ಶೇಕಡಾವಾರು ಮತ ಗಮನಿಸಿದಾಗ ಬಿಜೆಪಿಗೆ ಶೇ.44, ಕಾಂಗ್ರೆಸ್‌ಗೆ ಶೇ.40, ಜೆಡಿಎಸ್‌ಗೆ ಶೇ.11 ಹಾಗೂ ಇತರರಿಗೆ ಶೇ.5 ಮತ ಬರಲಿದೆ. ಎನ್‌ಡಿಎ ಕೂಟದವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬಿಜೆಪಿ-ಜೆಡಿಎಸ್‌ ಒಟ್ಟಾರೆ ಶೇ.55 ಮತ ಪಡೆಯಲಿವೆ.

ನವದೆಹಲಿ(ಅ.06): ಈಗ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿಗೆ 16, ಕಾಂಗ್ರೆಸ್‌ಗೆ 10 ಹಾಗೂ ಜೆಡಿಎಸ್‌ಗೆ 2 ಸ್ಥಾನ ಬರಲಿವೆ ಎಂದು ಇಂಡಿಯಾ ಟೀವಿ-ಸಿಎನ್ಎಕ್ಸ್‌ ಸಮೀಕ್ಷೆ ಹೇಳಿದೆ. ಇದರರ್ಥ ಇದೀಗ ಜೆಡಿಎಸ್‌ ಎನ್‌ಡಿಎ ಕೂಟಕ್ಕೆ ಸೇರ್ಪಡೆ ಆಗಿರುವ ಕಾರಣ ಎನ್‌ಡಿಗೆ 18 ಹಾಗೂ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೆ ಕೇವಲ 10 ಸ್ಥಾನ ಬರಬಹುದು ಎಂಬುದಾಗಿದೆ.

ಇನ್ನು ಶೇಕಡಾವಾರು ಮತ ಗಮನಿಸಿದಾಗ ಬಿಜೆಪಿಗೆ ಶೇ.44, ಕಾಂಗ್ರೆಸ್‌ಗೆ ಶೇ.40, ಜೆಡಿಎಸ್‌ಗೆ ಶೇ.11 ಹಾಗೂ ಇತರರಿಗೆ ಶೇ.5 ಮತ ಬರಲಿದೆ. ಎನ್‌ಡಿಎ ಕೂಟದವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬಿಜೆಪಿ-ಜೆಡಿಎಸ್‌ ಒಟ್ಟಾರೆ ಶೇ.55 ಮತ ಪಡೆಯಲಿವೆ.

ಎಲ್ಲ ಜಾತಿಗಳ ನಡುವೆ ಸಮಾನತೆ ತರಲು ಜಾತಿ ಸಮೀಕ್ಷೆ ಅಗತ್ಯ: ಕಾಂತರಾಜು

ಹಾಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಲಾ ಒಬ್ಬ ಸಂಸದರನ್ನು ಹೊಂದಿವೆ. ಇನ್ನೊಬ್ಬರು ಪಕ್ಷೇತರ ಸಂಸದರು.