ಭಾರತ-ಪಾಕಿಸ್ತಾನ ಗಡಿಯಲ್ಲಿ ಹೊಸ ವಾಯುನೆಲೆ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಉತ್ತರ ಗುಜರಾತ್‌ನ ಡೆಸ್ಸಾ ಎಂಬಲ್ಲಿ ಈ ವಾಯುನೆಲೆ ಇರಲಿದ್ದು ಯುದ್ಧ ರಣನೀತಿಗೆ ಸಂಬಂಧಿಸಿದಂತೆ ಭಾರತದ ಪಾಲಿಗೆ ತುಂಬಾ ಮಹತ್ವದ್ದಾಗಿದೆ.
ಡೆಸ್ಸಾ: ಭಾರತ-ಪಾಕಿಸ್ತಾನ ಗಡಿಯಲ್ಲಿ ಹೊಸ ವಾಯುನೆಲೆ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಉತ್ತರ ಗುಜರಾತ್‌ನ ಡೆಸ್ಸಾ ಎಂಬಲ್ಲಿ ಈ ವಾಯುನೆಲೆ ಇರಲಿದ್ದು ಯುದ್ಧ ರಣನೀತಿಗೆ ಸಂಬಂಧಿಸಿದಂತೆ ಭಾರತದ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಗಾಂಧಿನಗರದಲ್ಲಿ ಬುಧವಾರ ನಡೆದ ರಕ್ಷಣಾ ಪ್ರದರ್ಶನ-2022ಕ್ಕೆ ಚಾಲನೆ ನೀಡಿದ ಮೋದಿ, ಇದೇ ವೇಳೆ ಈ ವಾಯುನೆಲೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, 'ಉತ್ತರ ಗುಜರಾತ್‌ನ ಬನಾಸ್‌ಕಂಠಾ ಜಿಲ್ಲೆಯ(Banaskantha district) ಡೆಸ್ಸಾ (Dessa)ಎಂಬಲ್ಲಿ ನಿರ್ಮಾಣ ಆಗಲಿರುವ ಈ ವಾಯುನೆಲೆ ಭಾರತದ ಭದ್ರತೆಯ ಪಾಲಿಗೆ ಪರಿಣಾಮಕಾರಿಯಾಗಲಿದೆ’ ಎಂದು ಬಣ್ಣಿಸಿದರು. ರಕ್ಷಣಾ ಪಡೆಗಳು ಶೀಘ್ರ 101 ರಕ್ಷಣಾ ಸಲಕರಣೆಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಇವೆಲ್ಲ ವಿದೇಶದಿಂದ ಆಮದು ಆಗದೇ ಇಲ್ಲೇ ತಯಾರಾಗಲಿವೆ. ಇದರಿಂದಾಗಿ ಸ್ವದೇಶಿ ನಿರ್ಮಿತ ರಕ್ಷಣಾ ಸಾಧನಗಳ (defense equipment) ಸಂಖ್ಯೆ 411ಕ್ಕೆ ಏರಲಿದೆ ಎಂದರು.
ಇಂದಿನ ರಕ್ಷಣಾ ಪ್ರದರ್ಶನ ಅಭೂತಪೂರ್ವವಾದದ್ದು. ಏಕೆಂದರೆ ಕೇವಲ ಸ್ವದೇಶಿ ಕಂಪನಿಗಳು (indigenous companies) ಪಾಲ್ಗೊಂಡಿವೆ. ಭಾರತದ ಕಂಪನಿಗಳ ರಕ್ಷಣಾ ಸಾಧನ ಸಲಕರಣೆಗಳ ರಫ್ತು ಕಳೆದ ಕೆಲವು ವರ್ಷಗಳಲ್ಲಿ 8 ಪಟ್ಟು ಹೆಚ್ಚಿದೆ. ಅಂದು ನಾವು ಪಾರಿವಾಳ ಬಿಡುತ್ತಿದ್ದೆವು. ಇಂದು ಚೀತಾ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹರ್ಷಿಸಿದರು.
ವಾಯುಪಡೆಗೆ ಮಹತ್ವದ ವಾಯುನೆಲೆ
ಆಫ್ಘನ್ನಲ್ಲಿ ಚೀನಾ ವಾಯುನೆಲೆ? ಅಧಿಕಾರಿಗಳ ರಹಸ್ಯ ಭೇಟಿ!
ಗುಜರಾತ್‌ನ ಡೆಸ್ಸಾ ವಾಯುನೆಲೆ ಭಾರತದ ವಾಯುಪಡೆ ಪಾಲಿಗೆ ತೀರಾ ಮಹತ್ವದ್ದಾಗಿರಲಿದೆ. ಬನಾಸ್‌ಕಂಠಾ ಜಿಲ್ಲೆಯಲ್ಲಿರುವ ಡೆಸ್ಸಾ, ಪಾಕಿಸ್ತಾನ ಗಡಿಯಿಂದ (Pakistan border) 130 ಕಿ.ಮೀ. ದೂರದಲ್ಲಿದೆ. ಪಾಕಿಸ್ತಾನವೇನಾದರೂ ಕ್ಯಾತೆ ತಗೆಯಿತು ಎಂದರೆ ತಕ್ಷಣವೇ ಪಾಕ್ ವಿರುದ್ಧ ತಿರುಗಿ ಬೀಳಲು ಈ ವಾಯುನೆಲೆಯಿಂದ ಸಹಾಯವಾಗಲಿದೆ. ಈಗಾಗಲೇ ಗುಜರಾತ್‌ನ ಭುಜ್ (Bhuj) ಹಾಗೂ ರಾಜಸ್ಥಾನದ ಫಲೋಡಿಯಲ್ಲಿ (Phalodi) ವಾಯುನೆಲೆ ಇದ್ದರೂ ಅವು ಪಾಕ್ ಗಡಿಯಿಂದ ಕೊಂಚ ದೂರದಲ್ಲಿವೆ. ಈ ಅಂತರವನ್ನು ಹೊಸ ವಾಯುನೆಲೆ ನೀಗಿಸಲಿದೆ. ಇಲ್ಲಿ ಅತ್ಯಾಧುನಿಕ ಯುದ್ಧವಿಮಾನಗಳು ತಂಗಲಿವೆ.
Mirage Fighter Jet ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕದ್ದಿದ್ದೇಕೆ ಅಂದ್ರೆ ಹೀಗನ್ನೋದಾ?
2000ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಪ್ರಧಾನಿ ಆಗಿದ್ದಾಗ ಡೆಸ್ಸಾ ವಾಯುನೆಲೆಗೆ ಅನುಮತಿ ಸಿಕ್ಕಿತ್ತು. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆ ಹೆಚ್ಚು ಪ್ರಗತಿ ಕಾಣಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಮತ್ತೆ ಈಗ ವಾಯುನೆಲೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು 1000 ಕೋಟಿ ರು. ನೀಡಲಾಗಿದೆ.