ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ವಾರಾಣಸಿಯಲ್ಲಿ ನಿಂತ್ರೆ ಗೆಲ್ಲೋದು ಇವ್ರೇ ಎಂದ ಶಿವಸೇನಾ ನಾಯಕ!
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು ಗೆಲ್ಲುವುದು ಖಚಿತ ಎಂದು ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ವಾರಾಣಸಿ (ಆಗಸ್ಟ್ 14, 2023): ಗಾಂಧಿ ಕುಟುಂಬದ ಮತ್ತೊಂದು ಕುಡಿ ಲೋಕಸಭೆ ಚುನಾವಣೆ 2024 ರ ಮೂಲಕ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಎಂಟ್ರಿಯಾಗೋದು ಪಕ್ಕಾ ಆಗಲಿದೆ ಎನ್ನಲಾಗ್ತಿದೆ. ಪ್ರಿಯಾಂಕಾ ಗಾಂಧಿ ರಾಜಕೀಯ ಎಂಟ್ರಿ ಬಗ್ಗೆ ಸ್ವತ: ಪತಿ ರಾಬರ್ಟ್ ವಾದ್ರಾ ಸುಳಿವು ಕೊಟ್ಟಿದ್ದಾರೆ. ಇನ್ನು, ವಾರಾಣಸಿಯಲ್ಲಿ ಅಂದ್ರೆ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಅಖಾಡಕ್ಕಿಳೀತಾರಾ ಎಂಬ ಮಾತೂ ಕೇಳಿ ಬರುತ್ತಿದೆ. ಇದನ್ನು ನಾವ್ ಹೇಳ್ತಿರೋದಲ್ಲ. ‘INDIA’ ಮೈತ್ರಿಕೂಟದ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಹೇಳಿರೋದು ಕೇಳಿ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರು ಗೆಲ್ಲುವುದು ಖಚಿತ ಎಂದು ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ವಾರಾಣಸಿ ಜನತೆಗೆ ಪ್ರಿಯಾಂಕಾ ಗಾಂಧಿ ಬೇಕಾಗಿದ್ದಾರೆ. ವಾರಾಣಸಿ, ರಾಯ್‌ಬರೇಲಿ, ವಾರಣಾಸಿ ಮತ್ತು ಅಮೇಥಿ ಹೋರಾಟ ಬಿಜೆಪಿಗೆ ಕಠಿಣವಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನು ಓದಿ: 50% ಕಮಿಷನ್ ಆರೋಪ: ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು
ಇನ್ನು, ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾದರೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅಜಿತ್ ಪವಾರ್ ಭೇಟಿಯ ಊಹಾಪೋಹಗಳ ಬಗ್ಗೆ ಮಾತನಾಡಿದ ಶಿವಸೇನಾ (ಯುಬಿಟಿ) ನಾಯಕ, "ನವಾಜ್ ಷರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಬಹುದಾದರೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು? ನಮಗೆ ಮಾಧ್ಯಮಗಳಿಂದ ತಿಳಿಯುತ್ತದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ನಿನ್ನೆ ಭೇಟಿಯಾದರು, ಶರದ್ ಪವಾರ್ ಶೀಘ್ರದಲ್ಲೇ ಅದರ ಬಗ್ಗೆ ಮಾತನಾಡುತ್ತಾರೆ. ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು ‘INDIA’ಬ್ಲಾಕ್ ಸಭೆಗೆ ಆಹ್ವಾನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಲ್ಲದೆ, ಮಹಾರಾಷ್ಟ್ರದ ಇಬ್ಬರೂ ಉಪ ಮುಖ್ಯಮಂತ್ರಿಗಳು ಸಹ ಈ ಪ್ರಸ್ತುತ ಸರ್ಕಾರದ ಬಗ್ಗೆ ಸಂತೋಷವಾಗಿಲ್ಲ ಎಂದು ಸಂಜಯ್ ರಾವತ್ ಹೇಳಿದರು. "ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ಮತ್ತು ಮಹಾರಾಷ್ಟ್ರದ ಜನರು ಈ ಪ್ರಸ್ತುತ ಸರ್ಕಾರದಿಂದ ಸಂತೋಷವಾಗಿಲ್ಲ" ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ
.
ಈ ಮಧ್ಯೆ, ಭಾನುವಾರ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಜಿತ್ ಪವಾರ್ ಅವರೊಂದಿಗಿನ 'ರಹಸ್ಯ ಸಭೆ' ಕುರಿತು ಕೇಳಿದಾಗ, ಇಬ್ಬರಲ್ಲಿ ಒಬ್ಬರ ನಿವಾಸದಲ್ಲಿ ಸಭೆ ನಡೆದಾಗ ಅದು ಹೇಗೆ ರಹಸ್ಯವಾಗುತ್ತದೆ ಎಂದು ಶರದ್ ಪವಾರ್ ಕೇಳಿದ್ದಾರೆ. ಹಾಗೂ, "ನನ್ನ ಸೋದರಳಿಯನನ್ನು ಭೇಟಿ ಮಾಡುವುದರಲ್ಲಿ ಏನು ತಪ್ಪಾಗಿದೆ? ಅದು ಯಾರೊಬ್ಬರ ನಿವಾಸದಲ್ಲಿ ನಡೆದಾಗ ಅದು ಹೇಗೆ ರಹಸ್ಯವಾಗುತ್ತದೆ. ನಾನು ಅವರ ನಿವಾಸದಲ್ಲಿದ್ದೆ" ಎಂದೂ ಶರದ್ ಪವಾರ್ ಹೇಳಿದ್ದಾರೆ.
Party Rounds: ಪ್ರಿಯಾಂಕ ಗಾಂಧಿಗಾಗಿ ಕರ್ನಾಟಕದಲ್ಲಿ ಸೇಫ್ ಕ್ಷೇತ್ರ ಹುಡುಕಾಡ್ತಿರೋ ಕಾಂಗ್ರೆಸ್ ಹೈಕಮಾಂಡ್!