Tax Law Violation : Xiaomi, Oppo ಕಂಪನಿಗೆ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ದಂಡ?

ಶಿಯೋಮಿ (Xiaomi), ಒಪ್ಪೋ (Oppo) ಕಂಪನಿಗಳ ಮೇಲೆ ಐಟಿ ದಾಟಿ
ತೆರಿಗೆ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಕಂಪನಿಗಳು
1 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ದಂಡ ಬೀಳುವ ಸಾಧ್ಯತೆ

mobile phone makers Xiaomi and Oppo can be fined 1,000 crore for violating the tax law says Income Tax department san

ನವದೆಹಲಿ (ಡಿ. 31): ದೇಶದ ಅಗ್ರ ಮೊಬೈಲ್ ತಯಾರಕ ಕಂಪನಿಗಳಾಗಿರುವ ಶಿಯೋಮಿ (Xiaomi), ಒಪ್ಪೋ (Oppo) ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ (Income Tax department) ಕಣ್ಣು ಬಿದ್ದಿದ್ದು, ತೆರಿಗೆ ಕಾನೂನು ( Tax Law Violation) ಉಲ್ಲಂಘಿಸಿದ ಆರೋಪದಲ್ಲಿ ಈ ಎರಡು ಕಂಪನಿಗೆ ಅಂದಾಜು 1 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಪ್ರಮಾಣದ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕಳೆದ ವಾರ ಇಡೀ ದೇಶಾದ್ಯಂತ ಇರುವ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಗಳನ್ನು ನಡೆಸಿತ್ತು.

ಚೀನಾ (China)ಮೂಲದ ಮೊಬೈಲ್ ತಯಾರಕ ಕಂಪನಿಗಳು ಹಾಗೂ ಉತ್ಪಾದನಾ ಘಟಕಗಳ ಮೇಲೆ ಡಿಸೆಂಬರ್ 21 ಹಾಗೂ 22 ರಂದು ದೇಶಾದ್ಯಂತ ಐಟಿ ಇಲಾಖೆ ನಡೆಸಿತ್ತು. ಶಿಯೋಮಿ (Xiaomi), ಒಪ್ಪೋ (Oppo) ಅಲ್ಲದೆ, ಒನ್ ಪ್ಲಸ್ (OnePlus), ಡಿಕ್ಸಾನ್ (Dixon), ಫಾಕ್ಸ್ ಕಾನ್ (Foxconn) ಮತ್ತು ರೈಸಿಂಗ್ ಸ್ಟಾರ್ ಇಂಡಿಯಾ (Rising Star India) ಕಂಪನಿಗಳ ಮೊಬೈಲ್ ಉತ್ಪಾದಕರು ಹಾಗೂ ವಿತರಕ ಕಂಪನಿಗಳ ಮೇಲೆ ದಾಳಿ ನಡೆಸಲಾಗಿತ್ತು. ದೆಹಲಿ ಸೇರಿದಂತೆ ಕರ್ನಾಟಕ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ ಹಾಗೂ ರಾಜಸ್ಥಾನದಲ್ಲಿದ್ದ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಇವುಗಳ ಪೈಕಿ ಈ ಎರಡು ಕಂಪನಿಗಳು ವಿದೇಶದಲ್ಲಿರುವ ತಮ್ಮದೇ ಗುಂಪಿನ ಕಂಪನಿಗಳಿಗೆ ರಾಯಲ್ಟಿ ರೂಪದಲ್ಲಿ ಒಟ್ಟು 5500 ಕೋಟಿ ರೂಪಾಯಿಯಷ್ಟು ರವಾನೆ ಮಾಡಿರುವುದು ಶೋಧ ಕಾರ್ಯದಿಂದ ತಿಳಿದುಬಂದಿದೆ' ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

"ಈ ಕಂಪನಿಗಳು ಸಂಬಂಧಿತ ಉದ್ಯಮಗಳೊಂದಿಗಿನ ವಹಿವಾಟುಗಳನ್ನು ಬಹಿರಂಗಪಡಿಸಲು ಆದಾಯ-ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಸೂಚಿಸಲಾದ ನಿಯಂತ್ರಕ ಆದೇಶವನ್ನು ಅನುಸರಿಸಿಲ್ಲ. ಅಂತಹ ಲೋಪವು ಆದಾಯ-ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಅವರ ವಿರುದ್ಧ ದಂಡದಂಥ ಕ್ರಮವನ್ನು ಕೈಗೊಳ್ಳಲು ಅವಕಾಶವಿದೆ. ಈಗ ಇರುವ ಪ್ರಕಾರ ಈ ಎರಡು ಕಂಪನಿಗಳಿಗೆ ಪ್ರಸ್ತುತ 1 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಹಣವನ್ನು ದಂಡ ವಿಧಿಸುವ ಸಾಧ್ಯತೆ ಇದೆ' ಎಂದು ವಿವರಿಸಿದೆ.

Income Tax Return:ಡಿ.31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ? ಎಷ್ಟು ದಂಡ ಬೀಳುತ್ತೆ?
ಅದಲ್ಲದೆ, ಈ ಕಂಪನಿಗಳ ವಿದೇಶಿ ನಿಧಿಯ ಮೂಲವೂ ಸಹ ಅನುಮಾನಾಸ್ಪದವಾಗಿದೆ ಎಂದು ಕೇಂದ್ರದ ಸಂಸ್ಥೆ ತಿಳಿಸಿದೆ. "ನಾವು ನಡೆಸಿದ ಶೋಧ ಕಾರ್ಯದ ಮೂಲಕ ಮತ್ತೊಂದು ರೀತಿಯ ತೆರಿಗೆ ವಂಚನೆಯ ಮಾರ್ಗವನ್ನು ಕಂಡುಹಿಡಿಯಲಾಗಿದೆ. ಅದೇನೆಂದರೆ, ಭಾರತೀಯ ಕಂಪನಿಗಳ ಬ್ಯಾಲೆನ್ಸ್ ಶೀಟ್ ಗಳಲ್ಲಿ ವಿದೇಶಿ ನಿಧಿಗಳನ್ನು ಪರಿಚಯ ಮಾಡಲಾಗಿದೆ. ಆದರೆ, ಈ ಹಣವನ್ನ ಯಾವ ಮೂಲದಿಂದ ಪಡೆಯಲಾಗಿದೆ ಹಾಗೂ ಅದರ ಸ್ವೀಕಾರವನ್ನು ಹೇಗೆ ಮಾಡಲಾಗಿದೆ ಎನ್ನುವು ವಿಚಾರ ಅನುಮಾನಕ್ಕೆ ಕಾರಣವಾಗಿದೆ. ಯಾಕೆಂದರೆ ಯಾವ ಮೂಲದಲ್ಲೂ ಸಾಲದಾತರ ಕುರಿತಾಗಿ ಮಾಹಿತಿಗಳಿಲ್ಲ' ಎಂದು ಇಲಾಖೆ ತಿಳಿಸಿದೆ.

IT Probe On Food Delivery Apps: ಡಿಸ್ಕೌಂಟ್ ನೀಡಿ ತಗಲಾಕಿಕೊಂಡ ಜೊಮ್ಯಾಟೋ, ಸ್ವಿಗ್ಗಿ; ಆದಾಯ ತೆರಿಗೆ ಇಲಾಖೆಯಿಂದ ತನಿಖೆ!
"ಅಂತಹ ಸಾಲಗಳ ಪ್ರಮಾಣ" ಸುಮಾರು ₹ 5,000 ಕೋಟಿಗಳಾಗಿದ್ದು, ಅದರ ಮೇಲೆ ಬಡ್ಡಿ ವೆಚ್ಚಗಳನ್ನು ಸಹ ಕ್ಲೈಮ್ ಮಾಡಲಾಗಿದೆ ಎಂದು ಅದು ಒತ್ತಿಹೇಳಿದೆ. ಇದರಲ್ಲಿ ಒಂದು ಕಂಪನಿಯು ಭಾರತೀಯ ಸಂಸ್ಥೆಯ ಸೇವೆಗಳನ್ನು ಬಳಕೆ ಮಾಡಿಕೊಂಡಿದೆ. ಇದರಿಂದಾಗಿ ಆ ಕಂಪನಿಯೂ ಕೂಡ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಉಲ್ಲಂಘನೆಯ ಮೇಲೆ 300 ಕೋಟಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಹೇಳಿದೆ.

Latest Videos
Follow Us:
Download App:
  • android
  • ios