ಸಿಸೋಡಿಯಾ ನೆನೆದು ಕೇಜ್ರಿವಾಲ್ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ
ಅಬಕಾರಿ ಹಗರಣದ ಕಾರಣ ಬಂಧಿತರಾಗಿ ಜೈಲಿನಲ್ಲಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೆನೆದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾವುಕರಾಗಿ ಕಣ್ಣೀರುಗರೆದರು.
ನವದೆಹಲಿ: ಅಬಕಾರಿ ಹಗರಣದ ಕಾರಣ ಬಂಧಿತರಾಗಿ ಜೈಲಿನಲ್ಲಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೆನೆದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾವುಕರಾಗಿ ಕಣ್ಣೀರುಗರೆದರು. ಬುಧವಾರ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಸ್ಪೆಷಲೈಸ್ಡ್ ಎಕ್ಸಲೆನ್ಸ್ ವಿದ್ಯಾಲಯದ ನೂತನ ಅಂಗ ಸಂಸ್ಥೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು,‘ನಾನು ಇಂದು ಸಿಸೋಡಿಯಾ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಎಲ್ಲರಿಗೂ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದ್ದರು. ಅಂಥವರ ಮೇಲೆ ಸರ್ಕಾರ ಸುಳ್ಳು ಪ್ರಕರಣದಡಿ ಜೈಲಿಗಟ್ಟಿದೆ. ಅವರಿಗೆ ಶೀಘ್ರ ಜಾಮೀನು ದೊರೆಯಲಿದೆ. ಸತ್ಯ ಎಂದಿಗೂ ಗೆಲ್ಲಲಿದೆ’ ಎಂದು ಭಾವುಕರಾದರು. ಬಿಜೆಪಿ ಸರ್ಕಾರ ನಮ್ಮ ಸರ್ಕಾರದ ಶೈಕ್ಷಣಿಕ ಅಭಿವೃದ್ಧಿ ಸಹಿಸಲಾಗದೇ ಈ ರೀತಿ ಮಾಡುತ್ತಿದೆ ಎಂದು ಆಪಾದಿಸಿದರು.
ದಿಲ್ಲಿ ಅಬಕಾರಿ ಹಗರಣ: ವೈಎಸ್ಸಾರ್ ಸಂಸದನ ಪುತ್ರನ ಬಂಧನ
103 ದಿನದ ನಂತರ ಪತ್ನಿ ಭೇಟಿಯಾದ ಸಿಸೋಡಿಯಾ
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಕೋರ್ಟ್ ಅನುಮತಿ ಮೇರೆಗೆ ದಿಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಆಪ್ ನಾಯಕ ಮನೀಶ್ ಸಿಸೋಡಿಯಾ ಬುಧವಾರ ಭೇಟಿ ಮಾಡಿದ್ದಾರೆ. ಇದು ಇಬ್ಬರ ನಡುವೆ 103 ದಿನಗಳ ನಂತರದ ಮೊದಲ ಭೇಟಿಯಾಗಿದೆ. ಸಿಸೋಡಿಯಾರನ್ನು ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ 3.5 ತಿಂಗಳ ಹಿಂದೆ ಬಂಧಿಸಲಾಗಿತ್ತು. ಈ ನಡುವೆ, ತಮ್ಮ ಭೇಟಿಯ ಬಗ್ಗೆ ಟಪ್ಪಣಿ ಬರೆದಿರುವ ಸೀಮಾ ಸಿಸೋಡಿಯಾ, ನಾವು ಕೋಣೆಯಲ್ಲಿ ಮಾತನಾಡುವಾಗ ನಾವೇನು ಮಾತನಾಡುತ್ತಿದ್ದೇವೆ ಎಂದು ಸತತ 7 ತಾಸು ಕಾಲ ಕೋಣೆ ಹೊರಗೆ ನಿಂತು ಪೊಲೀಸರು ಕೇಳಿಸಿಕೊಂಡರು ಎಂದು ಬೇಸರಿಸಿದ್ದಾರೆ.
ಲಂಚ ಪ್ರಕರಣದಲ್ಲಿ ಅಪ್ 2ನೇ ಶಾಸಕನ ಬಂಧನ: ಅಬಕಾರಿ ಹಗರಣದಲ್ಲಿ ಕೇಜ್ರಿ ಆಪ್ತನ ವಿಚಾರಣೆ