Asianet Suvarna News Asianet Suvarna News

ಮದ್ವೆ ಮನೆಯಿಂದ ಕೋಟಿ ಮೌಲ್ಯದ ಆಭರಣ ಹಣವಿದ್ದ ಬ್ಯಾಗ್ ಎಗರಿಸಿದ ಬಾಲಕ: ಕೃತ್ಯ ಸಿಸಿಯಲ್ಲಿ ಸೆರೆ

ರಾಜಸ್ಥಾನದ ಜೈಪುರದ ಹೊಟೇಲೊಂದರಿಂದ 14 ವರ್ಷದ ಬಾಲಕನೋರ್ವ ಬರೋಬ್ಬರಿ 1.5 ಕೋಟಿ ಮೌಲ್ಯದ ಆಭರಣ ಹಾಗೂ ಹಣ ಇದ್ದ ಬ್ಯಾಗನ್ನು ಮೆಲ್ಲನೆ ಎಗರಿಸಿದ್ದಾನೆ. ಚಾಲಾಕಿ ಬಾಲಕನ ಈ ಕೃತ್ಯ ಹೊಟೇಲ್ ಆವರಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ

minor boy stolen a bag containing jewelery and cash worth Rs 1.5 crore in wedding at Jaipurs Hyatt Hotel akb
Author
First Published Aug 10, 2024, 1:06 PM IST | Last Updated Aug 10, 2024, 1:06 PM IST

ಜೈಪುರ: ರಾಜಸ್ಥಾನದ ಜೈಪುರದ ಹೊಟೇಲೊಂದರಿಂದ 14 ವರ್ಷದ ಬಾಲಕನೋರ್ವ ಬರೋಬ್ಬರಿ 1.5 ಕೋಟಿ ಮೌಲ್ಯದ ಆಭರಣ ಹಾಗೂ ಹಣ ಇದ್ದ ಬ್ಯಾಗನ್ನು ಮೆಲ್ಲನೆ ಎಗರಿಸಿದ್ದಾನೆ. ಚಾಲಾಕಿ ಬಾಲಕನ ಈ ಕೃತ್ಯ ಹೊಟೇಲ್ ಆವರಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಜೈಪುರದ ಹಯಾತ್ ಹೊಟೇಲ್‌ನಲ್ಲಿ ಈ ಘಟನೆ ನಡೆದಿದೆ. ಜೈಪುರದ ಹಯಾತ್ ಹೊಟೇಲ್‌ನಲ್ಲಿ ನಡೆದ ಮದುವೆ ಸಮಾರಂಭದ ವೇಳೆ ಈ ಕಳ್ಳತನ ನಡೆದಿದೆ. ಮದುವೆಯ ಆಶೀರ್ವಾದ ಸಮಾರಂಭದ ವೇಳೆ 14 ವರ್ಷದ ಬಾಲಕ ವರನ ತಾಯಿಯ ಬ್ಯಾಗ್ ಮೇಲೆ ಕಣ್ಣು ಹಾಕಿದ್ದು ಅದನ್ನು ಕೇವಲ ಒಂದು ನಿಮಿಷದಲ್ಲಿ ಮಾಯ ಮಾಡಿದ್ದಾನೆ.  ಕೇವಲ ಒಂದು ನಿಮಿಷದಲ್ಲಿ ಈ ಕೆಲಸ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಾವಳಿ ಸೆರೆ ಆಗಿದೆ. 

ವರದಿಯ ಪ್ರಕಾರ ಹೀಗೆ ಬಾಲಕನ ಕೈ ಚಳಕದಿಂದ ಬ್ಯಾಗ್ ಕಳೆದುಕೊಂಡವರು ತೆಲಂಗಾಣದ ಸೈಬರಾಬಾದ್‌ನವರಾಗಿದ್ದು, ಡೆಸ್ಟಿನೇಷನ್‌ ವೆಡ್ಡಿಂಗ್‌ಗಾಗಿ (destination wedding) ಹೈದರಾಬಾದ್‌ನಿಂದ ಜೈಪುರಕ್ಕೆ ಪ್ರಯಾಣ ಮಾಡಿದ್ದರು.  ಕಳವಾದ ಬ್ಯಾಗನ್ನು ವಧುವರರಿದ್ದ ಮದುವೆ ಮಂಟಪದ ಸಮೀಪದಿಂದಲೇ  ಕಳವು ಮಾಡಲಾಗಿದೆ. ಇದರಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಹಣ ಸೇರಿ ಅಂದಾಜು 1.50 ಕೋಟಿ ಮೌಲ್ಯದ ವಸ್ತುಗಳಿದ್ದವು ಎಂದು ಅಂದಾಜಿಸಲಾಗಿದೆ.

ಬೆಂಗಳೂರು: ರಂಗೋಲಿ ಹಾಕದ ಮನೆಗಳ ಗುರುತಿಸಿ ಕಳ್ಳತನ ಮಾಡ್ತಿದ್ದ ಖರ್ತಾನಕ್‌ ಖದೀಮನ ಬಂಧನ..!

ಈ ಕಳವು ಪ್ರಕರಣದ ಬಗ್ಗೆ ತೆಲಂಗಾಣದ ಸೈಬರಾಬಾದ್‌ನ ಉದ್ಯಮಿಯಾಗಿರುವ ನರೇಶ್ ಕುಮಾರ್ ಗುಪ್ತಾ ಅವರು ಮುಹಾನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಹೊಟೇಲ್‌ನ ಸಿಸಿಟಿವಿ ದೃಶ್ಯಾವಳಿಯನ್ನು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನರೇಶ್‌ ಕುಮಾರ್ ಗುಪ್ತ ಅವರು ಹೈದರಾಬಾದ್‌ನಲ್ಲಿ ಮೆಡಿಕಲ್‌ಗೆ ಸಂಬಂಧಿಸಿದ ಉದ್ಯಮ ನಡೆಸುತ್ತಿದ್ದರು. ಇವರ  ಪುತ್ರ ಸಾಯಿರಾಮ್ ಅವರ ವಿವಾಹ ಆಗಸ್ಟ್ 8 ರಂದು ಜೈಪುರದ ಹಯಾತ್ ಹೊಟೇಲ್‌ನಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಸಿಸಿಟಿವಿಯಲ್ಲಿರುವಂತೆ ರಾತ್ರಿ 11.30ರ ಸುಮಾರಿಗೆ ನರೇಶ್ ಅವರ ಪತ್ನಿಯ ಬಿಳಿ ಬಣ್ಣದ ಬ್ಯಾಗ್ ಮಂಟಪದ ಸಮೀಪದಿಂದಲೇ ಕಳವಾಗಿದೆ.

20 ದಿನದಲ್ಲಿ ಮರಳಿಸುವೆ ನನ್ನ ಹುಡುಕಬೇಡಿ, ಮನೆ ದೋಚಿ ಮಾಲೀಕನಿಗೆ ವ್ಯಾಟ್ಸಾಪ್ ಸಂದೇಶ!

ಈ ಬ್ಯಾಗ್‌ನಲ್ಲಿ ಹಣ, ಆಭರಣ ಸೇರಿ ಅಂದಾಜು 1.44 ಕೋಟಿ ಮೌಲ್ಯದ ವಸ್ತುಗಳಿದ್ದವು ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದಂತೆ ರಾತ್ರಿ 10.10ರ ಸುಮಾರಿಗೆ ಅಂದಾಜು 13 ರಿಂದ 14 ವರ್ಷದ ಬಾಲಕ ಹಾಗೂ ಅನುಮಾನಾಸ್ಪದ ವ್ಯಕ್ತಿಯೊಬ್ಬ ಮದುವೆ ನಡೆಯುತ್ತಿದ್ದ ಹೊಟೇಲ್ ಹಯಾತ್‌ಗೆ ಬಂದಿದ್ದಾರೆ. ಇದಾಗಿ ಸ್ವಲಪ್ ಹೊತ್ತಿನಲ್ಲಿ ಬಾಲಕ ಮಂಟಪದ ಸಮೀಪದಲ್ಲಿದ್ದ ಬ್ಯಾಗ್ ಎಗರಿಸಿ ನಿಮಿಷದಲ್ಲಿ ತಾನು ಬಂದ ವ್ಯಕ್ತಿಯ ಜೊತೆ ಅಲ್ಲಿಂದ ಪರಾರಿಯಾಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಆರಂಭಿಸಿದ್ದಾರೆ. 

 

Latest Videos
Follow Us:
Download App:
  • android
  • ios