೆ ಇಳಿಕೆ, ರೈತರ ಖಾತೆಗೆ ಪರಿಹಾರ ಧನ ಹೆಚ್ಚಳ!

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 306 ಸ್ಥಾನಗಳನ್ನು ಗೆಲ್ಲುತ್ತದೆ. ಹಾಗೂ ವಿಪಕ್ಷಗಳ ‘INDIA’ ಮೈತ್ರಿಕೂಟ 193 ಸ್ಥಾನಗಳನ್ನು ಗಳಿಸಲಿದೆ ಮತ್ತು ಇತರ ರಾಜಕೀಯ ಪಕ್ಷಗಳು 44 ಸ್ಥಾನಗಳನ್ನು ಗಳಿಸಲಿವೆ.  2023 ರ ಜನವರಿಯಲ್ಲಿ ಹಿಂದಿನ ಮೂಡ್ ಆಫ್ ದಿ ನೇಷನ್ ಸಮೀಕ್ಷೆಗಿಂತ ಈಗಿನ ಸರ್ವೇ ಪ್ರಕಾರ ಎನ್‌ಡಿಎ 8 ಸ್ಥಾನಗಳನ್ನು ಹೆಚ್ಚು ಗಳಿಸಲಿದೆ. ಆದರೂ ಇದು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ NDA ವಾಸ್ತವವಾಗಿ ಗೆದ್ದ 357 ಸ್ಥಾನಗಳಿಗಿಂತ ಕಡಿಮೆಯಾಗಿದೆ.

ಈ ಮಧ್ಯೆ, ಹೊಸದಾಗಿ ರೂಪುಗೊಂಡ ‘INDIA’ ಮೈತ್ರಿಕೂಟದ ಅಂದಾಜು ಸೀಟ್‌ ಶೇರ್‌ನಲ್ಲಿ ಭಾರಿ ಏರಿಕೆಯನ್ನು ತೋರಿಸಿದೆ. ಜನವರಿಯ ಸಮೀಕ್ಷೆಯ ವೇಳೆ ಮೈತ್ರಿಕೂಟ 153 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿತ್ತು. ಈಗ, ಸಮೀಕ್ಷೆಯ ಆಗಸ್ಟ್ ಆವೃತ್ತಿಯು ಸೀಟು ಹಂಚಿಕೆಯನ್ನು 193 ಕ್ಕೆ ನೀಡಿದೆ.

ಇದನ್ನೂ ಓದಿ: ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ವಾರಾಣಸಿಯಲ್ಲಿ ನಿಂತ್ರೆ ಗೆಲ್ಲೋದು ಇವ್ರೇ ಎಂದ ಶಿವಸೇನಾ ನಾಯಕ!

ಇನ್ನೊಂದೆಡೆ, ಮತ ಹಂಚಿಕೆಗೆ ಸಂಬಂಧಿಸಿದಂತೆ, ಇಂದು ಚುನಾವಣೆ ನಡೆದರೆ ಎನ್‌ಡಿಎ ಶೇಕಡಾ 43 ರಷ್ಟು ಮತಗಳನ್ನು ಗೆಲ್ಲುತ್ತದೆ. ಆದರೆ INDIA’ ಮೈತ್ರಿಕೂಟ ಶೇಕಡಾ 41 ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಕಂಡುಕೊಂಡಿದೆ.

ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟು ಸ್ಥಾನ?
ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಭಾರತೀಯ ಜನತಾ ಪಕ್ಷ (ಬಿಜೆಪಿ) 287 ಸಂಸತ್ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಇದು 272 ರ ಸರಳ ಬಹುಮತಕ್ಕೆ ಅಗತ್ಯಕ್ಕಿಂತ 15 ಹೆಚ್ಚು. ಇನ್ನು, ಕಾಂಗ್ರೆಸ್ 74 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಕೇಂದ್ರ ಸಚಿವ ಭಗವಂತ್‌ ಖೂಬಾಗೆ ಮತ್ತೊಂದು ಶಾಕ್!

ಸಮೀಕ್ಷೆಯ ಸ್ಯಾಂಪಲ್!
ಎಲ್ಲಾ ರಾಜ್ಯಗಳಲ್ಲಿ ಒಟ್ಟು 25,951 ಜನರನ್ನು ಸಮೀಕ್ಷೆ ವೇಳೆ ಸಂದರ್ಶಿಸಲಾಗಿದೆ. ಹಾಗೂ, ಸಾಮಾನ್ಯ ಟ್ರ್ಯಾಕರ್ ಡೇಟಾದಿಂದ ಹೆಚ್ಚುವರಿ 1,34,487 ಸಂದರ್ಶನಗಳನ್ನು ವಿಶ್ಲೇಷಿಸಲಾಗಿದ್ದು, ಒಟ್ಟು ಮಾದರಿ ಗಾತ್ರವನ್ನು 1,60,438 ಎಂದು ತಿಳಿದುಬಂದಿದೆ. ಹಾಗೂ, ಜುಲೈ 15 ಮತ್ತು ಆಗಸ್ಟ್ 14 ರ ನಡುವೆ ಈ ಸಂದರ್ಶನಗಳನ್ನು ನಡೆಸಲಾಗಿದೆ.
 

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

Latest Videos
Follow Us:
Download App:
  • android
  • ios