20 ದಿನದಲ್ಲಿ ಮರಳಿಸುವೆ ನನ್ನ ಹುಡುಕಬೇಡಿ, ಮನೆ ದೋಚಿ ಮಾಲೀಕನಿಗೆ ವ್ಯಾಟ್ಸಾಪ್ ಸಂದೇಶ!

ನನ್ನನ್ನು ಹುಡುಕಬೇಡಿ, ಪೊಲೀಸ್ ಕಂಪ್ಲೇಟ್ ಕೊಡುವ ಅಗತ್ಯವೂ ಇಲ್ಲ. ಜಸ್ಟ್ 20 ದಿನ ಮಾತ್ರ, ಕದ್ದ ಎಲ್ಲವನ್ನೂ ಹಿಂತಿರುಗಿಸುತ್ತೇನೆ. ಇದು  ಮನೆ ದೋಚಿದ ಬಳಿಕ ಮಾಲೀಕನಿಗೆ ಬಂದ ವ್ಯಾಟ್ಸಾಪ್ ಸಂದೇಶ. ಈ ಹೈಟೆಕ್ ಕಳ್ಳ ಯಾರು? ಇಲ್ಲಿದೆ ರೋಚಕ ವಿವರ.
 

I will return everything in 20 days Driver WhatsApp message after stole from owner house Bhopal ckm

ಭೋಪಾಲ್(ಜು.30) ಸರ್ಕಾರಿ PWD ಅಧಿಕಾರಿ ಮನೆಯಲ್ಲಿ ಕಳ್ಳತನವಾಗಿದೆ. ನಗದು, ಚಿನ್ನಾಭರಣಗಳನ್ನು ದೋಚಲಾಗಿದೆ.  ಭದ್ರತೆ ಸೇರಿದಂತೆ ಎಲ್ಲಾ ಬಂದೋಬಸ್ತ್ ಇದ್ದರೂ ಲಕ್ಷ ಲಕ್ಷ ರೂಪಾಯಿ ನಗದು ಹಾಗೂ  ಚಿನ್ನಾಭರಣ ಕಳುವಾಗಿರುವುದು ಅಧಿಕಾರಿ ಚಿಂತೆಗೆ ಕಾರಣವಾಗಿದೆ. ಮತ್ತೊಂದು ಬಾರಿ ಮನೆಯಲ್ಲಿ ಹುಡುಕಾಡಿದ್ದಾರೆ. ಕಳ್ಳತನ ಅನ್ನೋದು ದೃಢಪಟ್ಟಿದೆ. ಪೊಲೀಸರಿಗೆ ದೂರು ನೀಡಲು ಮನೆಯಿಂದ ಹೊರಡುತ್ತಿದ್ದಂತೆ ಸಂದೇಶ ಒಂದು ಬಂದಿದೆ. ನನ್ನನ್ನು ಹುಡುಕಬೇಡಿ, ನಿಮ್ಮ ಮನೆಯಿಂದ ಕಳ್ಳತನವಾಗಿರುವ ಎಲ್ಲವನ್ನೂ ಕೇವಲ 20 ದಿನದಲ್ಲಿ ಹಿಂತಿರುಗಿಸುತ್ತೇನೆ ಎಂದು ವ್ಯಾಟ್ಸಾಪ್ ಸಂದೇಶ ಬಂದಿದೆ. ಅಲ್ಲಿಗೆ ಅಧಿಕಾರಿ ಪಿತ್ತ ನೆತ್ತಿಗೇರಿದೆ. ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಶಹಾಪುರದಲ್ಲಿ ನಡೆದಿದೆ.

ಅಧಿಕಾರಿ ಕಪಿಲ್ ತ್ಯಾಗಿ ಬಂಗಲೆಯಲ್ಲಿ ಈ ಕಳ್ಳತನ ನಡೆದಿದೆ. ಕಪಿಲ್ ತ್ಯಾಗಿ ಹಾಗೂ ಪತ್ನಿ ಅಮೆರಿಕ ತೆರಳಿದ್ದಾರೆ. ಮಗಳ ಜೊತೆ ಕೆಲ ದಿನ ಕಳೆಯಲು ಅಮೆರಿಕ ತೆರಳಿದ್ದಾರೆ. ಇತ್ತ ಕಪಿಲ್ ತ್ಯಾಗಿ ಪುತ್ರ ಕಾಂಟ್ರಾಕ್ಟರ್ ಕೆಲಸದ ನಿಮಿತ್ತ ಇಂದೋರ್‌ಗೆ ತೆರಳಿದ್ದಾನೆ. ಹೀಗಾಗಿ ಮನೆಯಲ್ಲಿ ಯಾರು ಇರಲಿಲ್ಲ. ಇದರ ನಡುವೆ ಕಳ್ಳತನವಾಗಿದೆ.

ಬೈಕ್ ಕಳ್ಳತನಕ್ಕೆ ಬಂದವನ ಆ್ಯಕ್ಟಿಂಗ್‌ಗೆ ಫಿದಾ ಆಗೋದು ಖಚಿತ, ಸಿಸಿಟಿವಿಯಿಂದ ಸ್ಟಂಪ್ ಔಟ್!

ಇಂಧೋರ್‌ಗೆ ತೆರಳಿದ ಮಗ ಮನೆಗೆ ಮರಳಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನ ಕುರಿತು ತಂದೆಗೂ ಮಾಹಿತಿ ನೀಡಿದ್ದಾನೆ. ಅಮೆರಿಕದಲ್ಲಿದ್ದ ತಂದೆ ಚಿಂತಾಕ್ರಾಂತರಾಗಿದ್ದಾರೆ. ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸು ಸೂಚಿಸಿದ್ದಾರೆ. ಈ ವೇಳೆ ಕಾಂಟ್ರಾಕ್ಟರ್ ಫೋನ್‌ಗೆ ವ್ಯಾಟ್ಸಾಪ್ ಸಂದೇಶ ಬಂದಿದೆ. ನೀವು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಹುಡುಕಿದರೆ ಸಮಸ್ಯೆ ಹೆಚ್ಚು. ನಾನು ಕದ್ದಿರುವ ಎಲ್ಲವನ್ನೂ 20 ದಿನದಲ್ಲಿ ಹಿಂತಿರುಗಿಸುತ್ತೇನೆ ಎಂಬ ಸಂದೇಶ ಬಂದಿದೆ.

ಈ ಸಂದೇಶ ಕಳುಹಿಸಿರುವುದು ಕಾಂಟ್ರಾಕ್ಟರ್ ಡ್ರೈವರ್ ದೀಪಕ್ ಯಾದವ್. ಇತ್ತೀಚೆಗಷ್ಟೇ ಅಧಿಕಾರಿ ಪುತ್ರ ತನ್ನ ಕೆಲಸದ ನಿಮಿತ್ತ ಕಾರು ಚಾಲಕನ ನೇಮಿಸಿಕೊಂಡಿದ್ದರು. ಯುವ ಚಾಲಕ ದೀಪಕ್ ಯಾದವ್ ಈ ಕಳ್ಳತನ ಮಾಡಿರುವುದು ಆತನ ಸಂದೇಶದಿಂದ ಬಯಲಾಗಿದೆ. ಕಾರಿನ ಕೀ ತೆಗೆಯುವ ಕಾರಣ ನೀಡಿ ಅಧಿಕಾರಿ ತಾಯಿಯಿಂದ ಕೀ ಪಡೆದುಕೊಂಡ ದೀಪಕ್ ಯಾದವ್, ಬಳಿಕ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ವಿಶೇಷ ಅಂದರೆ ಕಾಂಟ್ರಾಕ್ಟರ್ ಎನೆಲ್ಲಾ ಕದ್ದಿರುವುದಾಗಿ ಪ್ರಶ್ನಿಸ ಮೆಸೇಜ್ ಕಳುಹಿಸಿದಾ, ನಗದು ಹಾಗೂ ಕೆಲ ಚಿನ್ನಾಭರಣ ಕದ್ದಿರುವುದಾಗಿ ಹೇಳಿದ್ದಾನೆ. ಇದೀಗ ಪೊಲೀಸರು ದೀಪಕ್ ಯಾದವ್‌ಗೆ ಹುಡುಕಾಟ ಆರಂಭಿಸಿದ್ದಾರೆ. ಮೊಬೈಲ್ ಲೋಕೇಶನ್ ಸೇರಿದಂತೆ ಹಲವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇಡೀ ರೆಸ್ಟೋರೆಂಟ್ ತಡಕಾಡಿದ ಕಳ್ಳನಿಗೆ ನಿರಾಸೆ, ಏನೂ ಸಿಗದೆ ತನ್ನ 20 ರೂ ಇಟ್ಟು ಹೊರಟ ದೃಶ್ಯ ಸೆರೆ!
 

Latest Videos
Follow Us:
Download App:
  • android
  • ios