ಕೋತಿಯೊಂದು ಅಡುಗೆ ಮಾಡಲು ಮಹಿಳೆಗೆ ಸಹಾಯ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನವದೆಹಲಿ (ಫೆ.21): ಕೋತಿಯೊಂದು ಮಹಿಳೆಯೊಬ್ಬರಿಗೆ ಅಡುಗೆ ಮಾಡಲು ತರಕಾರಿಗಳನ್ನು ಕೊಯ್ದು ಕೊಡುತ್ತಿರುವಂತಿರುವ 1 ನಿಮಿಷದಷ್ಟಿರುವ ವಿಡಿಯೋವೊಂದನ್ನು ಅಮನ್‌ ಪ್ರೀತ್‌ ಎಂಬ ಟ್ವೀಟರ್‌ ಬಳಕೆದಾರ ಹಂಚಿಕೊಂಡಿದ್ದಾರೆ. 

ಮಹಿಳೆ ಮನಸ್ಸು ಮಾಡಿದರೆ ಕೋತಿಯಿಂದಲೂ ಕೆಲಸ ಮಾಡಿಸುತ್ತಾರೆ. 

ಬಿಯರ್ ಕುಡಿದು ನ್ಯೂ ಇಯರ್ ಪಾರ್ಟಿಮಾಡಿದ ಕೋತಿಗಳು..! ...

ಇದು ಮಹಿಳೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಮಹಿಳೆಯರು ಉತ್ತಮ ನಿರ್ವಹಣಾಕಾರರು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ ಎಂಬ ಸೇರಿದಂತೆ ಹಲವು ಕಾಮೆಂಟ್‌ಗಳ ಸರಮಾಲೆಯೇ ಹರಿದುಬಂದಿವೆ. ಅಲ್ಲದೆ, ಈ ವಿಡಿಯೋ ಭಾರೀ ವೈರಲ್‌ ಆಗಿದೆ.