Asianet Suvarna News Asianet Suvarna News

ಕಿಮ್‌ ಜಾಂಗ್‌ಗೆ ಬಹು ಕೋಟಿಯ ರಷ್ಯನ್‌ ರೋಲ್ಸ್‌ರಾಯ್‌ Aurus Senat ಗಿಫ್ಟ್‌ ನೀಡಿದ ವ್ಲಾಡಿಮಿರ್‌ ಪುಟಿನ್‌!

ಕಳೆದ 24 ವರ್ಷದಲ್ಲಿ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಐಷಾರಾಮಿ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
 

Putin lavish Russian limousine Aurus Senat to Kim Jong Un get Pair Pungsan dogs in Return san
Author
First Published Jun 20, 2024, 6:55 PM IST

ನವದೆಹಲಿ (ಜೂ.20): ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಮ್ಮ ಬಹುನಿರೀಕ್ಷಿತ ಉತ್ತರ ಕೊರಿಯಾ ಭೇಟಿ ಮುಗಿಸಿದ್ದಾರೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಜೊತೆಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಅವರೂ ಈ ವೇಳೆ ಸಹಿ ಹಾಕಿದ್ದಾರೆ. ಕಳೆದ 24 ವರ್ಷದಲ್ಲಿ ರಷ್ಯಾದ ಅಧ್ಯಕ್ಷ ಉತ್ತರ ಕೊರಿಯಾ ದೇಶಕ್ಕೆ ಭೇಟಿ ನೀಡಿರುವುದು ಇದೇ ಮೊದಲಾಗಿದೆ. ಈ ಹಂತದಲ್ಲಿ ಸ್ನೇಹದ ಸಂಕೇತವಾಗಿ, 71 ವರ್ಷದ ಕಿಮ್‌ಗೆ ರಷ್ಯಾ ನಿರ್ಮಿತ ಐಷಾರಾಮಿ ಲಿಮೋಸಿನ್ ಔರಸ್ ಸೆನಾಟ್ ಅನ್ನು ಉಡುಗೊರೆಯಾಗಿ ನೀಡಿದರು. ಭೇಟಿಯ ನಂತರ, ಇಬ್ಬರೂ ಅದ್ದೂರಿ ವಾಹನದಲ್ಲಿ ಟೆಸ್ಟ್ ಡ್ರೈವ್‌ಗೆ ಹೋದರು, ಅದರ ಚಿತ್ರಗಳು ವೈರಲ್ ಆಗಿವೆ. ಔರಸ್‌ ಸೆನಾಟ್‌ಅನ್ನು ರಷ್ಯಾದ ರೋಲ್ಸ್‌ರಾಯ್‌ ಎಂದೇ ಕರೆಯಲಾಗುತ್ತದೆ. ಇದರ ಆರಂಭಿಕ ಬೆಲೆಯೇ 9 ಕೋಟಿ ಎಂದು ಹೇಳಲಾಗಿದೆ. ಟ್ವಿನ್‌ ಟರ್ಬೋ ವಿ8 ಇಂಜಿನ್‌ಅನ್ನು ಹೊಂದಿರುವ 4.4 ಲೀಟರ್‌ನ ಔರಸ್‌ ಸೆನಾಟ್‌, ರಷ್ಯಾದ ಅಧ್ಯಕ್ಷೀಯ ಕಾರು ಕೂಡ ಆಗಿದೆ.

ರಷ್ಯಾದ ಟಿವಿಗಳು ಪ್ರಸಾರ ಮಾಡಿದ ವಿಡಿಯೋದಲ್ಲಿ ಕಪ್ಪು ಬಣ್ಣದ ಶಸ್ತ್ರಸಜ್ಜಿತ ಔರಾಸ್‌ ಸೆನೆಟ್‌ಅನ್ನು ಸ್ವತಃ ವ್ಲಾಡಿಮಿರ್‌ ಪುಟಿನ್‌ ಡ್ರೈವ್‌ ಮಾಡಿದರೆ, ಕಿಮ್‌ ಜಾಂಗ್‌ ಉನ್‌ ಪ್ರಯಾಣಿಕರ ಸೀಟ್‌ನಲ್ಲಿದ್ದರು. ಇದಕ್ಕೂ ಮುನ್ನ ಕಳೆದ ಫೆಬ್ರವರಿಯಲ್ಲೂ ಕಿಮ್‌ಗೆ ಇದೇ ರೀತಿಯ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದರು. ಆ ಮೂಲಕ ಕಿಮ್‌ ಜಾಂಗ್‌ ಬಳಿ ಸದ್ಯ ಎರಡು ಔರಾಸ್‌ ಸೆನಾಟ್‌ ಐಷಾರಾಮಿ ಕಾರುಗಳಿವೆ.

ಈ ಸೆಡಾನ್‌ ಕಾರ್‌ ಒಟ್ಟು ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಟ್‌ ಸೆನಾಟ್‌, ಸೆನಾಟ್‌ ಲಾಂಗ್‌ ಹಾಗೂ ಸೆನಾಟ್‌ ಲಿಮೋಸಿನ್ ವೇರಿಯಂಟ್‌ನಲ್ಲಿ ಲಭ್ಯವಿದೆ. ಇಮ್‌ ಜಾಂಗ್‌ ಉನ್‌ಗೆ ನೀಡಲಾಗಿರುವ ಕಾರ್‌ನಲ್ಲಿರುವ ಇರುವ ವಿಶೇಷತೆಯೇನು ಅನ್ನೋದನ್ನು ಬಹಿರಂಗ ಮಾಡಲಾಗಿಲ್ಲ. ಆದರೆ, ಇದೊಂದು ಶಸ್ತ್ರಸಜ್ಜಿತ ಲಿಮೋಸಿನ್ ಎನ್ನುವುದು ಖಚಿತವಾಗಿದೆ. 

ಇನ್ನೊಂದೆಡೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ರಷ್ಯಾ ಅಧ್ಯಕ್ಷರಿಗೆ ಸ್ಥಳೀಯ ಪ್ರಖ್ಯಾತ ತಳಿಯಾದ ಪುಂಗ್ಸಾನ್‌ನ ಜೋಡಿ ಶ್ವಾನವನ್ನು ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ರಾಜ್ಯ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ. Pungsans ಬೇಟೆಯಾಡುವ ನಾಯಿಗಳ ತಳಿಯಾಗಿದ್ದು, ಇದು ಉತ್ತರ ಕೊರಿಯಾದ ಒಂದು ಪ್ರದೇಶದ ಮೂಲದ್ದಾಗಿದೆ. ಕೊರಿಯಾದ ಸೆಂಟ್ರಲ್ ಟೆಲಿವಿಷನ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು, ಕಿಮ್ ಮತ್ತು ಪುಟಿನ್, ಗುಲಾಬಿಯಿಂದ ಮುಚ್ಚಲಾಗಿದ್ದ ಬೇಲಿಗೆ ಕಟ್ಟಲಾದ ನಾಯಿಗಳೊಂದಿಗೆ ಆಟವಾಡುತ್ತಿರುವುದನ್ನು ಬಿತ್ತರಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇಬ್ಬರು ಕುದುರೆಯೊಂದಿಗೆ ಕೂಡ ಕಾಣಿಸಿಕೊಂಡರು. ಕಿಮ್ ಪ್ರಾಣಿಗಳಿಗೆ ಕ್ಯಾರೆಟ್ ತಿನ್ನಿಸುತ್ತಿದ್ದಾಗ ಪುಟಿನ್ ಕುದುರೆಯ ತಲೆಯ ಮೇಲೆ ತಟ್ಟಿದರು ಎಂದು ವರದಿ ತಿಳಿಸಿದೆ.

ನಮ್ಮ ಷರತ್ತುಗಳಿಗೆ ಒಪ್ಪಿದರೆ ಯುದ್ಧ ನಿಲ್ಲಿಸಲು ರೆಡಿ: ರಷ್ಯಾ ಅಧ್ಯಕ್ಷ ಪುಟಿನ್‌

ಅವರು ಜೂನ್ 19 ರಂದು ರಷ್ಯಾದ ಔರಸ್ ಲಿಮೋಸಿನ್‌ನಲ್ಲಿ ಓಡಾಟ ಮಾಡಿದ್ದರು. ಉಭಯ ನಾಯಕರು ವಿನಿಮಯ ಮಾಡಿಕೊಂಡ ಉಡುಗೊರೆಗಳಲ್ಲಿ ರಷ್ಯಾ ನಿರ್ಮಿತ ಲಿಮೋಸಿನ್, ಟೀ ಸೆಟ್ ಮತ್ತು ಕಲಾಕೃತಿಗಳು ಸೇರಿವೆ.

 

ಲಂಡನ್, ಪ್ಯಾರಿಸ್ ಮೇಲೆ ಪರಮಾಣು ಬಾಂಬ್ ದಾಳಿ: ಉಕ್ರೇನ್‌ಗೆ ಸೇನೆ ಕಳಿಸದಂತೆ ರಷ್ಯಾ ಎಚ್ಚರಿಕೆ

Latest Videos
Follow Us:
Download App:
  • android
  • ios