ವ್ಯಕ್ತಿಯೋರ್ವ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಏಕಾ ಏಕಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. 

ಬೆಂಗಳೂರು : ಜೇಬಲ್ಲಿಟ್ಟಾಗಲೇ ಮೊಬೈಲ್ ಬ್ಲಾಸ್ಟ್ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳುರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. 

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ಮೊಬೈಲ್ ಸ್ಫೋಟವಾಗಿದೆ. ಕೋಲಾರ ಜಿಲ್ಲೆಯ ಗಂಗಾಧರ ಎಂಬ ಯುವಕನ ಮೊಬೈಲ್ ಸ್ಫೋಟಗೊಂಡು ಕಾಲಿಗೆ ಗಂಭೀರವಾದ ಏಟಾಗಿದೆ. 

ನಂದಗುಡಿ ಬಳಿ ತೆರಳುತ್ತಿದ್ದ ವೇಳೆ ಇದ್ದಕ್ಕಿದಂತೆ ವಿವೋ ಕಂಪನಿಯ ಮೊಬೈಲ್ ಸ್ಪೋಟಗೊಂಡಿದೆ, ಬೈಕ್ ನಲ್ಲಿದ್ದ ತಾಯಿ-ಮಗ ನೆಲಕ್ಕುರುಳಿದ್ದು, ಈ ವೇಳೆ ಗಂಗಾಧನ ಕಾಲು‌ ಮುರಿದಿದೆ. ಇನ್ನೂ ಗಂಗಾಧರನ ತಾಯಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.