ಶರ್ಟ್ ಜೇಬಿನಲ್ಲಿದ್ದಾಗಲೇ ಮೊಬೈಲ್ ಸ್ಫೋಟ: 76ರ ವೃದ್ಧ ಜಸ್ಟ್ ಎಸ್ಕೇಪ್
ಕೇರಳದ ತ್ರಿಶ್ಶೂರು ಸನಿಹ 76 ವರ್ಷದ ವೃದ್ಧನೊಬ್ಬನ ಮೊಬೈಲ್, ಆತನ ಅಂಗಿಯ ಜೇಬಿನಲ್ಲೇ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದಾನೆ.
ತ್ರಿಶ್ಶೂರು: ಕೇರಳದ ತ್ರಿಶ್ಶೂರು ಸನಿಹ 76 ವರ್ಷದ ವೃದ್ಧನೊಬ್ಬನ ಮೊಬೈಲ್, ಆತನ ಅಂಗಿಯ ಜೇಬಿನಲ್ಲೇ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದಾನೆ. ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಹೋಟೆಲ್‌ನಲ್ಲಿ ಕುಳಿತು ಚಹಾ ಸೇವಿಸುತ್ತಿದ್ದ. ಆಗ ಜೇಬಿನಲ್ಲಿದ್ದ ಮೊಬೈಲ್ ಸಿಡಿದಿದೆ. ಬಳಿಕ ತಕ್ಷಣ ಅದನ್ನು ಕೆಳಗೆ ಎಸೆದಿದ್ದಾನೆ. ಎಸೆದ ತಕ್ಷಣ ಅದು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವ್ಯಕ್ತಿಯ ಸಮಯ ಪ್ರಜ್ಞೆಯಿಂದಾಗಿ ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ಈ ರೀತಿಯ ಮೊಬೈಲ್ ಸ್ಫೋಟ ಘಟನೆ ಮೂರನೇ ಬಾರಿ ನಡೆದಿದ್ದು, ಕಳೆದ ವಾರ ಕಲ್ಲಿಕೋಟೆಯಲ್ಲಿ ಹಾಗೂ ಏ.24ರಂದು ತ್ರಿಶ್ಶೂರ್‌ನಲ್ಲಿ ಮೊಬೈಲ್ ಸ್ಫೋಟಕ್ಕೆ ಮಗು ಬಲಿಯಾಗಿತ್ತು.
ಇಲಿಯಾಸ್ ಅಪಾಯದಿಂದ ಪಾರಾದ ವ್ಯಕ್ತಿ. ಗುರುವಾರ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ಇಲಿಯಾಸ್ (Iliyas) ಮರೋಟ್ಟಿಚಾಲ್ ಪ್ರದೇಶದ ಚಹಾ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತು ಚಹಾ ಸೇವಿಸುತ್ತಿದ್ದಾಗ ಘಟನೆ ನಡೆದಿದೆ. ಕೂಡಲೇ ಚಹಾ ಅಂಗಡಿಯವರು ಕೂಡ ಆತನ ನೆರವಿಗೆ ಬಂದಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ವೀಡಿಯೊದಲ್ಲಿ ಕಾಣಿಸುವಂತೆ ವೃದ್ಧರೊಬ್ಬರು ಚೇರ್‌ನಲ್ಲಿ ಕುಳಿತು ಚಹಾ (Tea) ಸೇವಿಸುತ್ತಿದ್ದು, ಇದ್ದಕ್ಕಿದ್ದಂತೆ ಅವರ ಜೇಬಿನಲ್ಲಿದ್ದ ಮೊಬೈಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅವರು ಮೊಬೈಲ್ ಅನ್ನು ಕೆಳಕ್ಕೆಸೆದಿದ್ದಾರೆ. ಅಷ್ಟರಲ್ಲೇ ಅದು ಸ್ಪೋಟಿಸಿದೆ.
ಏಕಾಏಕಿ ಮೊಬೈಲ್ ಬ್ಲಾಸ್ಟ್: ಬೆಚ್ಚಿಬಿದ್ದ ಅಂಗಡಿ ಮಾಲೀಕ!
ಘಟನೆಗೆ ಸಂಬಂಧಿಸಿದಂತೆ ಒಲ್ಲೂರು ಪೊಲೀಸ್ ಅಧಿಕಾರಿ (Police Officer) ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕೇಳಲು ವೃದ್ಧನನ್ನು ಪೊಲೀಸ್ ಠಾಣೆಗೆ ಕರೆಸಿದ್ದೆವು. ಆತ ನೀಡಿದ ಮಾಹಿತಿಯಿಂತೆ ಈ ಫೋನ್ ಅನ್ನು ವರ್ಷದ ಹಿಂದೆ 1000 ರೂ ನೀಡಿ ಆತ ಖರೀದಿಸಿದ್ದ, ಇದೊಂದು ಸಾಮಾನ್ಯ ಫೀಚರ್‌ಗಳಿರುವ ಫೋನ್ ಆಗಿದ್ದು, ಇಲ್ಲಿಯವರೆಗೆ ಈ ಮೊಬೈಲ್‌ನಲ್ಲಿ ಯಾವುದೇ ದ್ವೇಷ ಕಂಡು ಬಂದಿರಲಿಲ್ಲ ಎಂದು ಹೇಳಿದ್ದಾಗಿ ಮಾಹಿತಿ ನೀಡಿದರು. ಇತ್ತ ಮೊಬೈಲ್ ಸ್ಫೋಟದಿಂದ ಆತ ಪಾರಾಗಿದ್ದರು ಕೆಲ ಸುಟ್ಟ ಗಾಯಗಳಾಗಿವೆ.
ಕೇರಳದಲ್ಲಿ ಮೊಬೈಲ್ ಸ್ಫೋಟಿಸಿ 8 ವರ್ಷದ ಬಾಲಕಿ ಸಾವು
ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಕೇರಳದ ತ್ರಿಶೂರ್‌ನಲ್ಲಿ ಕಳೆದ ತಿಂಗಳು ನಡೆದಿತ್ತು. ಬಲಕಿ ರಾತ್ರಿ ಮೊಬೈಲ್ ನೋಡುತ್ತಿದ್ದಾಗಲೇ ಸ್ಫೋಟ ಸಂಭಿಸಿ ಬಾಲಕಿಯ ಮುಖಕ್ಕೆ ಬಡಿದು ಬಾಲಕಿ ಸಾವನ್ನಪ್ಪಿದ್ದಳು. ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಈಕೆ ತಿರುವಿಲ್ವಮಲ ನಿವಾಸಿಯಾಗಿದ್ದು, 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ರಾತ್ರಿ 10.30ರ ವೇಳೆ ಮಲಗುವ ಸಮಯದಲ್ಲಿ ಈಕೆ ಪೋಷಕರ ಮೊಬೈಲ್ ಬಳಸುತ್ತಿದ್ದು ಈ ವೇಳೆ ದಿಢೀರನೇ ಮೊಬೈಲ್ ಸ್ಫೋಟಗೊಂಡಿದೆ.
ಬೈಕ್ ಚಲಿಸುತ್ತಿದ್ದಾಗಲೇ ಬ್ಲಾಸ್ಟ್ ಆಯ್ತು ವಿವೋ ಮೊಬೈಲ್ : ಇಬ್ಬರಿಗೆ ಗಾಯ
ಬಾಲಕಿ ಆದಿತ್ಯಶ್ರೀ ತಿರುವಿಲ್ವಮಲ್‌ನ ನ್ಯೂ ಕ್ರೈಸ್ಟ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಬಾಲಕಿ ಬಹಳ ಹೊತ್ತಿನಿಂದ ವೀಡಿಯೋ ವೀಕ್ಷಿಸುತ್ತಿದ್ದು, ಇದರಿಂದ ಬ್ಯಾಟರಿ ಓವರ್ ಹೀಟ್ ಆಗಿ ಈ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿ ಆದಿತ್ಯಶ್ರೀ ಪಜ್ಜನೂರು ಪಂಚಾಯತ್‌ನ ಮಾಜಿ ಸದಸ್ಯ ಅಶೋಕ್ ಹಾಗೂ ಸೌಮ್ಯ ದಂಪತಿಯ ಪುತ್ರಿಯಾಗಿದ್ದಾಳೆ. ವಿಧಿ ವಿಜ್ಞಾನ ಪ್ರಯೋಗದ ಬಳಿಕವಷ್ಟೇ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.