Asianet Suvarna News Asianet Suvarna News

IT Probe On Food Delivery Apps: ಡಿಸ್ಕೌಂಟ್ ನೀಡಿ ತಗಲಾಕಿಕೊಂಡ ಜೊಮ್ಯಾಟೋ, ಸ್ವಿಗ್ಗಿ; ಆದಾಯ ತೆರಿಗೆ ಇಲಾಖೆಯಿಂದ ತನಿಖೆ!

*ಜನವರಿ 1ರಿಂದ GST ವ್ಯಾಪ್ತಿಗೊಳಪಡಲಿವೆ ಫುಡ್ ಡೆಲಿವರಿ ಆ್ಯಪ್ ಗಳು
*ಗ್ರಾಹಕರಿಂದ ಶೇ.5  GST ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಿದೆ.
*ಡಿಸ್ಕೌಂಟ್ ಆಫರ್ ಗೆ ಸಂಬಂಧಿಸಿ ರೆಸ್ಟೋರೆಂಟ್ ಹಾಗೂ ಫುಡ್ ಡೆಲಿವರಿ ಆ್ಯಪ್ ಗಳ ನಡುವೆ ಒಪ್ಪಂದ ನಡೆದಿರೋ ಶಂಕೆ

discounts offered by  Zomato Swiggy are set to face IT department scrutiny anu
Author
Bangalore, First Published Dec 29, 2021, 8:17 PM IST

ಬೆಂಗಳೂರು (ಡಿ.29):  ಗ್ರಾಹಕರಿಗೆ ಕೂಪನ್  ಡಿಸ್ಕೌಂಟ್ಸ್ (coupon discounts) ಆಫರ್ ಗಳನ್ನು ನೀಡಿರೋ ಕಾರಣಕ್ಕೆ ಆನ್ ಲೈನ್ (Online)ಆಹಾರ ಪೂರೈಕೆ (Food delivery) ಸಂಸ್ಥೆಗಳಾದ ಜೊಮ್ಯಾಟೋ (Zomato) ಹಾಗೂ ಸ್ವಿಗ್ಗಿ(Swiggy) ಸರಕು ಹಾಗೂ ಸೇವಾ ತೆರಿಗೆ (GST) ವ್ಯವಸ್ಥೆಯಡಿಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ(Income Tax department)ತನಿಖೆ  (scrutiny) ಎದುರಿಸೋ ಸಾಧ್ಯತೆಯಿದೆ ಎಂದು ವರದಿಯಾಗಿದೆ.   

ನಿರ್ದಿಷ್ಟ ಬ್ಯಾಂಕ್ ಅಥವಾ ಹಣಕಾಸು ಸೇವಾ ಸಂಸ್ಥೆ ಕ್ರೆಡಿಟ್ ಕಾರ್ಡ್(Credt card), ಡೆಬಿಟ್ ಕಾರ್ಡ್ (Debit card) ಅಥವಾ ಇತರ ಡಿಜಿಟಲ್ ವ್ಯಾಲೆಟ್ ಗಳ (Digital wallet) ಮೂಲಕ ಪಾವತಿ ಮಾಡಿದ್ರೆ ಕೂಪನ್ ಡಿಸ್ಕೌಂಟ್ ಗಳನ್ನು ಈ ಎರಡು ಆನ್ ಲೈನ್ ಆಹಾರ ಪೂರೈಕೆ ಸಂಸ್ಥೆಗಳು ಘೋಷಿಸಿದ್ದು, ಇದಕ್ಕೆ ಸಂಬಂಧಿಸಿ ತನಿಖೆ ನಡೆಯಲಿದೆ ಎಂದು ಹೇಳಲಾಗಿದೆ. ಅಲ್ಲದೆ,  ಈ ರೀತಿ  ಕೂಪನ್ ಡಿಸ್ಕೌಂಟ್ಸ್ ನೀಡಿರೋದ್ರ ಹಿಂದೆ ಫುಡ್ ಡೆಲಿವರಿ ಆ್ಯಪ್ ಗಳು ಹಾಗೂ ರೆಸ್ಟೋರೆಂಟ್ ಗಳ ನಡುವೆ ಏನಾದ್ರೂ ಒಳಒಪ್ಪಂದ ನಡೆದಿದೆಯೇ ಎಂಬ ಬಗ್ಗೆ ಕೂಡ ತನಿಖೆ ನಡೆಯೋ ಸಾಧ್ಯತೆಯಿದೆ. ಜನವರಿ 1ರಿಂದ ಈ ಫುಡ್ ಡೆಲಿವರಿ ಸಂಸ್ಥೆಗಳು ಜಿಎಸ್ ಟಿ ವ್ಯಾಪ್ತಿಗೊಳಪಡಲಿವೆ. 

Food Delivery stats ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿ ಆರ್ಡರ್ to 6,000 ರೂ ಟಿಪ್ಸ್, 2021ರ ಸ್ವಿಗ್ಗಿಯ ಅಚ್ಚರಿ ಸುದ್ದಿ!

ಜನವರಿ 1ರಿಂದ  ಈ ಫುಡ್ ಡೆಲಿವರಿ ಅಪ್ಲಿಕೇಷನ್ ಗಳು ಗ್ರಾಹಕರಿಂದ ಶೇ.5ರಷ್ಟು ಜಿಎಸ್ ಟಿ ಸಂಗ್ರಹಿಸಿ ರೆಸ್ಟೋರೆಂಟ್ ಪರವಾಗಿ ಸರ್ಕಾರಕ್ಕೆ ನೀಡಬೇಕಿದೆ. ಸೆಪ್ಟೆಂಬರ್ 17ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ಕೂಡ ಸಿಕ್ಕಿದೆ. ಸರ್ಕಾರಕ್ಕೆ ಈ ತನಕ ತೆರಿಗೆ ಪಾವತಿಸದ ರೆಸ್ಟೋರೆಂಟ್ ಗಳನ್ನು ಜಿಎಸ್ ಟಿ (GST) ವ್ಯಾಪ್ತಿಯೊಳಗೆ ತರೋ ಉದ್ದೇಶದಿಂದ ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ.

ಅನುಮಾನ ಮೂಡಲು ಕಾರಣವೇನು?
ಗ್ರಾಹಕ ನೇರವಾಗಿ ನಿರ್ದಿಷ್ಟ ರೆಸ್ಟೋರೆಂಟ್ ನಿಂದ ಆಹಾರ ಖರೀದಿಸಿದ್ರೆ ಆತನಿಗೆ ಯಾವುದೇ ಡಿಸ್ಕೌಂಟ್ ಸಿಗೋದಿಲ್ಲ. ಅದೇ ಆತ  ಈ ಫುಡ್ ಡೆಲಿವರಿ  ಆ್ಯಪ್ ಗಳನ್ನು ಬಳಸಿ ಅದೇ ರೆಸ್ಟೋರೆಂಟ್ ನಿಂದ ಫುಡ್ ಆರ್ಡರ್ ಮಾಡಿದ್ರೆ ಡಿಸ್ಕೌಂಟ್ ಸಿಗುತ್ತೆ. ಇದು ಹೇಗೆ ಸಾಧ್ಯ ಎಂಬುದೇ ಅನುಮಾನಕ್ಕೆ ಕಾರಣವಾಗಿರೋದು. ರೆಸ್ಟೋರೆಂಟ್ ಗಳು ತಮ್ಮ ವ್ಯಾಪಾರ ಅಭಿವೃದ್ಧಿಪಡಿಸಲು ಈ ಫುಡ್ ಅಪ್ಲಿಕೇಷನ್ ಗಳ ಜೊತೆ ಒಪ್ಪಂದ ಮಾಡಿಕೊಂಡಿರೋದು ಇದ್ರಿಂದ ಸ್ಪಷ್ಟವಾಗುತ್ತದೆ. ಇನ್ನು ನಿರ್ದಿಷ್ಟ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿದ್ರೆ ಶೇ.5 ಅಥವಾ ಶೇ.10 ಡಿಸ್ಕೌಂಟ್ ನೀಡಲಾಗುತ್ತದೆ. ಉದಾಹರಣೆಗೆ ಗ್ರಾಹಕ ಆರ್ಡರ್ ಮಾಡಿದ ಫುಡ್ ಮೊತ್ತ 500ರೂ. ಆಗಿದೆ ಎಂದು ಭಾವಿಸೋಣ ಇದಕ್ಕೆ 75ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಅಂದ್ರೆ ಗ್ರಾಹಕ 425ರೂ. ಪಾವತಿಸಿದ್ರೆ ಸಾಕು. ಈಗ ಇಲ್ಲಿ ಉದ್ಭವಿಸೋ ಪ್ರಮುಖ ಪ್ರಶ್ನೆಯೆಂದ್ರೆ ಶೇ.5 ಜಿಎಸ್ ಟಿಯನ್ನು 500ರೂ. ಮೇಲೆ ವಿಧಿಸೋದು ಅಥವಾ 425ರೂ. ಮೇಲೋ ಎಂಬುದು. ಇನ್ನು ಬ್ಯಾಂಕ್ ಗಳು ತಮ್ಮ ಕ್ರೆಡಿಟ್ ಕಾರ್ಡ್ ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಲು ಕೂಡ ಫುಡ್ ಡೆಲಿವರಿ ಆ್ಯಪ್ ಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತವೆ. ಇದೇ ಕಾರಣಕ್ಕೆ ನಿರ್ದಿಷ್ಟ ಬ್ಯಾಂಕ್ ನ ಕಾರ್ಡ್ ಗೆ ಮಾತ್ರ ಡಿಸ್ಕೌಂಟ್ ನೀಡಲಾಗುತ್ತದೆ. ಇನ್ನು ಈ ರೀತಿ ಡಿಸ್ಕೌಂಟ್ ನೀಡಲು ರೆಸ್ಟೋರೆಂಟ್ ಗಳು ಹಾಗೂ ಬ್ಯಾಂಕ್ ಗಳು ಈ ಫುಡ್ ಡೆಲಿವರಿ ಆ್ಯಪ್ ಗಳಿಗೆ ಹಣ ಪಾವತಿಸುತ್ತಿವೆಯಾ ಎಂಬ ಅನುಮಾನ ಆದಾಯ ತೆರಿಗೆ ಇಲಾಖೆಗಿದ್ದು,ಈ ಬಗ್ಗೆಯೂ ತನಿಖೆ ನಡೆಸೋ ಸಾಧ್ಯತೆಯಿದೆ.

GST On Food Delivery Apps:ಜ.1ರಿಂದ ಬದಲಾಗಲಿದೆ Swiggy, Zomato ಮೇಲಿನ ತೆರಿಗೆ ನೀತಿ

ಇನ್ನು ಫುಡ್ ಡೆಲಿವರಿ  ಆ್ಯಪ್ ಗಳು ವಿಧಿಸೋ ಹೆಚ್ಚುವರಿ ಶುಲ್ಕಗಳಾದ ಡೆಲಿವರಿ ಜಾರ್ಜ್, ಪ್ಯಾಕಿಂಗ್ ಶುಲ್ಕ, ಡೆಲಿವರಿ ಬಾಯ್ಸ್ ಟಿಪ್ಸ್ ಇತ್ಯಾದಿ ಕೂಡ ಜಿಎಸ್ ಟಿ ವ್ಯಾಪ್ತಿಗೆ ಬರುತ್ತದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ. ಹೀಗಾಗಿ ಈ ಎಲ್ಲ ಶುಲ್ಕಗಳನ್ಉ ಭರಿಸಲು ಶೇ.5 ಜಿಎಸ್ ಟಿ ಬದಲು ಶೇ.18ರಷ್ಟು ಜಿಎಸ್ ಟಿ ವಿಧಿಸಲು ಫುಡ್ ಡೆಲಿವರಿ  ಆ್ಯಪ್ ಗಳು ಯೋಚಿಸುತ್ತಿವೆ ಎಂದು ಕೂಡ ವರದಿಯಾಗಿದೆ. 

Follow Us:
Download App:
  • android
  • ios