2020ರಲ್ಲಿ ದೇಶದ ಟೀವಿಗಳಲ್ಲಿ ಪ್ರಧಾನಿ ಮೋದಿ ದರ್ಬಾರ್!
2020ರಲ್ಲಿ ದೇಶದ ಟೀವಿಗಳಲ್ಲಿ ಪ್ರಧಾನಿ ಮೋದಿ ದರ್ಬಾರ್| ಅತಿ ಹೆಚ್ಚು ಜನರು ನೋಡಲ್ಪಟ್ಟವ್ಯಕ್ತಿ ನಮೋ| ಮೋದಿ ಭಾಷಣದಿಂದ ಚಾನಲ್‌ಗಳಿಗೆ ಹೊಡೆತ
ನವದೆಹಲಿ(ಮಾ.04): ಕೊರೋನಾ ವೈರಸ್ ಅಬ್ಬರ, 40 ದಿನಗಳ ಲಾಕ್‌ಡೌನ್, ಹಂತಹಂತದ ಅನ್‌ಲಾಕ್ ವೇಳೆ ದೇಶದ ಜನರು ಟೀವಿಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಟೀವಿಗಳ ರೇಟಿಂಗ್ ಅಳೆಯುವ ‘ಬ್ರಾಡ್‌ಕಾಸ್ಟ್ ಆಡಿಯೋ ರೀಸಚ್‌ರ್ ಕೌನ್ಸಿಲ್’ (ಬಾಕ್) ಸಿದ್ಧಪಡಿಸಿರುವ ವಾರ್ಷಿಕ ಟೀವಿ ವೀಕ್ಷಣಾ ವರದಿಯಲ್ಲಿ ಈ ಅಂಶವಿದೆ. 2020ರ ಮಾಚ್‌ರ್ 24ರಂದು ಮೋದಿ ಅವರು ಮೊದಲ ಲಾಕ್‌ಡೌನ್ ಘೋಷಣೆ ಮಾಡಿದರು. ಅಂದು ಅವರು ಮಾಡಿದ ಭಾಷಣ ಅತಿ ಹೆಚ್ಚು ಜನರನ್ನು ಸೆಳೆಯಿತು.
2020ರ ಏಪ್ರಿಲ್‌ನಲ್ಲಿ ಮೋದಿ ಅವರು 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆ ಮಾಡಿದರು. 20.3 ಕೋಟಿ ಮಂದಿ ಅದನ್ನು ವೀಕ್ಷಣೆ ಮಾಡಿದರು. ಕೊರೋನಾ ಸಂದರ್ಭದಲ್ಲಿ ಮೋದಿ ಅವರು ಟೀವಿಯನ್ನುದ್ದೇಶಿಸಿ ಮಾಡಿದ ಪ್ರತಿ ಭಾಷಣದ ಸಂದರ್ಭದಲ್ಲೂ ಮನರಂಜನೆ, ಸಿನಿಮಾ ಹಾಗೂ ಮಕ್ಕಳ ವಾಹಿನಿಗಳ ವೀಕ್ಷಣಾ ಪ್ರಮಾಣದಲ್ಲಿ ಕುಸಿತ ಕಂಡುಬಂದಿತ್ತು ಎಂದು ತಿಳಿಸಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಮೋದಿ ಅವರು 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಲು ಕರೆ ನೀಡಿದ್ದರು. ಆ 9 ನಿಮಿಷಗಳ ಕಾಲ ಟೀವಿ ವೀಕ್ಷಣೆ ಪ್ರಮಾಣ ಶೇ.60ರಷ್ಟುಇಳಿಕೆಯಾಗಿತ್ತು. 2019ರಲ್ಲಿ ಪ್ರಧಾನಿ ಮೋದಿ ಅವರು ಕೆಂಪು ಕೋಟೆಯ ಮೇಲೆ ನಿಂತು ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಹೋಲಿಸಿದರೆ 2020ರ ಆ.15ರಂದು ಮಾಡಿದ ಭಾಷಣಕ್ಕೆ ಶೇ.40ರಷ್ಟುಅಧಿಕ ವೀಕ್ಷಕರಿದ್ದರು ಎಂದು ವರದಿ ವಿವರಿಸಿದೆ.