ಹಿಂದೂ ಹಾಗೂ ಸಿಖ್ಖರ ಪವಿತ್ರ ತೀರ್ಥಕ್ಷೇತ್ರಗಳಾಗಿರುವ ಉತ್ತರಾಖಂಡದ ಕೇದಾರನಾಥ ಹಾಗೂ ಹೇಮಕುಂಡ ಸಾಹಿಬ್‌ಗೆ ದೇಶದ ಎರಡು ಅತಿ ಉದ್ದದ ರೋಪ್‌ವೇ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. 2430 ಕೋಟಿ ರು. ವೆಚ್ಚದ ಈ ಎರಡು ರೋಪ್‌ವೇ ಕಾಮಗಾರಿಗಳಿಗೆ ಅವರು ಇಂದು ಕೇದಾರನಾಥದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನವದೆಹಲಿ: ಹಿಂದೂ ಹಾಗೂ ಸಿಖ್ಖರ ಪವಿತ್ರ ತೀರ್ಥಕ್ಷೇತ್ರಗಳಾಗಿರುವ ಉತ್ತರಾಖಂಡದ ಕೇದಾರನಾಥ ಹಾಗೂ ಹೇಮಕುಂಡ ಸಾಹಿಬ್‌ಗೆ ದೇಶದ ಎರಡು ಅತಿ ಉದ್ದದ ರೋಪ್‌ವೇ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. 2430 ಕೋಟಿ ರು. ವೆಚ್ಚದ ಈ ಎರಡು ರೋಪ್‌ವೇ ಕಾಮಗಾರಿಗಳಿಗೆ ಅವರು ಇಂದು ಕೇದಾರನಾಥದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಹಿಮಾಚ್ಛಾದಿತ ಪರ್ವತಗಳಿಂದ (mountains) ಕೂಡಿರುವ ಹಾಗೂ ದುರ್ಗಮ ಧಾರ್ಮಿಕ-ಪ್ರವಾಸಿ ತಾಣಗಳನ್ನು (tourist destination)ಒಳಗೊಂಡಿರುವ ಉತ್ತರಾಖಂಡದಲ್ಲಿ (Uttarakhand) ಸಂಪರ್ಕ ವ್ಯವಸ್ಥೆ ಸುಧಾರಿಸಲು ಕೇಂದ್ರ ಸರ್ಕಾರ ಒಟ್ಟು 3400 ಕೋಟಿ ರು. ವೆಚ್ಚದ ಕಾಮಗಾರಿಗೆ ನಿರ್ಧರಿಸಿದೆ. ಅದರಲ್ಲಿ ಗೌರಿಕುಂಡದಿಂದ (Gaurikunda) ಕೇದಾರನಾಥಕ್ಕೆ (Kedarnath) 9.7 ಕಿ.ಮೀ. ರೋಪ್‌ವೇ ಹಾಗೂ ಗೋವಿಂದಘಾಟ್‌ನಿಂದ (Govindghat) ಹೇಮಕುಂಡ ಸಾಹಿಬ್‌ಗೆ (Hemkunda Sahib)12.4 ಕಿ.ಮೀ. ಉದ್ದದ ರೋಪ್‌ವೇಗಳು ಸೇರಿವೆ. ಇದು ಭಾರತದಲ್ಲೇ ಅತಿ ಉದ್ದದ ರೋಪ್‌ವೇ ಎನ್ನಿಸಿಕೊಳ್ಳಲಿದೆ. ಕೇದಾರನಾಥದ ರೋಪ್‌ವೇ ಈಗಿನ 6-7 ತಾಸುಗಳ ಪ್ರಯಾಣವನ್ನು ಕೇವಲ 30 ನಿಮಿಷಕ್ಕೆ ಇಳಿಸಲಿದೆ. ಹೇಮಕುಂಡಕ್ಕೆ ಗೋವಿಂದಘಾಟ್‌ನಿಂದ ಈಗಾಗಲೇ ಹೆದ್ದಾರಿ ಸಂಪರ್ಕವಿದ್ದು, ಅದರ ಜೊತೆಗೆ ಈಗ ರೋಪ್‌ವೇ ಕೂಡ ಸೇರ್ಪಡೆಯಾಗಲಿದೆ. ಇದರಲ್ಲಿ ಪ್ರಯಾಣದ ಅವಧಿ 45 ನಿಮಿಷ ಇರಲಿದೆ. ಇದು ಭಾರತದ ಅತಿ ಉದ್ದದ ರೋಪ್‌ವೇ ಎನ್ನಿಸಿಕೊಳ್ಳಲಿದೆ.

1000 ಕೋಟಿ ರು. ಹೆದ್ದಾರಿ:

ಉತ್ತರಾಖಂಡದ ಇನ್ನಿತರ ಕೆಲ ಪ್ರವಾಸಿ ತಾಣಗಳಾಗಿರುವ ಜೋಶಿಮಠ (Joshimath), ಮನಾ ಪಾಸ್‌ (Mana Pass), ಮಲಾರಿಗಳನ್ನು (Malari)ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 1000 ಕೋಟಿ ರು. ವೆಚ್ಚದಲ್ಲಿ ಆರಂಭಿಸುವುದಕ್ಕೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವು ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ವ್ಯೂಹಾತ್ಮಕ ಸ್ಥಳಗಳಲ್ಲಿ ಭಾರತದ ರಕ್ಷಣಾ ವ್ಯವಸ್ಥೆಗೂ ಅನುಕೂಲ ಕಲ್ಪಿಸಲಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಬೆಳಗ್ಗೆ 8.30ಕ್ಕೆ ಕೇದಾರದಲ್ಲಿ ಪೂಜೆ:

ಜ್ಯೋತಿರ್ಲಿಂಗ ಸರಣಿ: ಗೂಳಿ ಬೆನ್ನಿನಿಂದ ಜ್ಯೋತಿರ್ಲಿಂಗವಾಗಿ ಕಾಣಿಸಿದ ಕೇದಾರನಾಥ!

ಕೇದಾರನಾಥಕ್ಕೆ ಇಂದು ಬೆಳಗ್ಗೆ 8.30ಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಕೇದಾರನಾಥ ದೇಗುಲದಲ್ಲಿ(Kedarnath temple) ಪೂಜೆ ಸಲ್ಲಿಸಲಿದ್ದಾರೆ. 9 ಗಂಟೆಗೆ ಅಲ್ಲೇ ಕೇದಾರನಾಥ್‌ ರೋಪ್‌ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಅಲ್ಲಿನ ಆದಿಗುರು ಶಂಕರಾಚಾರ್ಯರ ಸಮಾಧಿಗೆ (Adiguru Shankaracharya) ಭೇಟಿ ನೀಡಲಿದ್ದಾರೆ. 9.25ರ ಸುಮಾರಿಗೆ ಮಂದಾಕಿನಿ ಅಷ್ಟಪಥ (Mandakini Ashtapatha) ಹಾಗೂ ಸರಸ್ವತಿ ಅಷ್ಟಪಥ (Saraswati Ashtapatha)ಕಾಮಗಾರಿಗಳ ಪ್ರಗತಿ ಪರಿಶೀಲಿಸಲಿದ್ದಾರೆ. ನಂತರ ಬದರೀನಾಥ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ನದಿ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲಿಸಲಿದ್ದಾರೆ. ನಂತರ ಮನಾ ಎಂಬ ಹಳ್ಳಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿದೆ.

ಈ ಭಾರಿಯೂ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ, ಕೇದಾರನಾಥ ಭದ್ರಿನಾಥಕ್ಕೂ ಭೇಟಿ!