ಮೋದಿ ಸರ್‌ನೇಮ್ ಹೇಳಿಕೆ ವಿವಾದ: ಶಿಕ್ಷೆ ವಿರುದ್ಧ ರಾಹುಲ್ ಮೇಲ್ಮನವಿ: ಇಂದು ಹೈಕೋರ್ಟ್ ತೀರ್ಪು
ಮೋದಿ ಸರ್‌ನೇಮ್ ಹೊಂದಿರುವವರೆಲ್ಲಾ ಏಕೆ ಕಳ್ಳರಾಗಿರ್ತಾರೆ’ ಎಂದು ಹೇಳಿದ್ದಕ್ಕೆ ಶಿಕ್ಷೆಗೆ ಒಳಗಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಶಿಕ್ಷೆ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿ ತೀರ್ಪು ಇಂದು ಪ್ರಕಟವಾಗಲಿದೆ.
ಗಾಂಧಿನಗರ: ಮೋದಿ ಸರ್‌ನೇಮ್ ಹೊಂದಿರುವವರೆಲ್ಲಾ ಏಕೆ ಕಳ್ಳರಾಗಿರ್ತಾರೆ’ ಎಂದು ಹೇಳಿದ್ದಕ್ಕೆ ಶಿಕ್ಷೆಗೆ ಒಳಗಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಶಿಕ್ಷೆ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿ ತೀರ್ಪು ಇಂದು ಪ್ರಕಟವಾಗಲಿದೆ. ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಒಂದು ವೇಳೆ ಶಿಕ್ಷೆಗೆ ತಡೆ ನೀಡಿದರೆ ಅವರು ಅನರ್ಹತೆ ರದ್ದಾಗುವ ಸಾಧ್ಯತೆ ಇದೆ. ಶಿಕ್ಷೆಗೆ ತಡೆ ಸಿಗದೇ ಹೋದರೆ ವಿಸ್ತೃತ ಪೀಠಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇದ್ದೇ ಇದೆ. ಮಾ.23ರಂದು ಸೂರತ್ ಜಿಲ್ಲಾ ನ್ಯಾಯಾಧೀಶರು ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರು.
ಕೋಲಾರದಲ್ಲಿ 2019ರಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಹೇಳಿಕೆ ವಿರುದ್ಧ ಗುಜರಾತ್‌ನ ಸೂರತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅಲ್ಲಿನ ಕೋರ್ಟ್‌ನಲ್ಲಿ ರಾಹುಲ್ ವಿರುದ್ಧ ಕೇಸ್ ಹಾಕಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಅವರ ಸಂಸತ್ ಸದಸ್ಯತ್ವ ಅನರ್ಹಗೊಂಡಿತ್ತು. ಅಲ್ಲದೇ ಸಂಸತ್ ಸದಸ್ಯರಿಗೆ ನೀಡಲಾಗುವ ಬಂಗಲೆ ಖಾಲಿ ಮಾಡುವಂತೆ ಸಂಸತ್ ಕಾರ್ಯದರ್ಶಿ ಅವರಿಗೆ ನೋಟಿಸ್ ಕಳುಹಿಸಿದ್ದರು. ಹೀಗಾಗಿ ಅವರು ಮನೆ ಖಾಲಿ ಮಾಡಿ ತಾಯಿ ಸೋನಿಯಾ ಗಾಂಧಿ ಇದ್ದ ನಿವಾಸಕ್ಕೆ ಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಲಿದೆ.
ಮದುವೆ ಆಗದೇ ಯಾರೂ ಪ್ರಧಾನಿಯಾಗಿಲ್ಲ.. ರಾಹುಲ್ ಗಾಂಧಿಗೆ ಸಲಹೆ ನೀಡಿದ ಲಾಲು ಪ್ರಸಾದ್!