Asianet Suvarna News Asianet Suvarna News

ಮೋದಿ ನಂ. 1 ಜನ​ಪ್ರಿ​ಯ ನಾಯಕ: ಮಾರ್ನಿಂಗ್‌ ಕನ್ಸಲ್ಟೆಂಟ್‌ ಸಮೀಕ್ಷೆ ವರದಿ

Global Approval Rating PM Narendra Modi: ಜನ​ಪ್ರಿ​ಯ ಜಾಗತಿಕ ನಾಯಕರಲ್ಲಿ ಮೋದಿ ನಂ. 1 ಸ್ಥಾನ ಪಡೆದಿದ್ದಾರೆ ಎಂದು ಮಾರ್ನಿಂಗ್‌ ಕನ್ಸಲ್ಟೆಂಟ್‌ ಸಮೀಕ್ಷೆ ವರದಿ ನೀಡಿದೆ. ಆಸ್ಪ್ರೇಲಿಯಾ ಪ್ರಧಾನಿ ಆಲ್ಬನೀಸ್‌ ನಂ. 2 ಸ್ಥಾನ ಪಡೆದಿದ್ದರೆ, ಅಮೆರಿಕ ಅಧ್ಯಕ್ಷ ಬೈಡೆನ್‌ ನಂ.3 ಸ್ಥಾನ ಪಡೆದಿದ್ದಾರೆ. 

modi dominates list of most popular world leaders with 77 percent approval rating survey ash
Author
First Published Nov 26, 2022, 11:17 AM IST

ನವದೆಹಲಿ: ಭಾರತದ (India) ಪ್ರಧಾನಿ (Prime Minister) ಹುದ್ದೆಯಲ್ಲಿ ಸತತ 8ನೇ ವರ್ಷ ಮುಂದುವರೆದಿರುವ ನರೇಂದ್ರ ಮೋದಿ (Narendra Modi), ಜನ ಮೆಚ್ಚಿದ ಗಣ್ಯರ ಪೈಕಿ ಜಗತ್ತಿನಲ್ಲೇ ನಂ. 1 ಎಂಬ ಪಟ್ಟವನ್ನು ಪುನಃ ಕಾಯ್ದುಕೊಳ್ಳುವುದರ ಜೊತೆಗೆ, ಜನಪ್ರಿಯತೆ (Popularity) ಪ್ರಮಾಣ ಹೆಚ್ಚಿಸಿಕೊಂಡಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. 22 ದೇಶ​ಗಳ ನಾಯ​ಕರ ಸಾಧನೆ ಆಧ​ರಿಸಿ ಮಾರ್ನಿಂಗ್‌ ಕನ್ಸಲ್ಟೆನ್ಸಿ (Morning Consultancy) ಎಂಬ ತಾಣ ಆನ್‌ಲೈನ್‌ ಸಮೀಕ್ಷೆ ನಡೆ​ಸಿದೆ. ಇದರ ಅನ್ವಯ, ಶೇ. 77ರಷ್ಟು ಅಪ್ರೂವಲ್‌ ರೇಟಿಂಗ್‌ನೊಂದಿಗೆ (Approval Rating) ಜಗತ್ತಿನಲ್ಲೇ ಅತಿ ಹೆಚ್ಚು ಅಂಕ ಪಡೆದ ದೇಶದ ಗಣ್ಯರಾಗಿ ಮೋದಿ ಹೊರಹೊಮ್ಮಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಪ್ರಕಟಗೊಂಡಿದ್ದ ವರದಿಯಲ್ಲಿ ಕೂಡ ಮೋದಿ ಶೇ. 75ರಷ್ಟು ಅಪ್ರೂವಲ್‌ ರೇಟಿಂಗ್‌ ಹೊಂದಿ ಮೊದಲ ಸ್ಥಾನ​ದ​ಲ್ಲಿ​ದ್ದ​ರು.

ಉಳಿದಂತೆ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಶೇ. 56, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶೇ.41, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡ್ಯು ಶೇ. 38, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಶೇ.36, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಶೇ.23 ಅಂಕಗಳೊಂದಿಗೆ ಕ್ರಮವಾಗಿ 2 ರಿಂದ 6 ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಪುಟಿನ್, ಬೈಡೆನ್‌ರನ್ನೇ ಹಿಂದಿಕ್ಕಿದ ಮೋದಿ ಈಗ ವಿಶ್ವದ ನಂಬರ್ 1 ನಾಯಕ!

ಸಮೀಕ್ಷೆಯು ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್‌ನಲ್ಲಿನ ಸರ್ಕಾರಿ ನಾಯಕರು ಮತ್ತು ದೇಶದ ಪಥಗಳ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. , ಸ್ವೀಡನ್, ಸ್ವಿಜರ್ಲ್ಯಾಂಡ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.

ರೇಟಿಂಗ್‌ಗಳು ಪ್ರತಿದಿನ ಆನ್‌ಲೈನ್‌ನಲ್ಲಿ ನಡೆಸಿದ 20,000 ಜಾಗತಿಕ ಸಂದರ್ಶನಗಳನ್ನು ಆಧರಿಸಿವೆ ಎಂದು ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ ವರದಿ ಹೇಳಿದೆ, ಜಾಗತಿಕ ನಾಯಕ ಮತ್ತು ದೇಶದ ಟ್ರಾಜೆಕ್ಟರಿ ಡೇಟಾವು ನಿರ್ದಿಷ್ಟ ದೇಶದಲ್ಲಿನ ಎಲ್ಲಾ ವಯಸ್ಕರ 7-ದಿನದ ಮೂವಿಂಗ್ ಸರಾಸರಿಯನ್ನು ಆಧರಿಸಿದೆ ಹಾಗೂ, ಇದು ಶೇಕಡಾ 1-4 ರ ನಡುವೆ ಮಾರ್ಜಿನ್‌ ಆಫ್‌ ಎರರ್ ಹೊಂದಿದೆ ಎಂದೂ ಹೇಳಿದೆ.

ಇದನ್ನೂ ಓದಿ: ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸರಾಸರಿ ಸ್ಯಾಂಪಲ್‌ ಗಾತ್ರವು ಸುಮಾರು 45,000 ಆಗಿದ್ದರೆ, ಭಾರತ ಸೇರಿದಂತೆ ಇತರ ದೇಶಗಳಿಗೆ, ಸ್ಯಾಂಪಲ್‌ ಗಾತ್ರವು ಸರಿ ಸುಮಾರು 500 - 5,000 ವರೆಗೆ ಇರುತ್ತದೆ. ಭಾರತದಲ್ಲಿ, ಮಾದರಿಯು ಸಾಕ್ಷರ ಜನಸಂಖ್ಯೆಯ ಪ್ರತಿನಿಧಿಯಾಗಿದೆ.

ಟಾಪ್ 5 ನಾಯಕರು
ಮುಖ್ಯ​ಸ್ಥ​ರು           ​   ದೇ​ಶ ​             ಜ​ನ​ಪ್ರಿ​ಯ​ತೆ
ನರೇಂದ್ರ ಮೋದಿ       ಭಾರ​ತ             ಶೇ. 77
ಆ್ಯಂಟನಿ ಆಲ್ಬನೀಸ್‌  ಆಸ್ಪ್ರೇಲಿಯಾ   ಶೇ. 56
ಜೋ ಬೈಡೆನ್‌             ಅಮೆ​ರಿ​ಕ          ಶೇ. 41
ಜಸ್ಟಿನ್‌ ಟ್ರುಡ್ಯು          ಕೆನಡಾ            ಶೇ. 38
ರಿಷಿ ಸುನಕ್‌                ಬ್ರಿಟನ್‌            ಶೇ. 36
ಫುಮಿಯೋ ಕಿಶಿದಾ      ಜಪಾನ್‌          ಶೇ. 23

ಇದನ್ನು ಓದಿ: Modi Wave ಅಧ್ಯಯನ ವರದಿಯಲ್ಲಿ ಮೋದಿ ಜನಪ್ರಿಯತೆ ಬಹಿರಂಗ, ಹೊಸ ದಾಖಲೆ ನಿರ್ಮಾಣ!

Follow Us:
Download App:
  • android
  • ios