‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ
ನಾನು ಶೀಘ್ರದಲ್ಲೇ ಸಿಎಂ ಯೋಗಿಯನ್ನು ಕೊಲ್ಲುತ್ತೇನೆ ಎಂದು ಏಪ್ರಿಲ್ 23 ರಂದು ರಾತ್ರಿ 10. 22 ಕ್ಕೆ ಯುಪಿ ಸರ್ಕಾರದ ತುರ್ತು ಸೇವೆಯ ಸಂಖ್ಯೆಗೆ ಬೆದರಿಕೆ ಸಂದೇಶ ಕಳಿಸಲಾಗಿದೆ.
ಲಖನೌ (ಏಪ್ರಿಲ್ 25, 2023): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಮತ್ತೆ ಬೆದರಿಕೆ ಕೇಳಿಬಂದಿದೆ. ಇತ್ತೀಚೆಗಷ್ಟೇ ಮಾಧ್ಯಮ ಸಂಸ್ಥೆಗೆ ಇಮೇಲ್ ಬೆದರಿಕೆ ಬಂದಿರುವ ಬೆನ್ನಲ್ಲೇ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬರು 'ಡಯಲ್ 112' (ಉತ್ತರ ಪ್ರದೇಶ ಸರ್ಕಾರವು ತುರ್ತು ಸೇವೆಗಳಿಗಾಗಿ ಪ್ರಾರಂಭಿಸಿರುವ ಸಂಖ್ಯೆ) ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಬೆದರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ.
"ನಾನು ಶೀಘ್ರದಲ್ಲೇ ಸಿಎಂ ಯೋಗಿಯನ್ನು ಕೊಲ್ಲುತ್ತೇನೆ" ಎಂದು ಏಪ್ರಿಲ್ 23 ರಂದು ರಾತ್ರಿ 10. 22 ಕ್ಕೆ ಸಂದೇಶ ಕಳಿಸಲಾಗಿದೆ. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶ ರಾಜಧಾನಿ ಲಖನೌನ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506, 507 ಮತ್ತು ಐಟಿ ಕಾಯ್ದೆ 66 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ‘ಡಯಲ್ 112’ಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪಿಎಸ್ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಸೆಕ್ಷನ್ 506 ಮತ್ತು 507 ಐಪಿಸಿ ಮತ್ತು 66 ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಇನ್ನು, ಈ ಸಂದೇಶ ಕಳುಹಿಸಿದವರನ್ನು ರೆಹಾನ್ ಎಂದು ಪೊಲೀಸರು ಗುರುತಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಇ - ಮೇಲ್
ಈ ತಿಂಗಳ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಮಾಧ್ಯಮ ಸಂಸ್ಥೆಗೆ ಇಮೇಲ್ ಕಳುಹಿಸಿದ ಆರೋಪದ ಮೇಲೆ 16 ವರ್ಷದ ಶಾಲಾ ಬಾಲಕನನ್ನು ನೋಯ್ಡಾ ಪೊಲೀಸರು ಲಖನೌನಲ್ಲಿ ವಶಕಕೆ ಪಡೆದಿದ್ದರು.
ಬಿಹಾರದ ನಿವಾಸಿಯಾಗಿರುವ ಹದಿಹರೆಯದ ಬಾಲಕನನ್ನು ಲಖನೌನ ಚಿನ್ಹಾಟ್ ಪ್ರದೇಶದಿಂದ ಬಂಧಿಸಿ ನೋಯ್ಡಾಕ್ಕೆ ಕರೆತರಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ನೋಯ್ಡಾ) ರಜನೀಶ್ ವರ್ಮಾ ತಿಳಿಸಿದ್ದಾರೆ. ಆರೋಪಿ ಬಾಲಕನನ್ನು ನೋಯ್ಡಾದ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನಂತರ ಜಾಮೀನು ನೀಡಿ ಬಿಡುಗಡೆ ಮಾಡಲಾಯಿತು ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಅತೀಕ್ ಅಹ್ಮದ್ ಹತ್ಯೆ ಕೇಸ್: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ
ಏಪ್ರಿಲ್ 5 ರಂದು ನೋಯ್ಡಾ ಪೊಲೀಸರಿಗೆ ಮಾಹಿತಿ ನೀಡಿದ್ದ ಖಾಸಗಿ ಟೆಲಿವಿಷನ್ ನ್ಯೂಸ್ ಗ್ರೂಪ್, ಅಪರಿಚಿತರು ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಅವರನ್ನು ಹತ್ಯೆ ಮಾಡುವ ಬೆದರಿಕೆಯ ಇಮೇಲ್ ಕಳಿಸಿದ್ದಾರೆ ಎಂದು ಮಾಹಿತಿ ನೀಡಿತ್ತು "ನಮ್ಮ CFO ಅವರು ಏಪ್ರಿಲ್ 3 ರಂದು ರಾತ್ರಿ 10:23 ರ ಸುಮಾರಿಗೆ ಶ್ರೀ ಕಾರ್ತಿಕ್ ಸಿಂಗ್ ಅವರಿಂದ "mailto:singhkartik78107@gmail.com"singhkartik78107@gmail.com ಎಂಬ ಇಮೇಲ್ ಐಡಿಯೊಂದಿಗೆ ಸ್ವೀಕರಿಸಿದ ಇಮೇಲ್ ಕುರಿತು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.. ಈ ಇಮೇಲ್‌ನಿಂದ ನೋಡಬಹುದಾದಂತೆ, ಕಳುಹಿಸುವವರು ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಮತ್ತು ಗೌರವಾನ್ವಿತ ಪ್ರಧಾನಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’’ ಎಂದು ಸುದ್ದಿ ವಾಹಿನಿ ದೂರಿನಲ್ಲಿ ತಿಳಿಸಿತ್ತು.
ಇನ್ನೊಂದೆಡೆ, ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ ಕೇರಳದಲ್ಲೂ ಬೆದರಿಕೆ ಪತ್ರ ಬಂದಿತ್ತು. ಅವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಯೋಗಿ ಆಡಳಿತದಲ್ಲಿ 10,900 ಎನ್‌ಕೌಂಟರ್: 183 ಕ್ರಿಮಿನಲ್‌ಗಳ ಹತ್ಯೆ, 23,300 ಬಂಧನ