Asianet Suvarna News Asianet Suvarna News

ಜನರ ಅಕೌಂಟ್‌ಗಳಿಗೆ ಅಜ್ಞಾತ ಮೂಲದಿಂದ ಹಣ: 2ರಿಂದ 70 ಸಾವಿರದವರೆಗೆ ಹಣ ಕ್ರೆಡಿಟ್‌

ಅಜ್ಞಾತ ಮೂಲಗಳಿಂದ ಹಲವು ಬ್ಯಾಂಕ್‌ ಖಾತೆಗಳಿಗೆ ಹಣ ಜಮೆಯಾದ ಕಾರಣ, ಹಣ ಡ್ರಾ ಮಾಡಲು ಮತ್ತು ವಿಚಾರಣೆ ಮಾಡಲು ಗ್ರಾಹಕರು ಕಳಿಂಗ ಗ್ರಾಮ್ಯ ಬ್ಯಾಂಕ್‌ಗೆ ನುಗ್ಗಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

Money from unknown source to peoples accounts Money credited from 2 to 70 thousand at odisha kalinga gramin bank akb
Author
First Published Sep 10, 2023, 9:37 AM IST

ಭುವನೇಶ್ವರ: ಅಜ್ಞಾತ ಮೂಲಗಳಿಂದ ಹಲವು ಬ್ಯಾಂಕ್‌ ಖಾತೆಗಳಿಗೆ ಹಣ ಜಮೆಯಾದ ಕಾರಣ, ಹಣ ಡ್ರಾ ಮಾಡಲು ಮತ್ತು ವಿಚಾರಣೆ ಮಾಡಲು ಗ್ರಾಹಕರು ಕಳಿಂಗ ಗ್ರಾಮ್ಯ ಬ್ಯಾಂಕ್‌ಗೆ ನುಗ್ಗಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕಳಿಂಗ ಗ್ರಾಮ್ಯ ಬ್ಯಾಂಕ್‌ನಲ್ಲಿ (Kalinga Gramin Bank) ಖಾತೆ ಹೊಂದಿರುವ ಹಲವು ಗ್ರಾಹಕರಿಗೆ 10 ಸಾವಿರ ರು.ನಿಂದ 70 ಸಾವಿರ ರು.ವರೆಗೆ ಹಣ ಜಮೆಯಾಗಿದೆ. ಹಣ ಜಮೆಯಾಗಿರುವ ಸಂದೇಶ ಮೊಬೈಲ್‌ಗೆ ರವಾನೆಯಾಗುತ್ತಿದ್ದಂತೆ ಜನ ಬ್ಯಾಂಕ್‌ನತ್ತ ಧಾವಿಸಿದ್ದಾರೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಕೆಲಕಾಲ ಜನಜಂಗುಳಿ ಉಂಟಾಗಿತ್ತು. ನನ್ನ ಬ್ಯಾಂಕ್‌ ಖಾತೆಗೆ ಒಂದಷ್ಟು ಹಣ ಸಂದಾಯವಾಗಿದೆ. ಆದರೆ ಯಾರು ಕಳುಹಿಸಿದ್ದಾರೋ ಗೊತ್ತಿಲ್ಲ. ಒಂದಷ್ಟು ಜನ 10 ಸಾವಿರ ರು.ವರೆಗೆ ಡ್ರಾ ಮಾಡಿದ್ದಾರೆ. ನಾನು ಸಹ ಹಣ ಡ್ರಾ ಮಾಡಲು ಬಂದಿದ್ದೇನೆ ಎಂದು ಗ್ರಾಹಕರಾದ ಮಿನಾತಿ ಸಹು ಹೇಳಿದ್ದಾರೆ. ಶನಿವಾರ ಸುಮಾರು 250ಕ್ಕೂ ಹೆಚ್ಚು ಗ್ರಾಹಕರು ಹಣ ಡ್ರಾ ಮಾಡಲು ಬ್ಯಾಂಕ್‌ಗೆ ಧಾವಿಸಿದ್ದರು.

ಪಿಂಚಣಿ ಬಾರದೆ ಸಾವಿರಾರು ಫಲಾನುಭವಿಗಳ ಪರದಾಟ

ಗ್ರಾಹಕರ ಖಾತೆಗೆ (Customer Account) ಹಣ ಸಂದಾಯವಾಗಿರುವುದು ಬ್ಯಾಂಕ್‌ ಸಿಬ್ಬಂದಿಯನ್ನು ಸಹ ಇಕ್ಕಟ್ಟಿಗೆ ಸಿಲುಕಿಸಿದೆ. ಗುರುವಾರ ಬೆಳಗ್ಗೆವರೆಗೆ ಕೆಲವು ಗ್ರಾಹಕರ ಖಾತೆಗಳಿಗೆ 2 ಸಾವಿರ ರು.ನಿಂದ 30 ಸಾವಿರ ರು.ವರೆಗೆ ಹಣ ಜಮೆಯಾಗಿದೆ. ಆದರೆ ಯಾವ ಮೂಲದಿಂದ ಹಣ ಸಂದಾಯವಾಗುತ್ತಿದೆ ಎಂಬುದು ತಿಳಿದು ಬಂದಿಲ್ಲ. ನಾವು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ (Fasal Bhima Yojana) ಹಣ ಸಂದಾಯವಾಗಿರಬಹುದು ಎಂದು ಭಾವಿಸಿದ್ದೆವು ಎಂದು ಬ್ಯಾಂಕ್‌ ಮ್ಯಾನೇಜರ್‌ (Bank Manager) ಹೇಳಿದ್ದಾರೆ.

ಶೇ.3 ರಷ್ಟು ಡಿಎ ಹೆಚ್ಚಳ ಸಾಧ್ಯತೆ: ಜುಲೈನಿಂದಲೇ ಪೂರ್ವಾನ್ವಯ?

ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೀಘ್ರದಲ್ಲೇ ತುಟ್ಟಿ ಭತ್ಯೆ ಹೆಚ್ಚಳ ಘೋಷಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಶೇ.3ರಷ್ಟು ಡಿಎ ಹೆಚ್ಚಬಹುದಾಗಿದ್ದು, ಈ ವರ್ಷದ ಜು.1ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೆ ಬರುವ ಸಾಧ್ಯತೆ ಇದೆ. ಈ ಹೆಚ್ಚಳದ ನಂತರ ತುಟ್ಟಿಭತ್ಯೆಯು ಮೂಲ ವೇತನದ ಶೇ.45ಕ್ಕೆ ತಲುಪಲಿದೆ.

ಉದಾಹರಣೆಗೆ, ಈಗ ವ್ಯಕ್ತಿಯೊಬ್ಬರ ವೇತನ (Salary) ತಿಂಗಳಿಗೆ 50,000 ರು. ಆಗಿದ್ದರೆ ಮತ್ತು ಮೂಲ ವೇತನವಾಗಿ 15,000 ರು. ಪಡೆಯುತ್ತಾರೆ. ಈಗ ಡಿಎ ಮೂಲವೇತನದ ಶೇ.42 ಇರುವ ಕಾರಣ ಡಿಎ ಪ್ರಮಾಣ 6300 ರು. ಆಗುತ್ತದೆ. ಇನ್ನು ಶೇ.3ರಷ್ಟು ಡಿಎ (DA) ಹೆಚ್ಚಳ ಆದರೆ ಉದ್ಯೋಗಿ ತಿಂಗಳಿಗೆ 6,750 ರು. ಡಿಎ ಪಡೆಯುತ್ತಾನೆ. ಇದರಿಂದ 50 ಸಾವಿರ ರು. ಸಂಬಳ ಪಡೆದು, 15 ಸಾವಿರ ರು. ಮೂಲವೇತನ ಪಡೆಯುತ್ತಿದ್ದರೆ ಅವರ ಒಟ್ಟಾರೆ ಸಂಬಳ 450 ರು. ಏರಲಿದೆ.

ಅಪ್ಪನ ಡಿಮ್ಯಾಟ್ ಖಾತೆಗೆ ಹಣ ಹೂಡಿಕೆ ಮಾಡಲು ಕಳ್ಳತನ, ಅಪ್ರಾಪ್ತನ ಐಡಿಯಾ ಕೇಳಿ ಪೊಲೀಸರೇ ದಂಗು!

ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ. ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್‌ (DR) ನೀಡಲಾಗುತ್ತದೆ. ಡಿಎ ಮತ್ತು ಡಿಆರ್‌ ಅನ್ನು ವರ್ಷಕ್ಕೆ 2 ಬಾರಿ ಹೆಚ್ಚಿಸಲಾಗುತ್ತದೆ. ಅದು ಜನವರಿ ಮತ್ತು ಜುಲೈನಲ್ಲಿ. ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಶೇ.42 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ.

Follow Us:
Download App:
  • android
  • ios