ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದಕ್ಷಿಣ ಕೊರಿಯಾ ಅಥ್ಲೀಟ್ಸ್‌ಗಳ ಜತೆ ನಗುತ್ತಾ  ಫೋಸ್ ಕೊಟ್ಟಿದ್ದಕ್ಕೆ  ಉತ್ತರ ಕೊರಿಯಾ ಅಥ್ಲೀಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯುವ ವೇಳೆ ಪೋಡಿಯಂನಲ್ಲಿ ದಕ್ಷಿಣ ಕೊರಿಯಾ ಅಥ್ಲೀಟ್‌ಗಳ ಜೊತೆ ನಕ್ಕು, ಸೆಲ್ಫಿ ತೆಗೆದಿದ್ದಕ್ಕೆ ತನ್ನ ದೇಶದ ಇಬ್ಬರು ಅಥ್ಲೀಟ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಉತ್ತರ ಕೊರಿಯಾ ಮುಂದಾಗಿದೆ ಎಂದು ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಟೇಬಲ್‌ ಟೆನಿಸ್‌ ಮಿಶ್ರ ತಂಡ ವಿಭಾಗದ ಪದಕ ವಿತರಣೆ ಈ ವೇಳೆ ಆಯೋಜಕರು ನೀಡಿದ್ದ ಮೊಬೈಲ್‌ನಲ್ಲಿ ದ.ಕೊರಿಯಾದ ಅಥ್ಲೀಟ್‌ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಈ ವೇಳೆ ಉತ್ತರ ಕೊರಿಯಾ, ಚೀನಾ ಅಥ್ಲೀಟ್‌ಗಳು ಕೂಡಾ ಜೊತೆಗಿದ್ದರು. ಆದರೆ ವೈರಿ ದೇಶ ದ.ಕೊರಿಯಾ ಅಥ್ಲೀಟ್‌ಗಳ ಜೊತೆ ನಕ್ಕು, ಸೆಲ್ಫಿಯಲ್ಲಿ ಭಾಗಿಯಾಗಿದ್ದಕ್ಕೆ ತನ್ನ ಅಥ್ಲೀಟ್‌ಗಳ ವಿರುದ್ಧ ಕ್ರಮಕ್ಕೆ ಉತ್ತರ ಕೊರಿಯಾ ಮುಂದಾಗಿದೆ ಎಂದು ಹೇಳಲಾಗುತ್ತಿದೆ. 

ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಚಿನ್ನದ ಕನಸು ಕಾಣುತ್ತಿರುವ ಭಾರತದ ಟಾಪ್ 10 ತಾರೆಗಳಿವರು

ದ.ಕೊರಿಯಾ ಅಥ್ಲೀಟ್‌ಗಳ ಜೊತೆ ಸಂವಹನ ನಡೆಸದಂತೆ ಕ್ರೀಡಾಕೂಟಕ್ಕೂ ಮುನ್ನವೇ ತನ್ನ ಅಥ್ಲೀಟ್‌ಗಳಿಗೆ ಉ.ಕೊರಿಯಾ ಸೂಚಿಸಿತ್ತು ಎಂದು ವರದಿಯಾಗಿದೆ.

ವಿನೇಶ್‌ಗೆ ಒಲಿಂಪಿಕ್‌ ರಿಂಗ್‌ ಇರುವ ಚಿನ್ನದ ಪದಕ ಕೊಟ್ಟ ಹರ್‍ಯಾಣ ಖಾಪ್‌ ಪಂಚಾಯ್ತಿ!

ಜಜ್ಜಾರ್‌(ಹರ್ಯಾಣ): ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯ ಫೈನಲ್‌ಗೂ ಮುನ್ನ ತೂಕ ಹೆಚ್ಚಳ ಕಾರಣಕ್ಕೆ ಕ್ರೀಡಾಕೂಟದಿಂದಲೇ ಅಮಾನತುಗೊಂಡು ಪದಕ ವಂಚಿತರಾಗಿದ್ದ ಭಾರತಾ ಕುಸ್ತಿಪಟು ವಿನೇಶ್‌ ಫೋಗಟ್‌ಗೆ ಭಾನುವಾರ ಹರ್ಯಾಣ ಖಾಪ್‌ ಪಂಚಾಯತ್‌ ಚಿನ್ನದ ಪದಕ ನೀಡಿ ಗೌರವಿಸಿದೆ.

ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ: ಜೋಕೋ, ಅಲ್ಕರಜ್ ಮೇಲೆ ಕಣ್ಣು

ವಿನೇಶ್‌ರ ಹುಟ್ಟುಹಬ್ಬದ ಪ್ರಯುಕ್ತ ಜಜ್ಜಾರ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಚಿನ್ನದ ಪದಕ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಅವರು, ‘ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಗೊತ್ತಿಲ್ಲ. ನನಗೆ ಜನರ ಬೆಂಬಲವಿದೆ. ನನ್ನ ಪಾಲಿಗೆ ಅವರೇ ಪದಕ’ ಎಂದರು. ವಿನೇಶ್‌ಗೆ ಚಿನ್ನದ ಪದಕ ನೀಡಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ.

ಸೆ.13ರಂದು ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ಆರಂಭ

ನವದೆಹಲಿ: 11ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಲೀಗ್‌ ಸೆ.13ರಂದು ಆರಂಭಗೊಳ್ಳಲಿದೆ. ಭಾನುವಾರ ಆಯೋಜಕರು ಈ ಬಾರಿ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದರು. ಉದ್ಘಾಟನಾ ಪಂದ್ಯದಲ್ಲಿ ಮೋಹನ್‌ ಬಗಾನ್‌ ಹಾಗೂ ಮುಂಬೈ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. 

ಕಳೆದ ಬಾರಿ 12 ತಂಡಗಳಿದ್ದು, ಈ ಬಾರಿ ಒಂದು ಹೆಚ್ಚುವರಿ ತಂಡ ಮೊಹಮ್ಮೆದನ್‌ ಸ್ಪೋರ್ಟಿಂಗ್‌ ಕ್ಲಬ್‌ ಕಣಕ್ಕಿಳಿಯಲಿದೆ. ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ ಸೆ.14ರಂದು ಈಸ್ಟ್‌ ಬೆಂಗಾಲ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಸದ್ಯ ಡಿಸೆಂಬರ್‌ ತಿಂಗಳ ವರೆಗಿನ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.