Asianet Suvarna News Asianet Suvarna News

ಅಪ್ಪನ ಡಿಮ್ಯಾಟ್ ಖಾತೆಗೆ ಹಣ ಹೂಡಿಕೆ ಮಾಡಲು ಕಳ್ಳತನ, ಅಪ್ರಾಪ್ತನ ಐಡಿಯಾ ಕೇಳಿ ಪೊಲೀಸರೇ ದಂಗು!

ವಯಸ್ಸು ಕೇವಲ 16. ಜನ ನಿಬಿಡ ಮಾರುಕಟ್ಟೆ ಪ್ರದೇಶದಲ್ಲಿರುವ ಜುವೆಲ್ಲರಿ ಶಾಪ್‌ಗೆ ನುಗ್ಗಿದ ಈ ಅಪ್ರಾಪ್ತ ಬಾಲಕ ಪ್ಲಾಸ್ಟಿಕ್‌ನ ಆಟಿಕೆ ಗನ್ ತೋರಿಸಿ, ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಇದೀಗ ಪೊಲೀಸರ ಅತಿಥಿಯಾಗಿರುವ ಅಪ್ರಾಪ್ತನ ಮಾತು ಕೇಳಿ ಪೊಲೀಸರೇ ದಂಗಾಗಿದ್ದಾರೆ.

16 year old boy loot jeweler shop using plastic toy gun in mumbai ckm
Author
First Published May 7, 2023, 8:36 PM IST

ಮುಂಬೈ(ಮೇ.07): ಮಹಾ ನಗರಗಳಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದೆ. ಈ ಕ್ರೈಂಗಳಲ್ಲಿ ಅಪ್ರಾಪ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಅಪ್ರಾಪ್ತ ಬಾಲಕನೊಬ್ಬ ಚಾಲಾಕಿ ನಡೆಯಿಂದ ಜುವೆಲ್ಲರಿ ಶಾಪ್‌ನ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಆಟಿಕೆ ಗನ್ ಹಿಡಿದು ಜುವೆಲ್ಲರಿ ಶಾಪ್‌ನ ಮ್ಯಾನೇಜರ್, ಸಿಬ್ಬಂಧಿಗಳನ್ನು ಬೆದರಿಸಿದ 16 ವರ್ಷದ ಬಾಲಕ ಚಿನ್ನಾಭರಣ ದೋಚಿದ್ದಾನೆ. ಆದರೆ ಸುರಕ್ಷಿತ ಸ್ಥಳ ಸೇರುವ ಮುನ್ನವೇ ಪೊಲೀಸರು ಅತಿಥಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವಿಚಾರಣೆ ವೇಳೆ ಈತನ ಮಾತುಗಳನ್ನು ಕೇಳಿದ ಪೊಲೀಸರು ದಂಗಾಗಿದ್ದಾರೆ. 

ಬಯಾಂಡರ್ ವೆಸ್ಟ್‌ನಲ್ಲಿನ 60 ಫೀಟ್ ರಸ್ತೆಯಲ್ಲಿರುವ ಜುವೆಲ್ಲರಿ ಶಾಪ್‌ಗೆ ನುಗ್ಗಿದ ಅಪ್ರಾಪ್ತ ತನ್ನಲ್ಲಿ ಗೋಲ್ಡ್ ಬಿಸ್ಕಟ್ ಇದೆ. ಇದನ್ನು ಮಾರಾಟ ಮಾಡಬೇಕು ಎಂದು ಹೇಳಿದ್ದಾನೆ. ಅಪ್ರಾಪ್ತನ ನೋಡಿ ಜುವೆಲ್ಲರಿ ಶಾಪ್ ಸಿಬ್ಬಂದಿಗಳು ಹೊರ ನಡೆಯುವಂತೆ ಸೂಚಿಸಿದ್ದಾರೆ. ಜುವೆಲ್ಲರಿ ಶಾಪ್‌ನಿಂದ ಹೊರಬಿದ್ದ ಅಪ್ರಾಪ್ತ 5 ನಿಮಿಷದಲ್ಲಿ ಮತ್ತೆ ಅದೇ ಜುವೆಲ್ಲರಿ ಶಾಪ್‌ಗೆ ಆಗಮಿಸಿದ್ದಾನೆ. ಆದರೆ ಈ ಬಾರಿ ಅಪ್ರಾಪ್ತ ಪ್ಲಾಸ್ಟಿಕ್‌ನಿಂದ ತಯಾರಿಸಿದ ಆಟಿಕೆ ಗನ್ ಹಿಡಿದು ಒಳ ನುಗ್ಗಿದ್ದ.

ದಾವಣಗೆರೆ ದರೋಡೆ ಪ್ರಕರಣ: ಐವರ ಬಂಧನ ₹10ಲಕ್ಷ ಸ್ವತ್ತು ಜಪ್ತಿ

ಆಟಿಕೆ ಗನ್ ತೋರಿಸಿ ಎಲ್ಲರನ್ನೂ ಬೆದರಿಸಿದ್ದ. ಜುವೆಲ್ಲರಿ ಸಿಬ್ಬಂದಿಗಳು, ಅಂಗಡಿಗೆ ಬಂದಿದ್ದ ಗ್ರಾಹಕರು ಬೆಚ್ಚಿ ಬಿದ್ದಿದ್ದರು. ಒಂದು ಕ್ಷಣ ಅಲುಗಾಡಿದರೆ ಶೂಟ್ ಮಾಡುವುದಾಗಿ ಬೆದರಿಸಿದ್ದಾನೆ. ಇತ್ತ ಶಾಪ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಏನೂ ಮಾಡಲಾಗದೆ ಸುಮ್ಮನೆ ನಿಲ್ಲಬೇಕಾಯಿತು. ಇತ್ತ ಶಾಪ್‌ನಲ್ಲಿದ್ದ ಚಿನ್ನಾಭರಣವನ್ನು ಚೀಲದಲ್ಲಿ ತುಂಬಿಸಿ ಎಸ್ಕೇಪ್ ಆಗಿದ್ದಾನೆ. ಆದರೆ ಹೊರಬರುತ್ತಿದ್ದಂತೆ ಸ್ಥಳೀಯರು ಈತನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಸ್ಥಳೀಯರು ಈತನ ಬೆದರಿಕೆಗೆ ಸೊಪ್ಪು ಹಾಕಿಲ್ಲ. ಇಷ್ಟೇ ಅಲ್ಲ ಆತನ ಆಟಿಕೆ ಗನ್ ಮೂಲಕ ಬೆದರಿಸುವ ತಂತ್ರ ನಡೆಯಲಿಲ್ಲ. ಹೀಗಾಗಿ ಸ್ಥಳೀಯರು ಅಪ್ರಾಪ್ತನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ್ತ ಅಪ್ರಾಪ್ತನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿನ್ನಾಭರಣ ದೋಚಿದ್ದು ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಚಿನ್ನಾಭರಣವನ್ನು ಬೇರೆಡೆ ಮಾರಾಟ ಮಾಡಿ ಆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿರುವುದಾಗಿ ಹೇಳಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಾಧೀಶನಾಗುವ ಕನಸು ಕಂಡಿದ್ದು. ಹೀಗಾಗಿ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಈತನ ಹೇಳಿಕೆ ಪೊಲೀಸರಿಗೆ ತೃಪ್ತಿ ತಂದಿಲ್ಲ. ಹೀಗಾಗಿ ವಿಚಾರಣೆ ಮುಂದವರಿಸಿದ್ದಾರೆ.

Bengaluru: ಚಿನ್ನದ ವ್ಯಾಪಾರಿಗೆ 1.65 ಕೋಟಿ ದೋಖಾ ಮಾಡಿದ್ದ ಮೂವರ ಬಂಧನ

ಅಪ್ರಾಪ್ತನ ತಂದೆ ಟೀ ಅಂಗಡಿ ನಡೆಸುತ್ತಿದ್ದಾರೆ. ತಂದೆ ಡಿಮ್ಯಾಟ್ ಖಾತೆ ಹೊಂದಿದ್ದಾರೆ. ಆದರೆ ತಂದಗೆ ಷೇರು ಮಾರುಕಟ್ಟೆಯ ಕುರಿತು ಗೊತ್ತಿಲ್ಲ. ತಂದೆಯ ಖಾತೆಯನ್ನು ಈತನೇ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿದಿನ ಟ್ರೇಡಿಂಗ್ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ಹಣ ಗಳಿಸುವ ಉತ್ಸಾಹ ಬಂದಿದೆ. ಆದರೆ ಹೂಡಿಕೆ ಮಾಡಲು ಹಣ ಇರಲಿಲ್ಲ. ಹೀಗಾಗಿ ಕಳ್ಳತನ ಮಾಡಿದ್ದಾನೆ. ಇದೀಗ ಅಪ್ರಾಪ್ತನನ್ನು ಜುವೆನಲ್ ಕೇಂದ್ರಕ್ಕೆ ಒಪ್ಪಿಸಲಾಗಿದೆ.

Follow Us:
Download App:
  • android
  • ios