ದೇವರ ಸ್ವರೂಪ ಎನ್ನಿಸಿದ ಮಗು ಹಾಗೂ ವಾನರ ಜೊತೆಯಾದಾಗ ಹೇಗಿರುತ್ತೆ. ಆ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವೀಡಿಯೊಗಳನ್ನು ಒಂದಾದ ನಂತರ ಒಂದು ನೋಡುವುದಕ್ಕಿಂತ ಹೆಚ್ಚು ಸಂತೋಷಕರ ವಿಚಾರ ಪ್ರಾಣಿಪ್ರಿಯರ ಪಾಲಿಗೆ ಬೇರಿಲ್ಲ. ಆನ್‌ಲೈನ್‌ನಲ್ಲಿ ಪ್ರಾಣಿಗಳ ಮುದ್ದಾದ ವೀಡಿಯೊಗಳನ್ನು ಆಗಾಗ ನೋಡುತ್ತೇವೆ ಮತ್ತು ಪ್ರಾಣಿಗಳೊಂದಿಗೆ ಆಡುವ ಮಕ್ಕಳನ್ನು ನೋಡುವಾಗ ನಮ್ಮ ಫೋನ್‌ಗಳನ್ನು ಕೆಳಗೆ ಇಡುವುದಕ್ಕೂ ಮನಸ್ಸು ಬರುವುದಿಲ್ಲ. ಹಾಗೆಯೇ ಇಲ್ಲೊಂದು ಮಗು ಹಾಗೂ ಕೋತಿಗಳ ಒಡನಾಟದ ವಿಡಿಯೋವೊಂದು ವೈರಲ್ ಆಗಿದೆ. ಮಕ್ಕಳು ದೇವರ ಸ್ವರೂಪ ಹಾಗೆಯೇ ಕೋತಿಗಳನ್ನು ಕೂಡ ದೇವರ ಸ್ವರೂಪ ಎಂದು ಸನಾತನ ಧರ್ಮೀಯರು ಪೂಜೆ ಮಾಡುತ್ತಾರೆ. ಆದರೆ ದೇವರ ಸ್ವರೂಪ ಎನ್ನಿಸಿದ ಮಗು ಹಾಗೂ ವಾನರ ಜೊತೆಯಾದಾಗ ಹೇಗಿರುತ್ತೆ. ಆ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಮಗುವೊಂದು ದೇವಸ್ಥಾನದ ಪ್ರಾಂಗಣದ ನೆಲದ ಮೇಲೆ ಕುಳಿತಿದೆ. ಈ ವೇಳೆ ಅಲ್ಲಿಗೆ ಒಂದೊಂದಾಗಿ ಬರುವ ಕೋತಿಗಳು ಮಗುವಿನ ಸಮೀಪ ಬಂದು ಮಗುವನ್ನು ಮಾತನಾಡಿಸಲು ಪ್ರಯತ್ನಿಸುತ್ತವೆ. ಈ ವೇಳೆ ಮಗುವೂ ಕೂಡ ಕೋತಿಗಳು ಬಂತೆಂದು ಅಳದೇ ಅವುಗಳತ್ತಲೇ ನೋಡುತ್ತದೆ. ಒಂದಾಂದ ಮೇಲೆ ಒಂದರಂತೆ ಒಟ್ಟು ನಾಲ್ಕು ಕೋತಿಗಳು ಅಲ್ಲಿ ಬಂದು ಸೇರಿದ್ದು, ಒಂದು ಕೋತಿ ಮಗುವನ್ನು ಮೂಸಿ ನೋಡಿ ಹಣೆಗೆ ಮುತ್ತಿಕ್ಕುತ್ತದೆ. ಈ ವೇಳೆ ಮಗುವು ಕೋತಿಗಳತ್ತ ಕೈ ನೀಡಿದ್ದು, ಕೋತಿಯೊಂದು ಮಗುವಿನ ಕೈ ಹಿಡಿದು ಎಳೆಯುತ್ತ ಆಟವಾಡಲು ನೋಡುತ್ತದೆ.
ಬೀದಿ ನಾಯಿಗಳಿಂದ ನಾಯಿಮರಿ ರಕ್ಷಿಸಿ ಮಗುವಂತೆ ಸಲಹುವ ಕೋತಿ
ಅಲ್ಲದೇ ಈ ಮಗುವು ಮಂಗಗಳನ್ನು ನೋಡುವಾಗ ಭಯ ಅಥವಾ ಆತಂಕದ ಲಕ್ಷಣಗಳನ್ನು ತೋರಿಸುವುದಿಲ್ಲ, ಸಾಂದರ್ಭಿಕವಾಗಿ ಅವುಗಳನ್ನು ಮುದ್ದಿಸುತ್ತದೆ. ಮಂಗಗಳು ಅಂಬೆಗಾಲಿಡುವ ಮಗುವಿನ ಜೊತೆ ಶಾಂತವಾಗಿ, ಮೃದುವಾಗಿ ವರ್ತಿಸುತ್ತವೆ. ಅಲ್ಲದೇ ಕೋತಿಗಳಲ್ಲೊಂದು ಮಗುವಿನ ಪಾದಗಳನ್ನು ಸ್ಪರ್ಶಿಸುವುದನ್ನು ಸಹ ವೀಡಿಯೊದ ಕೊನೆಯ ಕೆಲವು ಸೆಕೆಂಡುಗಳಲ್ಲಿ ರೆಕಾರ್ಡ್ ಮಾಡಲಾಗಿದೆ.
ಈ ವಿಡಿಯೋ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ. ಕೆಲವರು ಭಗವಾನ್ ರಾಮ ಮತ್ತು ಹನುಮಾನ್ ನಡುವೆ ಈ ವಿಡಿಯೋವನ್ನು ಹೋಲಿಕೆ ಮಾಡಿದ್ದಾರೆ. ಆದರೆ ಕೆಲವರು ಕೋತಿಗಳ ಜೊತೆ ಮಗುವನ್ನು ಬಿಟ್ಟ ಪೋಷಕರ ವಿರುದ್ಧ ಅಜಾಗರೂಕತೆಯ ಆರೋಪ ಮಾಡಿದ್ದಾರೆ. ಒಂದು ವೀಡಿಯೊಗಾಗಿ ಪೋಷಕರು ಮೂರ್ಖತನ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಈ ವಿಡಿಯೋವನ್ನು 17 ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಕರುಳ ಕುಡಿಯ ರಕ್ಷಣೆಗಾಗಿ ಜೀವವನ್ನೇ ಪಣಕಿಟ್ಟ ತಾಯಿ ಕೋತಿ... ವೈರಲ್ ವೀಡಿಯೋ