Asianet Suvarna News Asianet Suvarna News

ಅಬಕಾರಿ ಹಗರಣ: ಬಂಧಿತ ಎಎಪಿ ಶಾಸಕ ಸಂಜಯ ಸಿಂಗ್‌ 5 ದಿನ ಇ.ಡಿ. ಕಸ್ಟಡಿಗೆ

ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆಮ್ ಆದ್ಮಿ ಪಕ್ಷದ (ಆಪ್‌) ನಾಯಕ ಸಂಜಯ್ ಸಿಂಗ್ ಅವರನ್ನು ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ದೆಹಲಿ ವಿಶೇಷ ಇ.ಡಿ. ನ್ಯಾಯಾಲಯ  ಆದೇಶ ಹೊರಡಿಸಿದೆ.

money laundering case related to the Delhi Excise scam arrested AAP leader Sanjay Singh handed over to custody of the ED for five days akb
Author
First Published Oct 6, 2023, 7:14 AM IST

ನವದೆಹಲಿ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆಮ್ ಆದ್ಮಿ ಪಕ್ಷದ (ಆಪ್‌) ನಾಯಕ ಸಂಜಯ್ ಸಿಂಗ್ ಅವರನ್ನು ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ದೆಹಲಿ ವಿಶೇಷ ಇ.ಡಿ. ನ್ಯಾಯಾಲಯ  ಆದೇಶ ಹೊರಡಿಸಿದೆ.

ಮದ್ಯ ಉದ್ಯಮಿ ದಿನೇಶ್‌ ಅರೋರಾ (Liquor businessman Dinesh Arora)ಅವರು ಸಿಂಗ್‌ ಅವರಿಗೆ 3 ಕೋಟಿ ರು. ನೀಡಿದ್ದರು ಮತ್ತು ಈ ಮೊತ್ತವು ದೆಹಲಿ ಮದ್ಯ ನೀತಿ ಪ್ರಕರಣದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗ್‌ ಅವರ ವಿಚಾರಣೆ ಅಗತ್ಯವಾಗಿದ್ದು, 10 ದಿನ ಕಾಲ ವಶಕ್ಕೆ ನೀಡಬೇಕು ಎಂದು ಕೋರ್ಟ್‌ಗೆ ಇ.ಡಿ. (ಜಾರಿ ನಿರ್ದೇಶನಾಲಯ) ಮನವಿ ಮಾಡಿತು. ಆದರೆ ಇದನ್ನು ಸಂಜಯ ಸಿಂಗ್‌ (Sanjay Singh) ವಿರೋಧಿಸಿ, ಆರೋಪಗಳೆಲ್ಲ ನಿರಾಧಾರ ಎಂದರು. ಕೊನೆಗೆ ಅ.10ರವರೆಗೆ (5 ದಿನ ಕಾಲ) ಇ.ಡಿ. ವಶಕ್ಕೆ ಸಿಂಗ್‌ರನ್ನು ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿತು. ಈ ನಡುವೆ, ಕೋರ್ಟ್‌ ಹೊರಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಂಜಯ ಸಿಂಗ್‌, ‘ಇದು ಮೋದಿ ಅವರ ಅನ್ಯಾಯ. ಅವರು ಚುನಾವಣೆಯಲ್ಲಿ ಸೋಲುತ್ತಾರೆ ನೋಡುತ್ತಿರಿ’ ಎಂದು ಕಿಡಿಕಾರಿದರು.

 ಸಂಜಯ್‌ ಮನೇಲಿ ನಯಾ ಪೈಸೆ ಕೂಡ ಸಿಗಲಿಲ್ಲ: ಆಪ್‌ ಸಚಿವೆ ಅತಿಶಿ

ನವದೆಹಲಿ: ಅಬಕಾರಿ ಹಗರಣಕ್ಕೆ (Excise scam) ಸಂಬಂಧಿಸಿ ಜಾರಿ ನಿರ್ದೇಶನಾಲಯದ ದಾಳಿಗೆ ಒಳಗಾಗಿ ಬಂಧಿತರಾದ ಆಪ್‌ ಸಂಸದ ಸಂಜಯ್‌ ಸಿಂಗ್‌ ಮನೆಯಲ್ಲಿ ‘ನಯಾ ಪೈಸೆ ಕೂಡ ಸಿಗಲಿಲ್ಲ’ ಎಂದು ಆಪ್(Aam Aadmi Party) ಸಚಿವೆ ಅತಿಶಿ ಹೇಳಿದ್ದಾರೆ. ಬಂಧನವನ್ನು ಖಂಡಿಸಿ ಮಾತನಾಡಿದ ಅವರು,‘ಇ.ಡಿ. ಸಂಜಯ್‌ ಅವರ ನಿವಾಸದ ಮೂಲೆ ಮೂಲೆಯನ್ನು ಪರಿಶೀಲಿಸಿದೆ. ಆದರೆ ಅವರಿಗೆ ಯಾವುದೇ ದಾಖಲೆಗಳು ಲಭಿಸಿಲ್ಲ. ಒಂದು ವೇಳೆ ಸಾಕ್ಷಿ ದೊರೆತಿದ್ದರೆ, ಅದನ್ನು ಜನರೆದುರು ಬಿಜೆಪಿ ತೋರಿಸಲಿ’ ಎಂದು ಆಗ್ರಹಿಸಿದರು. ಇಲ್ಲವಾದರೆ ರಾಜಕೀಯದಿಂದ ಹಿಂದೆ ಸರಿಯುವಂತೆ ಸವಾಲೆಸೆದರು.

ಈ ವೇಳೆ ಬಿಜೆಪಿಯ ಭ್ರಷ್ಟಾಚಾರವನ್ನು ತೋರಿಸುವವರ ವಿರುದ್ಧ ಕೇಂದ್ರ ಸರ್ಕಾರ ಇ.ಡಿ.(Directorate of Enforcement) ಮೂಲಕ ದಾಳಿ ನಡೆಸಿ ಸತ್ಯವನ್ನು ಮುಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಎನ್‌ಡಿಎಗೆ 18, ಕಾಂಗ್ರೆಸ್‌ಗೆ 10 ಸ್ಥಾನ, ಸಮೀಕ್ಷೆ

ಸಂಜಯ್‌ ಮೇಲಿನ ಆರೋಪವೇನು?

ದಿಲ್ಲಿ ಮದ್ಯ ಹಗರಣದಲ್ಲಿ ಸಂಜಯ ಸಿಂಗ್‌ ಪಾತ್ರ ಇದೆ ಎಂಬುದು ಇ.ಡಿ. ಆರೋಪ. 2020ರಲ್ಲಿ ದಿನೇಶ್ ಅರೋರಾ ಎಂಬ ಅಬಕಾರಿ ಮಧ್ಯವರ್ತಿಯೊಬ್ಬ ಅಬಕಾರಿ ಗುತ್ತಿಗೆ ಬಗ್ಗೆ ಮಾತುಕತೆ ನಡೆಸಲು ಪಾರ್ಟಿಯೊಂದರ ವೇಳೆ ಸಂಜಯ ಸಿಂಗ್‌ರನ್ನು ಭೇಟಿಯಾಗಿದ್ದ. ದೆಹಲಿ ವಿಧಾನಸಭಾ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಹಣ ಸಂಗ್ರಹಿಸಿ ಕೊಡಲು ಬಾರ್‌-ರೆಸ್ಟೋರೆಂಟ್ ಮಾಲೀಕರನ್ನು ಕೇಳುವಂತೆ ಅರೋರಾಗೆ ಸಿಂಗ್‌ ವಿನಂತಿಸಿದ್ದರು. ಆಗ ಪಕ್ಷದ ನಿಧಿಗೆ 82 ಲಕ್ಷ ರು.ಗಳನ್ನು ಅರೋರಾ ನೀಡಿದ್ದ ಎಂಬ ಆರೋಪವಿದೆ.

 ಸಂಜಯ ಸಿಂಗ್‌ ಬಂಧನ ಖಂಡಿಸಿ ಬೀದಿಗಿಳಿದು ಆಪ್‌ ಕಾರ್‍ಯಕರ್ತರ ಪ್ರತಿಭಟನೆ

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆಪ್‌ ಸಂಸದ ಸಂಜಯ್‌ ಸಿಂಗ್‌ ಬಂಧನವನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇಲ್ಲಿನ ಪಕ್ಷದ ಕಚೇರಿ ಎದುರು ಆಪ್‌ ಸಚಿವೆ ಅತಿಶಿ, ಪ್ರಿಯಾಂಕಾ ಕಾಕರ್‌(Priyanka Kakar), ರೀನಾ ಗುಪ್ತ, ಗೋಪಾಲ್‌ ರಾಯ್‌, ಜರ್ನೈಲ್‌ ಸಿಂಗ್‌ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಿತ್ತಿಪತ್ರ ಹಿಡಿದು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಗೋಪಾಲ್‌ ರಾಯ್‌, ‘ಬಿಜೆಪಿ ಸರ್ಕಾರ ಹಾಗೂ ಎನ್‌ಡಿಎ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಅದರಲ್ಲಿ ತಾನು ಸೋಲುತ್ತೇವೆ ಎಂದು ಖಚಿತವಾಗಿದೆ. ಅದನ್ನುಅರಗಿಸಿಕೊಳ್ಳಲಾಗದೇ ಇ.ಡಿ. ಮೂಲಕ ಆಪ್‌ ನಾಯಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.

ರಾಹುಲ್‌ ಗಾಂಧಿ ಆಧುನಿಕ ರಾವಣ: ಬಿಜೆಪಿ ವ್ಯಂಗ್ಯ

‘ಮದ್ಯದ ವ್ಯಾಪಾರಿಗಳಿಗೆ ದೆಹಲಿಯ ಆಪ್‌ ಸರ್ಕಾರ (AAP government) 2021-22ರಲ್ಲಿ ನಿಯಮ ಮೀರಿ ಮದ್ಯದಂಗಡಿ ಲೈಸೆನ್ಸನ್ನು ಹಂಚಿತ್ತು. ಇದಕ್ಕೆ ಪ್ರತಿಯಾಗಿ ಮದ್ಯದ ಅಂಗಡಿ ಮಾಲೀಕರು, ಡೀಲರ್‌ಗಳಿಂದ ಆಪ್‌ ನಾಯಕರು ಭಾರಿ ಲಂಚದ ಹಣ ಸ್ವೀಕರಿಸಿದ್ದರು’ ಎಂಬುದು ದಿಲ್ಲಿ ಅಬಕಾರಿ ಹಗರಣದ ತಿರುಳಾಗಿದೆ. ಇದರ ತನಿಖೆಯನ್ನು ಸಿಬಿಐ ಹಾಗೂ ಇ.ಡಿ. ನಡೆಸುತ್ತಿವೆ.

ಡೀನ್ ಕೈಯಲ್ಲಿ ಆಸ್ಪತ್ರೆ ಶೌಚಾಲಯ ಕ್ಲೀನ್ ಮಾಡಿಸಿದ್ದ ಮಹಾ ಸಂಸದನ ವಿರುದ್ಧ SCST ಕಾಯ್ದೆಯಡಿ ಕೇಸ್

Follow Us:
Download App:
  • android
  • ios