Mirage Fighter Jet ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕದ್ದಿದ್ದೇಕೆ ಅಂದ್ರೆ ಹೀಗನ್ನೋದಾ?

* ಲಕ್ನೋದಲ್ಲಿ ಯುದ್ಧ ವಿಮಾನ ಮಿರಾಜ್‌ ಟಯರ್ ಕದ್ದಿದ್ದ ಕಳ್ಳರು

* ಮಿರಾಜ್ ಟಯರ್ ಕಳ್ಳತನದ ಬಳಿಕ ವ್ಯಕ್ತವಾಗಿದ್ದು ದೇಶವಿರೋಧಿ ಶಕ್ತಿಗಳ ಆತಂಕ

* ಸುದ್ದಿ ವರದಿಯಾಗ್ತಿದ್ದಂತೆ ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕೊಟ್ಟ ಸ್ಪಷ್ಟನೆಯೂ ಅಷ್ಟೇ ವಿಚಿತ್ರ

Mirage jet tyre stolen from a truck in UP suspects return tyre to airforce pod

ಲಕ್ನೋ(ಡಿ.05): ಉತ್ತರ ಪ್ರದೇಶದ ರಾಜಧಾನಿ ಲಕ್ನೋದ (Lucknow, Uttar Pradesh) ಶಹೀದ್ ಪಥ್‌ನಲ್ಲಿ ಕದ್ದ ಯುದ್ಧ ವಿಮಾನ ಮಿರಾಜ್‌ನ (Fighter Jet, Mirage) ಟಯರ್‌ಗಳು ಪತ್ತೆಯಾಗಿವೆ. ಪೊಲೀಸರು ಮತ್ತು ವಾಯುಪಡೆ ಪೊಲೀಸರು ಕಳ್ಳರ ಪತ್ತೆಗೆ ನಿಗಾ ವಹಿಸಿದ್ದರು. ಪೊಲೀಸರು ಕಳ್ಳರನ್ನು ಹಿಡಿಯುವ ಮುನ್ನವೇ ಕಳ್ಳರು ಟಯರ್ ಸಮೇತ ವಾಯುಸೇನೆ ಠಾಣೆ ತಲುಪಿದ್ದಾರೆ. ಅಲ್ಲದೇ ತಾವೇಕೆ ಈ ಟಯರ (Tyre)ಕದ್ದಿದ್ದು ಎಂಬುವುದನ್ನೂ ಸ್ಪಷ್ಟಪಡಿಸಿದ್ದಾರೆ.

ಹೌದು ಮಿರಾಜ್ ಯುದ್ಧ ವಿಮಾನದ ಟಯರ್ ಎಂದು ತಿಳಿದಿರಲಿಲ್ಲ. ಟ್ರಕ್‌ನ ಟಯರ್ ಎಂದು ತಪ್ಪಾಗಿ ಗ್ರಹಿಸಿ ಮನೆಗೆ ತೆಗೆದುಕೊಂಡು ಹೋಗಿದ್ದೇವೆ ಎಂದು ಕಳ್ಳರು ಅಧಿಕಾರಿಗಳಿಗೆ ತಿಳಿದ್ದಾರೆ ಲಕ್ನೋದ BKT ವಾಯುನೆಲೆಯನ್ನು (BKT Airbase) ತಲುಪಿದ ಇಬ್ಬರು ಕಳ್ಳರ ಹೆಸರುಗಳು ದೀಪರಾಜ್ ಮತ್ತು ಹಿಮಾಂಶು ಎನ್ನಲಲಾಗಿದೆ. ದೀಪ್ರಾಜ್ ಹಿಮಾಂಶು ಅವರ ಚಿಕ್ಕಪ್ಪ. ನವೆಂಬರ್ 26 ರ ರಾತ್ರಿ ಶಹೀದ್ ಪಥದಲ್ಲಿ ಟಯರ್ ಕಾಣಿಸಿತ್ತು. ಇದು ನಾವು ಅದನ್ನು ಟ್ರಕ್ ಟಯರ್ ಎಂದು ಮನೆಗೆ ತೆಗೆದುಕೊಂಡು ಹೋದೆವು ಎಂದು ಇಬ್ಬರೂ ಹೇಳಿದ್ದಾರೆ.

Lucknow: ಯುದ್ಧ ವಿಮಾನ ಮಿರಾಜ್ ಟಯರ್ ಕಳ್ಳತನ: ದೇಶ ವಿರೊಧಿ ಶಕ್ತಿಗಳ ಕೈವಾಡ?

ಸುದ್ದಿ ನೋಡಿ ಭಯವಾಯಿತು

ಈ ಟಯರ್ ಇತರ ಟೈರ್‌ಗಳಿಗಿಂತ ಭಿನ್ನವಾಗಿತ್ತು, ಆದರೆ ಇದು ಯಾವ ಕಾರಿಗೆ ಸೇರಿದೆ ಎಂದು ನಮಗೆ ತಿಳಿದಿರಲಿಲ್ಲ. ಡಿಸೆಂಬರ್ 3 ರಂದು ಮಿರಾಜ್‌ನ ಟೈರ್ ಕಳ್ಳತನವಾಗಿರುವ ಸುದ್ದಿ ನೋಡಿದ್ದೆ. ಈ ಟಯರ್ ಅದೇ ಎಂದು ತಿಳಿದಾಗ ನಮಗೆ ಗಾಬರಿಯಾಯಿತು. ಶಹೀದ್ ಪಥ್ ನ ಘಟನೆ ಸುದ್ದಿಯಲ್ಲಿ ವರದಿಯಾಗಿದ್ದು, ಈ ಟಯರ್ ಸಾಮಾನ್ಯ ಟಯರ್ ಅಲ್ಲವೆಂದು ತಿಳಿದು, ಇವತ್ತು ನಾವು ಟಯರ್ ಸಮೇತ ಬಿಕೆಟಿ ಏರ್ ಫೋರ್ಸ್ ಸ್ಟೇಷನ್ ಗೆ ಬಂದೆವು ಎಂದಿದ್ದಾರೆ.

ಲಾರಿ ಚಾಲಕನ ಹೇಳಿಕೆ ಮೇರೆಗೆ ಪ್ರಕರಣ ದಾಖಲು

ಕದ್ದದ್ದು ಅದೇ ಟಯರ್ ಎಂದು ವಾಯುಪಡೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಬ್ಬರು ಕಳ್ಳರ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುವುದು. 1 ಡಿಸೆಂಬರ್ 2021 ರಂದು, 27 ನವೆಂಬರ್ 2021 ರಂದು, ಕೆಲವು ಅಪರಿಚಿತರು ತಮ್ಮ ಟ್ರಕ್‌ನಿಂದ ಮಿರಾಜ್ ಯುದ್ಧ ವಿಮಾನದ (Mirage Fighter Jet) ಟೈರ್ ಅನ್ನು ಕದ್ದಿದ್ದಾರೆ ಎಂದು ಟ್ರಕ್ ಚಾಲಕನ ಹೇಳಿಕೆಯ ಮೇಲೆ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂಬುವುದು ಉಲ್ಲೇಖನೀಯ.

ಈ ಟ್ರಕ್ ಬಿಕೆಟಿ ಏರ್‌ಫೋರ್ಸ್ ನಿಲ್ದಾಣದಿಂದ ಜೋಧ್‌ಪುರಕ್ಕೆ ವಾಯುಪಡೆಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುತ್ತಿತ್ತು. ನವೆಂಬರ್ 26 ರ ಸಂಜೆ, ಟ್ರಕ್‌ನಲ್ಲಿ ಲಗೇಜ್‌ಗಳನ್ನು ತುಂಬಿಸಲಾಗಿತ್ತು, ಅದರಲ್ಲಿ ಯುದ್ಧ ವಿಮಾನದ 5 ಟಯರ್‌ಗಳು ಸಹ ಇದ್ದವು. ಇವುಗಳಲ್ಲಿ ಒಂದು ಟಯರ್ ಕಳ್ಳತನವಾಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. 

ಮಿರಾಜ್ 2000 ಯುದ್ಧ ವಿಮಾನ

ಮಿರಾಜ್ 2000 ಯುದ್ಧ ವಿಮಾನ ನಿರ್ಮಿಸಿರುವುದು ಫ್ರಾನ್ಸ್‌ನ ಡಸಾಲ್ಟ್ ಕಂಪನಿ. 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದು ಇದೇ ಮಿರಾಜ್ 2000 ವಿಮಾನ. ಭಾರತಕ್ಕೆ ಸರಬರಾಜು ಮಾಡಿದ ಮಿರಾಜ್ ಗಳಲ್ಲಿ ಸೀಮಿತವಾದ ವಾಯು ದಾಳಿ ಸಾಮರ್ಥ್ಯ ಇತ್ತು. ಆ ನಂತರ ಅದರಲ್ಲಿ ಭಾರೀ ಮಾರ್ಪಾಟು ಮಾಡಿ, ಲೇಸರ್-ಮಾರ್ಗದರ್ಶನದ ಬಾಂಬ್ ಗಳು ಹಾಗೂ ಸಾಂಪ್ರದಾಯಿಕವಾಗಿ ಬಳಕೆಯಾಗುವ ಬಾಂಬ್ ಗಳನ್ನು ಹಾಕಲು ಸಿದ್ಧಗೊಳಿಸಲಾಯಿತು.

ಪೂರ್ಣ ಪ್ರಮಾಣದಲ್ಲಿ ಸನ್ನದ್ಧವಾಗಿರುವ ಈ ಯುದ್ಧ ವಿಮಾನವು ಶತ್ರು ಪಾಳಯದ ಕಮ್ಯಾಂಡ್ ಬಂಕರ್ ಗಳನ್ನು ಧ್ವಂಸಗೊಳಿಸಿತ್ತು. 1999ರ ಜೂನ್- ಜುಲೈನಲ್ಲಿ ನಡೆದ ಆಪರೇಷನ್ ಸೇಫ್ಡ್ ಸಾಗರ್ ನಲ್ಲಿ ಎರಡು ಮಿರಾಜ್ ಸ್ಕ್ವಾಡ್ರನ್ ಬಳಸಲಾಗಿತ್ತು. ಆಗ ಐವತ್ತೈದು ಸಾವಿರ ಕೇಜಿಯಷ್ಟು ಬಾಂಬ್ ಸುರಿದಿತ್ತು.

ಮೇಲ್ದರ್ಜೆಗೆ ಏರಿದ ಮಿರಾಜ್ 2000

ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಎರಡು ಮೇಲ್ದರ್ಜೆಗೆ ಏರಿದ ಮಿರಾಜ್ 2000 ಯುದ್ಧ ವಿಮಾನ ಪಡೆದದ್ದು 10,000 ಕೋಟಿಗಿಂತ ಸ್ವಲ್ಪ ಕಡಿಮೆ ಮೊತ್ತಕ್ಕೆ. ಅದು 2018ರ ಜುಲೈ ತಿಂಗಳಲ್ಲಿ. ಭಾರತೀಯ ವಾಯು ಸೇನೆಯ ಪೈಲಟ್ ಗಳು ಫ್ರಾನ್ಸ್ ನಿಂದ ಇದೇ ವಿಮಾನದಲ್ಲಿ ವಾಪಸ್ ಬರುತ್ತಾ ಏಳು ದಿನಗಳಲ್ಲಿ ಗ್ರೀಸ್, ಈಜಿಪ್ಟ್, ಕತಾರ್ ಮೂಲಕ ಗ್ವಾಲಿಯರ್‌ನ ವಾಯು ಸೇನೆ ಕೇಂದ್ರದಲ್ಲಿ ಇಳಿಸಿದ್ದರು.

Latest Videos
Follow Us:
Download App:
  • android
  • ios