Asianet Suvarna News Asianet Suvarna News

ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip kerala cpm rajasthan bjp queen congress target 100 opposition leader ash
Author
First Published Aug 13, 2023, 1:20 PM IST

ಹೆಣ್ಮಕ್ಕಳೇ ಸ್ಟ್ರಾಂಗು ಗುರು!
ಸಂಸತ್ತಿನಲ್ಲಿ ನಡೆಯೋ ಅಧಿವೇಶನಗಳಲ್ಲಿ ಸಂಸದ್ ಟಿವಿ ಮತ್ತು ಇತರೆಡೆಗಳಲ್ಲಿ ನೇರಪ್ರಸಾರವಾದ ಚರ್ಚೆಗಳಿಗಿಂತ ನೈಜ-ರಾಜಕೀಯ ಕುರಿತು ಹೆಚ್ಚಿನದನ್ನು ಬಹಿರಂಗಪಡಿಸುತ್ತವೆ. ಅವಿಶ್ವಾಸ ನಿರ್ಣಯದ ಚರ್ಚೆಯ ಸಮಯದಲ್ಲಿ, ಡಿಎಂಕೆ ಆದೇಶವನ್ನು ಸ್ಪಷ್ಟವಾಗಿ ನೋಡಬಹುದು. ಸೋನಿಯಾಗಾಂಧಿಯವರು ಕುಳಿತುಕೊಂಡು ತಮ್ಮ ಪಕ್ಷದವರಿಗೆ ಕೂಗಾಡಲು ಅಥವಾ ಕುಳಿತುಕೊಳ್ಳಲು ಅಥವಾ ಹೊರನಡೆಯಲು ಸನ್ನೆ ಮಾಡುತ್ತಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ ಸೋನಿಯಾ ಪಕ್ಕದಲ್ಲಿ ಮಾರನ್ 1ನೇ ಸಾಲಿನಲ್ಲಿ ಕುಳಿತಿದ್ದರೂ 2ನೇ ಸಾಲಿನಲ್ಲಿ ಕೂರುವ ಕನಿಮೊಳಿ ಡಿಎಂಕೆ ಸಂಸದರಲ್ಲಿ ಪ್ರಮುಖ ನಾಯಕಿ ಎನಿಸಿಕೊಂಡಿದ್ದಾರೆ. 

ಪ್ರಧಾನ ಮಂತ್ರಿ ಮತ್ತು ಇತರರು ಮಾತನಾಡುವಾಗ, ಕನಿಮೊಳಿ ಆದೇಶದಂತೆ ಮಾರನ್‌ ಘೋಷಣೆ ಅಥವಾ ಸನ್ನೆ ಮಾಡುತ್ತಿದ್ರು. ಸೋನಿಯಾ ಗಾಂಧಿ ವಿರೋಧ ಪಕ್ಷದ ಅನಭಿಷಿಕ್ತ ರಾಣಿಯಾಗಿ ಮುಂದುವರಿದಿದ್ದಾರೆ. ಇನ್ನು, ಕನಿಮೋಳಿಯಾಗಲಿ, ಸುಪ್ರಿಯಾ ಸುಳೆಯಾಗಲಿ ಅಥವಾ ಯಾವುದೇ ವಿರೋಧ ಪಕ್ಷವನ್ನು ಮುನ್ನಡೆಸುವ ಯಾರೇ ಆಗಿರಲಿ, ಅವರ ಗಮನ ಸೆಳೆಯುವುದೇ ಆನಂದ!

ಇದನ್ನು ಓದಿ: ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!
 
ರಾಣಿಯಿಂದ್ಲೇ ಚೆಕ್‌ಮೇಟ್‌!
ಕಳೆದ ವಾರ ಬಿಜೆಪಿ ರಾಜಸ್ಥಾನ ಮತ್ತು ನೆರೆಯ ರಾಜ್ಯಗಳ ಸಂಸದರ ಸಭೆ ಕರೆದಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಸಂಸದರಲ್ಲದ ರಾಜಸ್ಥಾನದ ಹಿರಿಯ ಮಹಿಳಾ ನಾಯಕಿಯನ್ನು ದೆಹಲಿಗೆ ವಿಶೇಷವಾಗಿ ಆಹ್ವಾನಿಸಲಾಗಿತ್ತು. ಪಕ್ಷದ ಇಬ್ಬರು ಉನ್ನತ ನಾಯಕರು ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ವದಂತಿಗಳು ಹೆಚ್ಚಾದವು. ವಾಸ್ತವವಾಗಿ, ಇಬ್ಬರು ನಾಯಕರು ಅವರೊಂದಿಗಿನ ಚರ್ಚೆಯ ನಂತರ ಸಭೆಯಿಂದ ನಿರ್ಗಮಿಸಿದರು.

ಇದು ರಾಜಸ್ಥಾನ ಚುನಾವಣೆಗೆ ತಯಾರಿ ನಡೆಸುತ್ತಿರುವಂತೆಯೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲಾಗುವುದು ಎಂಬ ಊಹಾಪೋಹವನ್ನು ಬಲಪಡಿಸಿದೆ. ಗೆಹ್ಲೋಟ್ ಸರ್ಕಾರ ಆರಂಭಿಸಿರುವ ಅನೇಕ ಕಲ್ಯಾಣ ಕ್ರಮಗಳನ್ನು ಎದುರಿಸಲು ಬಿಜೆಪಿಗೆ ಪ್ರಬಲ ಮುಖದ ಅವಶ್ಯಕತೆ ಇದೆ.

ಇದನ್ನೂ ಓದಿ: ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!
 
ಟಾರ್ಗೆಟ್‌ 100!
2024 ಲೋಕಸಭೆ ಚುನಾವಣೆಯಲ್ಲಿ ರಾಜ್ಯಕ್ಕೆ 20 ಸೀಟುಗಳ ಟಾರ್ಗೆಟ್‌ ಅನ್ನು ಕಾಂಗ್ರೆಸ್‌ ನೀಡಿದ್ದು, ಒಟ್ಟಾರೆ ದೇಶದಲ್ಲಿ ಕನಿಷ್ಠ 100 ಸ್ಥಾನಗಳ ಗೆಲುವಿನ ಗುರಿಯನ್ನೂ ಹಾಕಿಕೊಂಡಿದೆ. 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಅನುಕಂಪದ ಅಲೆಯ ಮೇಲೆ ಸುಮಾರು 400 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಗಮನಾರ್ಹ ವಿಜಯ ಸಾಧಿಸಿತು. ಆದರೆ ಸುಮಾರು ನಾಲ್ಕು ದಶಕಗಳ ನಂತರ, ಅದರ ಸ್ಥಾನ ತುಂಬಾ ಕಡಿಮೆಯಾಗಿದೆ. 

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಬಿಜೆಪಿಯ ಸವಾಲನ್ನು ಎದುರಿಸಬೇಕಿದೆ. ಇನ್ನು, ದೆಹಲಿಯಲ್ಲಿನ ರಾಜಕೀಯ ಚಿತ್ರಣವನ್ನು ಬದಲಿಸಲು ಕಾಂಗ್ರೆಸ್ ಪಕ್ಷವು ನೇರವಾಗಿ ಕೇಸರಿ ಪಕ್ಷದ ವಿರುದ್ಧ ಸ್ಪರ್ಧಿಸುವ ರಾಜ್ಯಗಳಲ್ಲಿ ಗೆಲುವನ್ನು ಖಚಿತಪಡಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಜಂಟಿ ಹೋರಾಟದಲ್ಲಿ ತೊಡಗಿದ್ದು, ಈ ಟೆಸ್ಟ್‌ ಪಂದ್ಯದಲ್ಲಿ  (ಲೋಕಸಭೆ ಚುನಾವಣೆಯಲ್ಲಿ) 100 ರನ್ ಗಳಿಸಲು ವಿಫಲವಾದರೆ ಪಕ್ಷವು ಚೌಕಾಶಿ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. 

ಇದನ್ನೂ ಓದಿ: ರಾಜ್ಯದಲ್ಲಿ ‘ಕೈ’ ಗೆಲ್ಲಿಸಿದ್ರೂ ಸುನೀಲ್‌ ಕನುಗೋಲಿಗೆ ತೆಲಂಗಾಣದಿಂದ ಗೇಟ್‌ಪಾಸ್‌: 3 ಭೂಕಂಪವಾದ್ರೂ ಇವರಿಗೆ ಎಚ್ಚರನೇ ಆಗಿಲ್ಲ!

ಹ್ಯಾಂಡ್ಸ್-ಫ್ರೀ ಲಂಚ

ನೀವು ``Howzzattt!'' ಎಂದು ಕಿರುಚುವ ಮೊದಲು, ದಯವಿಟ್ಟು ಕೇರಳದ ಯುಡಿಎಫ್ ನಾಯಕರ ಇತ್ತೀಚಿನ ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಒಡೆತನದ ಕಂಪನಿ ಮತ್ತು ಕೊಚ್ಚಿನ್ ಮಿನರಲ್ಸ್ ನಡುವಿನ ಹಣಕಾಸು ವ್ಯವಹಾರದ ಆರೋಪವನ್ನು ಪ್ರತಿಪಕ್ಷಗಳು ಸಹ ವಿಧಾನಸಭೆಯಲ್ಲಿ ಏಕೆ ಎತ್ತುತ್ತಿಲ್ಲ ಎಂಬುದನ್ನು ವಿವರಿಸಲು ಎಲ್ಲಾ ಪ್ರಮುಖ ನಾಯಕರು ಹೆಣಗಾಡುತ್ತಿರುವುದನ್ನು ಕಾಣಬಹುದು.

ಆದಾಯ ತೆರಿಗೆ ಟ್ರಿಬ್ಯೂನ್ ನೀಡಿದ ಇತ್ಯರ್ಥ ತೀರ್ಪಿನ ದಾಖಲೆಗಳಲ್ಲಿ ವೀಣಾ ಕಂಪನಿಗೆ  1.72 ಕೋಟಿ ರೂ. ಪಾವತಿಸಿದ ಬಗ್ಗೆ ದಾಖಲೆಯಿದೆ. ಈ ಪಾವತಿಗೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿದೆ. ಆದರೆ, ಪ್ರತಿಪಕ್ಷಗಳು ಸಹ ಈ ಬಗ್ಗೆ ಮೌನವಾಗಿವೆ. ಇದಕ್ಕೆ ಕಾರಣ ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಕಮ್ಯುನಿಸ್ಟ್ ಪಕ್ಷದ ಎಲ್ಲಾ ನಾಯಕರ ಸಂಕ್ಷಿಪ್ತ ರೂಪಗಳುಳ್ಳ ಡೈರಿಯಂತಾಗಿದೆ. ಈ ಡೈರಿ ಬಗ್ಗೆ ಪ್ರಶ್ನಿಸಿದಾಗ ಮುಸ್ಲಿಂ ಲೀಗ್ ನಾಯಕ ಪಿ ಕೆ ಕುನ್ಹಾಲಿಕುಟ್ಟಿ (ಡೈರಿಯಲ್ಲಿ ಕೆಕೆ ಎಂದು ಉಲ್ಲೇಖಿಸಲಾಗಿದೆ) ಅವರು ```ಪಕ್ಷದ ಪರವಾಗಿ ಪಾವತಿಗಳನ್ನು ಸ್ವೀಕರಿಸಿದ್ದೇನೆ'' ಎಂದು ಒಪ್ಪಿಕೊಂಡರು. `ಆದರೆ, ನಾನು ಆ ಹಣವನ್ನು ನನ್ನ ಕೈಯಿಂದ ಮುಟ್ಟಿಲ್ಲ’’ ಎಂದು ಹೇಳಿದ್ದರು.

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಚಾಟ್‌ ಜಿಪಿಟಿ ಫಾರ್ಮುಲಾ: ತಮಿಳುನಾಡಲ್ಲಿ ಅಣ್ಣಾಮಲೈ ‘ಚೆನ್ನೈ ಎಕ್ಸ್‌ಪ್ರೆಸ್‌’ ರಾಜಕೀಯ!

ಇದೇ ರೀತಿ, ``ಕೊಚ್ಚಿನ್ ಮಿನರಲ್ಸ್ ಮಾಲೀಕರು ಕಳ್ಳಸಾಗಣೆದಾರರಲ್ಲ. ಹಾಗಾದರೆ ಅವರಿಂದ ಧನಸಹಾಯ ಅಥವಾ ದೇಣಿಗೆ ಸ್ವೀಕರಿಸುವುದರಲ್ಲಿ ತಪ್ಪೇನು? ಅಂತಹ ಹಣವಿಲ್ಲದೆ ನಾವು ರಾಜಕೀಯ ಪಕ್ಷವನ್ನು ನಡೆಸುತ್ತೇವೆ ಎಂದು ನೀವು ಹೇಗೆ ಭಾವಿಸುತ್ತೀರಿ? ಎಂದು ಪ್ರತಿಪಕ್ಷದ ನಾಯಕ ವಿ ಡಿ ಸತೀಶನ್ ಅವರು ಸಮರ್ಥನೆ ಮಾಡಿದ್ದಾರೆ. 

ಇಲ್ಮೆನೈಟ್ ಗಣಿಗಾರಿಕೆ ಆರೋಪದ ನಂತರ ಕೊಚ್ಚಿನ್ ಮಿನರಲ್ಸ್ ಕಂಪನಿಯ ಮೇಲೆ ಅನೇಕ ಆರೋಪಗಳಿದ್ದರೂ, ಇಡಿ ಮತ್ತು ಐಟಿ ಈ ಕಂಪನಿಯ ಮೇಲೆ ರೇಡ್‌ ಮಾಡುವವರೆಗೂ ದಾಖಲೆಯಲ್ಲಿ ಏನೂ ಕಂಡುಬಂದಿಲ್ಲ. ಇದು ಬಯಲಾದ ನಂತರವೂ, ಸಿಪಿಎಂ ಈ ಒಪ್ಪಂದವು ``ಎರಡು ಕಂಪನಿಗಳ'' ನಡುವೆ ನಡೆದಿದ್ದು, ಮಾಧ್ಯಮಗಳು ಸಿಎಂ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. Howzzattt?

ಇದನ್ನೂ ಓದಿ: ಈ ಪಕ್ಷದ ಸಭೆಗಳಲ್ಲಿ ಮೊಬೈಲ್‌ ಬ್ಯಾನ್ ಆತಂಕ; ಕಾಂಗ್ರೆಸ್‌ - ಎಡಪಕ್ಷದ ನಡುವೆ ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ!

Follow Us:
Download App:
  • android
  • ios