ದೇಶದ ಸಾರ್ವಭೌಮತ್ವ, ಏಕತೆಗೆ ಧಕ್ಕೆ ತಂದ ಆರೋಪ; ಮೊಹಮ್ಮದ್ ಜುಬೇರ್ ವಿರುದ್ಧ ಪ್ರಕರಣ

ಆಲ್ಟ್ ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 152 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ರ ಅಡಿಯಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಯತಿ ನರಸಿಂಹಾನಂದ ಅವರ ಬೆಂಬಲಿಗರು ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

Mohammed Zubair booked for endangering sovereignty unity of India says Ghaziabad Police san

ನವದೆಹಲಿ (ನ.28): ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧದ ಅನ್ವಯ ಆಲ್ಟ್‌ ನ್ಯೂಸ್‌ ಪತ್ರಕರ್ತ ಮೊಹಮದ್ ಜುಬೇರ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ಗಾಜಿಯಾಬಾದ್‌ ಪೊಲೀಸ್‌ನ ತನಿಖಾಧಿಕಾರಿ ಅಲಹಾಬಾದ್‌ ಹೈಕೋರ್ಟ್‌ಗೆ ಅಫಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಜುಬೇರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಟ್ವೀಟ್‌ನ ಕುರಿತು ಗಾಜಿಯಾಬಾದ್‌ನ ದಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ಸಲ್ಲಿಸಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ತಮ್ಮ ಮೇಲಿನ ಎಫ್ಐಆರ್‌ ರದ್ದು ಮಾಡಬೇಕು ಹಾಗೂ ಬಂಧನದಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಮೊಹಮದ್‌ ಜುಬೇರ್‌ ಹೈಕೋರ್ಟ್‌ ಕದ ತಟ್ಟಿದ್ದರು.

ಹೈಕೋರ್ಟ್‌ನ ಮುಂದಿನ ವಿಚಾರಣೆಯ ವೇಳೆ ಈ ಕೇಸ್‌ನ ಕುರಿತಾಗಿ ಅಫಡವಿಟ್‌ ಸಲ್ಲಿಸುವಂತೆ ತನಿಖಾಧಿಕಾರಿಗೆ (ಐಒ) ಅಲಹಾಬಾದ್‌ ಹೈಕೋರ್ಟ್‌ ನವೆಬರ್‌ 25 ರಂದು ನಿರ್ದೇಶನ ನೀಡಿತ್ತು. ಜುಬೈರ್ ವಿರುದ್ಧ ಯಾವ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು ಮಾಡಲಾಗಿದೆ ಅನ್ನೋದನ್ನ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿತ್ತು. ಗುರುವಾರ ಕೋರ್ಟ್‌ಗೆ ಐಒ ಸಲ್ಲಿಸಿದ ಉತ್ತರದಲ್ಲಿ, ಎಫ್‌ಐಆರ್‌ಗೆ ಎರಡು ಹೊಸ ಸೆಕ್ಷನ್‌ಗಳಾದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಮತ್ತು ಬಿಎನ್‌ಎಸ್‌ನ ಸೆಕ್ಷನ್ 152 ಅನ್ನು ಸೇರಿಸಲಾಗಿದೆ ಎಂದು ಕೋರ್ಟ್‌ಗೆ ವಿವರಿಸಿದ್ದಾರೆ. ಹೊಸ ಸೆಕ್ಷನ್‌ಗಳನ್ನು ಸೇರ್ಪಡಿಸಿದ ತಿದ್ದುಪಡಿಗೆ ಕೋರ್ಟ್‌ ಕೂಡ ಅನುಮತಿ ನೀಡಿದ್ದು ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ನಿಗದಿ ಮಾಡಿದೆ.

ಸೆಪ್ಟೆಂಬರ್‌ 29 ರಂದು ಈಗಾಗಲೇ ದ್ವೇಷ ಭಾಷಣದ ಆರೋಪ ಹೊತ್ತಿರುವ ಯತಿ ನರಸಿಂಹಾನಂದ ಅವರು ಸಾರ್ವಜನಿಕವಾಗಿ ಮಾತನಾಡುವಾಗ ಪ್ರವಾದಿ ಮೊಹಮದ್‌ ಕುರಿತಾಗಿ ಟೀಕೆಗಳನ್ನು ಮಾಡಿದ್ದರು. ಇದೇ ವಿಡಿಯೋವನ್ನು ಪೋಸ್ಟ್‌ ಮಾಡಿದ್ದ ಜುಬೇರ್‌, ಇದು ಅವಹೇಳನಕಾರಿ ಹಾಗೂ ದ್ವೇಷಪೂರಿತ ಎಂದು ಕರೆದಿದ್ದರು.

ಯತಿ ನರಸಿಂಹಾನಂದ ವಿರುದ್ಧಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಯತಿಯ ಬೆಂಬಲಿಗರು ತಿಳಿಸಿದ್ದರೂ, ಗಾಜಿಯಾಬಾದ್‌ ಪೊಲೀಸರು ಯತಿಯ ಬಂಧನವನ್ನು ನಿರಾಕರಿಸಿದ್ದರು.

ಸಂಭಲ್‌ ದಂಗೆಕೋರರಿಂದಲೇ ಆಸ್ತಿ ಹಾನಿಯ ಮೊತ್ತ ವಸೂಲಿ!

ಯತಿ ನರಸಿಂಹಾನಂದ ಸರಸ್ವತಿ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಸಲ್ಲಿಸಿದ ದೂರಿನ ಮೇರೆಗೆ ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಅಕ್ಟೋಬರ್ 3 ರಂದು ಜುಬೇರ್, ನರಸಿಂಹಾನಂದ ಅವರ ಹಳೆಯ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಎಂದು ತ್ಯಾಗಿ ಆರೋಪಿಸಿದ್ದಾರೆ. ದಾಸ್ನಾ ದೇವಿ ದೇವಸ್ಥಾನದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಜುಬೇರ್‌, ಅರ್ಷದ್ ಮದನಿ ಮತ್ತು ಅಸಾದುದ್ದೀನ್ ಓವೈಸಿ ಅವರನ್ನು ದೂಷಿಸಿ ಯತಿ ನರಸಿಂಹಾನಂದ ಅವರ ಆಪ್ತ ಸಹಾಯಕ ಡಾ. ಉದಿತಾ ತ್ಯಾಗಿ ಅವರು ನಂತರ ದೂರು ದಾಖಲಿಸಿದ್ದರು.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!

Latest Videos
Follow Us:
Download App:
  • android
  • ios