Asianet Suvarna News Asianet Suvarna News

ಕೇಜ್ರಿವಾಲ್ ಭಾಷಣ ವೇಳೆ ಮೋದಿ ಮೋದಿ ಘೋಷಣೆ, ವೇದಿಕೆಯಲ್ಲಿ ಆಪ್‌ಗೆ ಗವರ್ನರ್ ಕಪಾಳಮೋಕ್ಷ!

ಸಿಎಂ ಕೇಜ್ರಿವಾಲ್ ಭಾಷಣದ ವೇಳೆ ಮೋದಿ ಮೋದಿ ಘೋಷಣೆ ಕೂಗಲಾಗಿದೆ. ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟನೆಯಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಇದೇ ವೇದಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಹೇಳಿದ ಸುಳ್ಳುಗಳನ್ನು ಗರ್ವನರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 
 

Modi Modi chants during CM Arvind Kejriwal speech after Guru Gobind Singh Indraprastha University inauguration ckm
Author
First Published Jun 8, 2023, 5:21 PM IST

ನವದೆಹಲಿ(ಜೂ.08) ಗುರು ಗೊಬಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟನೆ ಹಲವು ಹೈಡ್ರಾಮಕ್ಕೆ ಕಾರಣವಾಗಿದೆ. ಒಂದಂಡೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಷಣಕ್ಕ ತೀವ್ರ ಅಡ್ಡಿಪಡಿಸಿದ ಘಟನೆ ನಡೆದಿದೆ. ಭಾಷಣದ ವೇಳೆ ಮೋದಿ ಮೋದಿ ಘೋಷಣೆ ಕೂಗಲಾಗಿದೆ. ಇತ್ತ
 ಈ ಕ್ಯಾಂಪಸ್ ಆಮ್ ಆದ್ಮಿ ಸರ್ಕಾರದ ಕೊಡುಗೆ. ಇದು ಯುಕೆ, ಅಮೆರಿಕ ಮೀರಿಸುವಂತ ಆಪ್ ಸರ್ಕಾರದ ಅಭಿವೃದ್ಧಿಯ ಯುನಿವರ್ಸಿಟಿ ಎಂದು ಆಪ್ ಸರ್ಕಾರ ಭಾರಿ ಪ್ರಚಾರ ಮಾಡಿದೆ. ಆದರೆ ಇದರ ಅಸಲಿ ಕತೆಯನ್ನು ಲೆಫ್ಟಿನೆಂಟ್ ಗವರ್ನರ್ ವೇದಿಕೆಯಲ್ಲಿ ಕೇಜ್ರಿವಾಲ್ ಸಮ್ಮುಖದಲ್ಲಿ ಬಹಿರಂಗ ಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಷಣಕ್ಕ ತೀವ್ರ ಅಡ್ಡಿಪಡಿಸಿದ ಘಟನೆಯೂ ನಡೆದಿದೆ.

ಗುರು ಗೊಬಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ ಉದ್ಘಾಟನೆ ವಿಚಾರ ಆಮ್ ಆದ್ಮಿ ಪಾರ್ಟಿ ಸರ್ಕಾರ ಹಾಗೂ ಕೇಂದ್ರದ ನಡುವೆ ಭಾರಿ ಜಾಪಟಿ ನಡೆದಿತ್ತು. ಕೊನೆಗೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಹಾಗೂ ಸಿಎಂ ಅರವಿಂದ್ ಕೇಜ್ರಿವಾಲ್ ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ವಿಶ್ವವಿದ್ಯಾಲಯ ಕ್ಯಾಂಪಸ್‌ನ್ನು ಆಮ್ ಆದ್ಮಿ ಸರ್ಕಾರ ಅತೀವ ಮುತೂವರ್ಜಿ ವಹಿಸಿ ಅನುದಾನ ನೀಡಿ ನಿರ್ಮಿಸಿದೆ. ಇದು ಆಪ್ ಸರ್ಕಾರ ಶಿಕ್ಷಣ ನೀಡುತ್ತಿರುವ ಪ್ರಾಮುಖ್ಯತೆಯನ್ನು ಹೇಳುತ್ತದೆ ಎಂದು ನೇರವಾದಿ ಬಿಜೆಪಿ ಗುರಿಯಾಗಿಸಿ ಟ್ವೀಟ್ ಹಾಗೂ ಹೇಳಿಕೆ ನೀಡಿದ್ದರು. ಆದರೆ ಇಂದು ಉದ್ಘಾಟನೆ ಬಳಿಕ ಭಾಷಣ ಮಾಡಿದ ವಿಕೆ ಸಕ್ಸೇನಾ  ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಆಪ್ ನೀಡಿದ ಹಣ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಸಿಸೋಡಿಯಾ ನೆನೆದು ಕೇಜ್ರಿ​ವಾಲ್‌ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ

ಈ ಕ್ಯಾಂಪಸ್ ನಿರ್ಮಾಣದ ಸರಿಸುಮಾರು ಒಟ್ಟು ಖರ್ಚು 388 ಕೋಟಿ ರೂಪಾಯಿ. ಈ ಪೈಕಿ 344 ಕೋಟಿ ರೂಪಾಯಿ ಹಣವನ್ನು ಗುರು ಗೋಂಬಿಂದ್ ಇಂದ್ರಪಸ್ಥ ವಿಶ್ವವಿದ್ಯಾಲಯ ತನ್ನ ನಿಧಿಯಿಂದಲೇ ಬಳಸಿಕೊಂಡಿದೆ. ಇನ್ನುಳಿದ ಸುಮಾರು 40 ಕೋಟಿ ರೂಪಾಯಿ ಹಣವನ್ನು ದೆಹಲಿ ಸರ್ಕಾರ ನೀಡಿದೆ. ಹೊಸ ಕ್ಯಾಂಪಸ್ ನಿರ್ಮಾಣದ ಸಂಪೂರ್ಣ ಶ್ರೇಯಸ್ಸು ಗುರು ಗೋಂಬಿಂದ್ ಇಂದ್ರಪಸ್ಥ ವಿಶ್ವವಿದ್ಯಾಲಯಕ್ಕೆ ಸಲ್ಲಲಿದೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ. ಆಪ್ ಸಿಎಂ, ಸಚಿವರ ಸಮ್ಮುಖದಲ್ಲೇ ಹೇಳಿದ ಈ ಮಾತು ಆಪ್ ನಾಯಕರ ತೀವ್ರ ಹಿನ್ನಡೆ ತಂದಿದೆ.

 

 

ಸಕ್ಸೇನಾ ಭಾಷಣದ ಬಳಿಕ ಸಿಎಂ ಅರವಿಂದ್ ಕೇಜ್ರಿವಾಲ್ ಭಾಷಣಕ್ಕೆ ಬಂದಾಗ ಭಾರಿ ವಿರೋಧ ವ್ಯಕ್ತವಾಗಿದೆ. ಮೋದಿ ಮೋದಿ ಘೋಷಣೆ ಕೂಗಲಾಗಿದೆ. ಕೇಜ್ರಿವಾಲ್ 5 ನಿಮಿಷ ಮಾತು ಕೇಳಿ ಎಂದು ಮನವಿ ಮಾಡಿದರೂ ಭಾಷಣಕ್ಕೆ ಅವಕಾಶ ನೀಡಿಲ್ಲ. ತೀವ್ರ ವಿರೋಧದ ನಡುವೆಯೂ ಅರವಿಂದ್ ಕೇಜ್ರಿವಾಲ್ ಭಾಷಣ ಮಾಡಿದ್ದಾರೆ.ಇದಕ್ಕೂ ಮುನ್ನ ಕೇವಲ ವಂದನಾ ಭಾಷಣ ಮಾಡುವುದಾದರೆ ನನ್ನನ್ನು ಏಕೆ ಕರೆಸಿದ್ದೀರಿ? ಎಂದು ಅರವಿಂದ್ ಕೇಜ್ರಿವಾಲ್ ಆಯೋಜಕರ ಬಳಿ ಆಕ್ರೋಶ ಹೊರಹಾಕಿದ್ದರು. 

 

 

ಮೋದಿಯನ್ನು ಕ್ಷಮೆಯ ವ್ಯಾಪಾರಿ ಎಂದ ತೆಲಂಗಾಣ ಸಿಎಂ ಕೆಸಿಆರ್‌: ಕೇಜ್ರಿವಾಲ್‌ಗೆ ಬೆಂಬಲ ಘೋಷಿಸಿ ಪ್ರಧಾನಿಗೆ ಕಟುಟೀಕೆ

ಒಂದೆಡೆ ಮೋದಿ ಮೋದಿ ಘೋಷಣೆ ಜೋರಾಗಿದೆ. ಇತ್ತ ಆಪ್ ಕಾರ್ಯಕರ್ತರು ಕೇಜ್ರಿವಾಲ್ ಘೋಷಣೆ ಕೂಗಿದ್ದಾರೆ. ಇದರಿಂದ ಕೇಜ್ರಿವಾಲ್ ಭಾಷಣ ಗೊಂದಲ ಹಾಗೂ ಜಟಾಪಟಿಯಲ್ಲಿ ಅಂತ್ಯವಾಗಿದೆ.

Follow Us:
Download App:
  • android
  • ios