ಅಪರಿಚಿತರ ಗುಂಪೊಂದು ಚರ್ಚ್‌ಗೆ ಬೆಂಕಿ ಹಚ್ಚಿ ಅಪವಿತ್ರಗೊಳಿಸಿದ ಘಟನೆ ಮಧ್ಯಪ್ರದೇಶದ ನರ್ಮದಾಪುರಂ (Narmadapuram) ಜಿಲ್ಲೆಯಲ್ಲಿ ನಡೆದಿದೆ. 

ಭೋಪಾಲ್‌: ಅಪರಿಚಿತರ ಗುಂಪೊಂದು ಚರ್ಚ್‌ಗೆ ಬೆಂಕಿ ಹಚ್ಚಿ ಅಪವಿತ್ರಗೊಳಿಸಿದ ಘಟನೆ ಮಧ್ಯಪ್ರದೇಶದ ನರ್ಮದಾಪುರಂ (Narmadapuram) ಜಿಲ್ಲೆಯಲ್ಲಿ ನಡೆದಿದೆ. 
ಆದಿವಾಸಿಗಳೇ ಹೆಚ್ಚಿರುವ ಚೌಕಿಪುರ ಗ್ರಾಮದ ಚರ್ಚ್‌ಗೆ ನುಗ್ಗಿರುವ ದುಷ್ಕರ್ಮಿಗಳು, ಗೋಡೆಯ ಮೇಲೆ 'ರಾಮ' ಎಂದು ಬರೆದಿದ್ದಾರೆ. ಇದೇ ವೇಳೆ, ಚರ್ಚ್‌ ಒಳಗೆ ಬೆಂಕಿ ಹಾಕಿದ್ದಾರೆ. ಇದರಿಂದ ಕೆಲವು ಧಾರ್ಮಿಕ ಪುಸ್ತಕಗಳು ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿ ಆಗಿವೆ. ಈ ಚರ್ಚ್‌ (church) ಅನ್ನು 5 ವರ್ಷದ ಹಿಂದೆ ನಿರ್ಮಿಸಲಾಗಿತ್ತು.

ಈ ನಡುವೆ, ರಾಜ್ಯದ ಖಂಡ್ವಾದಲ್ಲಿ (Khandwa) ಇದೇ ರೀತಿ ಮತ್ತೊಂದು ಪ್ರಕರಣ ನಡೆದಿದ್ದು, ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯಲ್ಲಿ ಹನುಮಾನ್‌ ಮೂರ್ತಿಯನ್ನು (Hanuman idol) ಒತ್ತಾಯಪೂರ್ವಕವಾಗಿ ಪ್ರತಿಷ್ಠಾಪಿಸಲು ಯತ್ನಿಸಲಾಗಿದೆ. ಇದರಿಂದ ಎರಡು ಗುಂಪುಗಳ ನಡುವೆ ಕಲ್ಲೆಸೆತ ಸಂಭವಿಸಿ ಕೋಮು ಗಲಭೆ ಉಂಟಾಗಿದೆ. ಘಟನೆಯಲ್ಲಿ ಪೋಲಿಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಕೋಮು ವೈಷಮ್ಯ ಸೃಷ್ಟಿಸಲು ಮಂಗಳೂರು ಸ್ಫೋಟ: ಡಿಜಿಪಿ ಪ್ರವೀಣ್‌ ಸೂದ್‌

Chikkamagalauru: ದತ್ತಜಯಂತಿ ವೇಳೆ ಕೋಮು ಗಲಭೆ ಸೃಷ್ಟಿಸಲು ನಡೆದಿತ್ತು ಮಹಾಸಂಚು