ರೋಡ್‌ಶೋ ವೇಳೆ ಮೋದಿಯತ್ತ ಎಸೆದ ಮೊಬೈಲ್ ತಡೆದ ಭದ್ರತಾ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!
ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿ ಪಾದಯತ್ರೆಯ ಮೂಲಕವೇ ರೋಡ್ ಶೋ ನಡೆಸುತ್ತಿರುವಾಗ, ಅವರ ಮೇಲೆ ಅಭಿಮಾನಿಗಳು ಹಾಗೂ ಜನರು ಪುಷ್ಪವೃಷ್ಟಿ ಎರಚಿದ್ದಾರೆ. ಈ ವೇಳೆ ಯಾರೋ ಮಿಸ್ಸಾಗಿ ಮೊಬೈಲ್ ಅನ್ನೂ ಎಸೆಯುತ್ತಾರೆ.
ಕೊಚ್ಚಿ (ಏಪ್ರಿಲ್ 26, 2023): ಪ್ರಧಾನಿ ಮೋದಿ ಕೇರಳದಲ್ಲಿ 2 ದಿನಗಳ ಕಾಲ ಭೇಟಿ ಮಾಡಿದ್ದಾರೆ. ಮೊದಲ ದಿನ ಅವರು ಕೊಚ್ಚಿಯಲ್ಲಿ ಪಾದಯತ್ರೆಯ ಮೂಲಕವೇ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಜನ ಹೂ ಮಳೆ ಸುರಿಸಿದ್ದಾರೆ. ಈ ವೇಳೆ, ಪ್ರಧಾನಿಗೆ ಭದ್ರತೆ ಉಲ್ಲಂಘನೆಯಾಗಿದ್ಯಾ ಅನ್ನೋ ಆರೋಪವೂ ಕೇಳಿಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿ ಪಾದಯತ್ರೆಯ ಮೂಲಕವೇ ರೋಡ್ ಶೋ ನಡೆಸುತ್ತಿರುವಾಗ, ಅವರ ಮೇಲೆ ಅಭಿಮಾನಿಗಳು ಹಾಗೂ ಜನರು ಪುಷ್ಪವೃಷ್ಟಿ ಎರಚಿದ್ದಾರೆ. ಯಾವುದೋ ವಸ್ತು ಧುತ್ತೆಂದು ಪ್ರಧಾನಿ ಮೋದಿಯತ್ತ ಬರುತ್ತದೆ. ಆದರೆ, ಸದಾ ಎಚ್ಚರ ಇರುವ ಎಸ್‌ಪಿಜಿ ಆ ವಸ್ತು ಪ್ರಧಾನಿಯತ್ತ ಹೋಗುವುದನ್ನು ತಡೆದಿದ್ದಾರೆ. ಆದರೆ, ಆ ವಸ್ತು ಮೊಬೈಲ್ ಫೋನ್ ಎಂದು ತಿಳಿದುಬಂದಿದೆ.
ಇದನ್ನು ಓದಿ: ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!
ಹೂವಿನ ಮಳೆ ಸುರಿಸುತ್ತಿರುವಾಗ ಯಾರೋ ಮಿಸ್ಸಾಗಿ ಹೂವಿನ ಜತೆಗೆ ಅಥವಾ ಹೂವಿನ ಬದಲಾಗಿ ಮೊಬೈಲ್ ಫೋನ್ ಎಸೆದಿದ್ದಾರೆ. ಆದರೆ, ಯಾವುದೇ ಅನಾಹುತ ನಡೆದಿಲ್ಲ. ಅವರ ಮೇಲೆ ಹೂವಿನೊಂದಿಗೆ ತೂರಿ ಬಂದ ಮೊಬೈಲನ್ನು ಪ್ರಧಾನಿಯ ಭದ್ರತಾ ಸಿಬ್ಬಂದಿ (ಎಸ್‌ಪಿಜಿ) ತಡೆದಿದ್ದಾರೆ. ಈ ಹಿನ್ನೆಲೆ ಆ ಭದ್ರತಾ ಸಿಬ್ಬಂದಿ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆಯ ವಿವರ..
ಪ್ರಧಾನಿ ಮೋದಿ ಕೇರಳದ ಕೊಚ್ಚಿಯಲ್ಲಿ ನಡೆದ ರೋಡ್‌ಶೋ ವೇಳೆ ಜನರತ್ತ ಕೈಬೀಸಿ ಬರುತ್ತಿರುವಾಗ ಅವರ ಮೇಲೆ ರಸ್ತೆಯ ಇಕ್ಕೆಲಗಳ ಜನರು ಪುಷ್ಪವೃಷ್ಟಿ ಮಾಡುತ್ತಿರುತ್ತಾರೆ. ಆಗ ಯಾರೋ ಅವರತ್ತ ಮೊಬೈಲನ್ನು ತೂರುತ್ತಾರೆ. ಪ್ರಧಾನಿ ಭದ್ರತೆಗೆ ಮೈಯೆಲ್ಲ ಕಣ್ಣಾಗಿರಿಸುವ ಎಸ್‌ಪಿಜಿ ಸಿಬ್ಬಂದಿ, ಕೂಡಲೇ ಮೊಬೈಲನ್ನು ಕೈಯಿಂದ ತಡೆದು, ನಂತರ ಕಾಲಿನಿಂದ ಆತ ಸರಿಸುತ್ತಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಳಿಕ, ಮತ್ತೊಬ್ಬರು ಭದ್ರತಾ ಸಿಬ್ಬಂದಿ ಆ ಫೋನನ್ನು ಮಾಲೀಕರಿಗೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ಒಟ್ಟಾರೆ, ಪ್ರಧಾನಿ ಮೋದಿ ರೋಡ್ ಶೋಗೆ ಕೊಚ್ಚಿಯಲ್ಲಿ ಅದ್ಭುತವಾದ ಸ್ವಾಗತ ದೊರಕಿದೆ. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತುಕೊಂಡು ಪ್ರಧಾನಿ ಮೋದಿಯನ್ನು ನೋಡುತ್ತಿದ್ದರು ಹಾಗೂ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಜತೆಗೆ ಹೂವಿನ ಮಳೆಯನ್ನೂ ಸುರಿಸಿದ್ದಾರೆ. ಈ ಹಿನ್ನೆಲೆ ಆತಂಕವಿದ್ದರೂ, ಕಾರಿನಿಂದ ಕೆಳಗಿಳಿದು ಪ್ರಧಾನಿ ಮೋದಿ ಪಾದಯಾತ್ರೆ ಮಾಡಿದ್ದಾರೆ.
ಇದನ್ನೂ ಓದಿ: ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಕಾಂಗ್ರೆಸ್ ಸಂಸದನ ಪೋಸ್ಟರ್: ನೆಟ್ಟಿಗರ ಕಿಡಿ
ಪ್ರಧಾನಿ ಮೋದಿ ತಮ್ಮ 2 ದಿನಗಳ ಕೇರಳ ಭೇಟಿ ವೇಳೆ ಮೊದಲ ವಂದೇ ಭಾರತ್ ರೈಲು ಹಾಗೂ ವಾಟರ್ ಮಟ್ರೋಗೆ ಚಾಲನೆ ನೀಡಿದ್ದಾರೆ. ಮಂಗಳವಾರ ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ರಾಜಧಾನಿ ತಿರುವನಂತಪುರದಿಂದ ಹೊರಡುವ ಈ ರೈಲು ಕರ್ನಾಟಕ ಗಡಿಯ ಹಾಗೂ ಕನ್ನಡಿಗರೇ ಹೆಚ್ಚಿರುವ ಕಾಸರಗೋಡು ತಲುಪಲಿದೆ. ಈ ರೈಲು ಸುಮಾರು 8 ತಾಸಿನಲ್ಲಿ ತನ್ನ ಪ್ರಯಾಣ ಪೂರ್ಣಗೊಳಿಸುತ್ತದೆ. ಇದರಿಂದ ಈವರೆಗೆ ಕಾಸರಗೋಡು-ತಿರುವನಂತಪುರ ನಡುವೆ ಇದ್ದ 11 ತಾಸಿನ ಪ್ರಯಾಣ ಅವಧಿ ಕೇವಲ 8 ತಾಸಿಗೆ ಇಳಿಯಲಿದೆ. ಪ್ರಯಾಣ ದರ ವಿವಿಧ ವರ್ಗಗಳಿಗೆ ಅನುಗುಣವಾಗಿ 1590 ರು.ನಿಂದ ಆರಂಭವಾಗಿ 2,815 ರೂ.ವರೆಗೂ ಇರಲಿದೆ.
ಇದನ್ನೂ ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ