Asianet Suvarna News Asianet Suvarna News
breaking news image

Video: ಕೋಣೆಯಲ್ಲಿ ಕೂಡಿ ಹಾಕಿ ಕೋಲಿನಿಂದ ಹೊಡೆದು ಅಲ್ಲಾ ಹು ಅಕ್ಬರ್ ಹೇಳಿಸಿದ್ರು

ಹಲ್ಲೆಗೊಳಗಾದ ಅಪ್ರಾಪ್ತ ಮತ್ತು ಆರೋಪಿ ಯುವಕ ಮೊದಲು ಒಳ್ಳೆಯ ಗೆಳೆಯರಾಗಿದ್ದರು. ಆದ್ರೆ ಯಾವುದೇ ಒಂದು ವಿಷಯಕ್ಕೆ ಇಬ್ಬರ ಮಧ್ಯೆ ಭಿನ್ನಮತ ಉಂಟಾಗಿತ್ತು.

minor-beaten-with-a-stick-and-called-allah-hu-akbar video viral
Author
First Published Jun 25, 2024, 4:50 PM IST

ಪಟನಾ: ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ (Viral Video) ಆಗುತ್ತಿದೆ. ಈ ವಿಡಿಯೋದಲ್ಲಿ ಓರ್ವ ಅಪ್ರಾಪ್ತನನ್ನು (Minor)  ಕೋಣೆಯೊಂದರಲ್ಲಿ ಕೂಡಿ ಹಾಕಿ ಕೋಲಿನಿಂದ ಹೊಡೆದು ಬಲವಂತವಾಗಿ ಆತನಿಂದ ಅಲ್ಲಾ ಹು ಅಕ್ವರ್ ಎಂದು ಹೇಳಿಸಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಯುವಕ ಕಾಲಿನ ಮೇಲೆ ಉಗುಳಿ ಅದನ್ನು ನಾಲಿಗೆಯಿಂದ ನೆಕ್ಕುತ್ತವೆ ಎಂದು ಅಮಾನವೀಯವಾಗಿ ಅಪ್ರಾಪ್ತನ ಜೊತೆ ನಡೆದುಕೊಳ್ಳಲಾಗಿದೆ. ಈ ಅಮಾನವೀಯ ಘಟನೆ ಬಿಹಾರ ರಾಜ್ಯದ ಮುಜಾಫುರ ಜಲ್ಲೆಯ ಮೋತಿಪುರ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೋರ್ವ ಅಪ್ರಾಪ್ತನನ್ನು ಥಳಿಸುತ್ತಿರೋದು ಸ್ಪಷ್ಟವಾಗಿ ಕಾಣುತ್ತದೆ. ಬಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ಮಧ್ಯೆದಲ್ಲಿ ಯುವಕ, ಅಲ್ಲಾ ಹು ಅಕ್ಬರ್ ಹೇಳು ಎಂದು ಆರ್ಡರ್ ಮಾಡುತ್ತಿರುತ್ತಾನೆ. ಇದರ ಜೊತೆಯಲ್ಲಿ ಮಿಯಾ ಸಾಹೇಬ್ ಜಿಂದಾಬಾದ್ ಎಂಬ ಘೋಷಣೆಯನ್ನು ಹೇಳುವಂತೆಯೂ  ಬಾಲಕನ ಮೇಲೆ ಒತ್ತಡ ಹಾಕುತ್ತಾನೆ. 

ಮೂವರು ಆರೋಪಿಗಳ ಬಂಧನ

ಕೋಲಿನಿಂದ ತೀವ್ರವಾಗಿ ಹೊಡೆದ ಹಿನ್ನೆಲೆ ಬಾಲಕ ಕೈ ಮೂಳೆ ಮುರಿದಿದೆ. ನಂತರ ಉಗುಳು ನೆಕ್ಕುವಂತೆ ಹೇಳಿದಾಗ ಬಾಲಕ ಒಪ್ಪದಿದ್ದಾಗ ನಿರಂತರವಾಗಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಉಗಳನ್ನು ನಾಲಿಗೆಯಿಂದ ನೆಕ್ಕುವರೆಯೂ ಕೋಲಿನಿಂದ ಹೊಡೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಜಾಫುರ ಜಿಲ್ಲೆಯ ಮೋತಿಪುರ ವ್ಯಾಪ್ತಿಯ ಬತರೌಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

I am sorry ಅಪ್ಪಾ.. 8ನೇ ಮಹಡಿಯಿಂದ ಜಿಗಿದ TCS ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ 

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಹಲ್ಲೆ ಹಿನ್ನೆಲೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಶಾಂತಿ ಕಾಪಾಡುವಂತೆ ಪೊಲೀಸರ ಮನವಿ

ಹಲ್ಲೆಗೊಳಗಾದ ಅಪ್ರಾಪ್ತ ಮತ್ತು ಆರೋಪಿ ಯುವಕ ಮೊದಲು ಒಳ್ಳೆಯ ಗೆಳೆಯರಾಗಿದ್ದರು. ಆದ್ರೆ ಯಾವುದೇ ಒಂದು ವಿಷಯಕ್ಕೆ ಇಬ್ಬರ ಮಧ್ಯೆ ಭಿನ್ನಮತ ಉಂಟಾಗಿತ್ತು. ಇದಾದ ಬಳಿಕ ಬಾಲಕನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಮಸ್ಥರು ಶಾಂತಿ ಕಾಪಾಡಬೇಕೆಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

30 ಸೆಕೆಂಡ್‌ನಲ್ಲಿ 50 ಬಾರಿ ಬೆಲ್ಟ್‌ನಿಂದ ಹೊಡೆದು ಐವರಿಂದ ಮೃಗೀಯ ವರ್ತನೆ

Latest Videos
Follow Us:
Download App:
  • android
  • ios