Asianet Suvarna News Asianet Suvarna News

ರೈಲಿನ ಕೊನೆಯ ಬೋಗಿಯ ಹಿಂದಿರುವ X ಚಿಹ್ನೆಯ ಅರ್ಥವೇನು? ರಹಸ್ಯ ಬಯಲು!

ಭಾರತೀಯ ರೈಲಿನ ಕೊನೆಯ ಬೋಗಿಯ ಮೇಲೆ X ಚಿಹ್ನೆ ಹಾಕಿರುತ್ತಾರೆ. ಇದು ಯಾಕೆ? ಇದರ ಅರ್ಥವೇನು? ಈ ಕುರಿತು ಸ್ವತಃ ರೈಲ್ವೇ ಸಚಿವಾಯ ರಹಸ್ಯ ಬಯಲು ಮಾಡಿದೆ. 

Ministry of Indian Railways reveals letter X on last coach of train people react very useful ckm
Author
First Published Mar 6, 2023, 8:34 PM IST

ನವದೆಹಲಿ(ಮಾ.06): ಭಾರತೀಯ ರೈಲ್ವೇಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. ವಂದೇ ಭಾರತ್ ಅತೀ ವೇಗದ ರೈಲು, ವಿದ್ಯುದ್ದೀಕರಣ, ಐಷಾರಾಮಿ ರೈಲು, ಡಿಜಿಟಲೀಕರಣ ಸೇರಿದಂತೆ ಹಲವು ಬದಲಾವಣೆಯಾಗಿದೆ. ಭಾರತೀಯ ರೈಲ್ವೇಯಲ್ಲಿನ ಕೆಲ ವಿಚಾರಗಳು ಅಷ್ಟೇ ಕುತೂಹಲಕರ. ಬಹುತೇಕರು ರೈಲು ಪ್ರಯಾಣ ಮಾಡಿರುತ್ತಾರೆ. ಇಲ್ಲವಾದಲ್ಲಿ ರೈಲನ್ನು ಗಮನಿಸಿರುತ್ತಾರೆ. ರೈಲಿನ ಕೊನೆಯ ಬೋಗಿಯ ಹಿಂಭಾಗದಲ್ಲಿ X ಚಿಹ್ನೆ ಹಾಕಿರಲಾಗುತ್ತದೆ. ಇದರ ಅರ್ಥವೇನು? ಈ ಕುರಿತ ರಹಸ್ಯವನ್ನು ಸ್ವತಃ ಭಾರತೀಯ ರೈಲ್ವೇ ಸಚಿವಾಲಯ ಬಯಲು ಮಾಡಿದೆ. ರೈಲು ಯಾವುದೇ ಬೋಗಿಗಳನ್ನು ಬಿಡದೆ ಸಾಗಿದೆ ಎಂದರ್ಥ. ಅಂದರ ರೈಲು ಯಾವುದೇ ಬೋಗಿಗಳನ್ನು ಬೇರ್ಪಡಿಸದೆ ರೈಲು ಸಂಪೂರ್ಣವಾಗಿ ಹಾದು ಹೋಗಿದೆ ಎಂದು ದೃಢೀಕರಣಕ್ಕಾಗಿ ಈ ಚಿಹ್ನೆ ಹಾಕಲಾಗಿದೆ ಎಂದು ರೈಲ್ವೇ ಸಚಿವಾಯ ರಹಸ್ಯ ಬಿಚ್ಚಿಟ್ಟಿದೆ.

ರೈಲು ನಿಲ್ದಾಣದಲ್ಲಿ, ರೈಲು ಕ್ರಾಸಿಂಗ್‌ನಲ್ಲಿ, ರೈಲು ಕಂಟ್ರೋಲ್ ರೂಂಗಳಲ್ಲಿ ರೈಲನ್ನು ಗಮನಿಸುತ್ತಿರುವ ಅಧಿಕಾರಿಗಲು, ರೈಲು ಯಾವುದೇ ಕೋಚ್ ಬಿಡದೆ ಸಾಗಿದೆ ಅನ್ನೋದು ಖಾತ್ರಿಪಡಿಸಲು X  ಚಿಹ್ನೆ ಹಾಕಲಾಗಿದೆ.  X ಬೋಗಿ ನೋಡಿದರೆ ಇದು ರೈಲಿನ ಕೊನೆಯ ಬೋಗಿ ಅನ್ನೋದು ಖಚಿತವಾಗಲಿದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಬೋಗಿ ಬೇರ್ಪಟ್ಟರೆ ಇದರಿಂದ ತಿಳಿಯಲಿದೆ. ಹೀಗಾಗಿ ತುರ್ತು ಕ್ರಮ ಕೈಗೊಳ್ಳಲು ನೆರವಾಗಲಿದೆ. 

ಶಿವಮೊಗ್ಗ ರೈಲ್ವೆ ನಿಲ್ದಾಣದ ಫಲಕಕ್ಕೆ ಸಂಸ್ಕೃತ ಭಾಷೆ ಸೇರ್ಪಡೆ!

ಈ ಕುರಿತು ಕೇಂದ್ರ ರೈಲ್ವೇ ಸಚಿವಾಲಯ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. X  ಚಿಹ್ನೆ ನೋಡಿದರೆ ರೈಲು ಅಧಿಕಾರಿಗಳಿಗೆ ರೈಲು ಯಾವುದೇ ಬೋಗಿಗಳನ್ನು ಬೇರ್ಪಡಿಸದೆ, ಸಂಪೂರ್ಣವಾಗಿ ಸಾಗಿದೆ ಎನ್ನುವುದು ಖಾತ್ರಿಯಾಗಲಿದೆ. ಯಾವುದೇ ಬೋಗಿಗಳು ರೈಲಿನಿಂದ ಬೇರ್ಪಟ್ಟಿಲ್ಲ, ರೈಲಿನ ಎಲ್ಲಾ ಬೋಗಿಗಳು ಜೊತೆಯಲ್ಲೇ ಸಾಗಿರುವುದು ಖಚಿಚವಾಗಲಿದೆ ಎಂದು ರೈಲ್ವೇ ಸಚಿವಾಲಯ ಹೇಳಿದೆ.

 

 

ರೈಲ್ವೇ ಸಚಿವಾಲಯ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ 2 ಲಕ್ಷಕ್ಕೂ ಅಧಿಕ ಮಂದಿ ಈ ಮಾಹಿತಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಮಾಹಿತಿಗಾಗಿ ಧನ್ಯವಾದ. ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ. ಯಾಕೆ ಅನ್ನೋ ಪ್ರಶ್ನೆ ಹಲವು ಬಾರಿ ಮೂಡಿತ್ತು. ಇದೀಗ ಪರಿಹಾರವಾಗಿ ಎಂದು ಕಮೆಂಟ್ ಮಾಡಿದ್ದಾರೆ.

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಬೆಂಗಳೂರು - ಹುಬ್ಬಳ್ಳಿ ನಡುವೆ ಮತ್ತೆರಡು ಹೊಸ ರೈಲು ಸಂಚಾರ

ನಿಮಿಷಕ್ಕೆ 2.5 ಲಕ್ಷ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಗುರಿ 
ಭಾರತೀಯ ರೈಲ್ವೆಯು ಪ್ರತಿ ನಿಮಿಷಕ್ಕೆ ಈಗ ನೀಡುತ್ತಿರುವ 25,000 ಟಿಕೆಟ್‌ ಸಾಮರ್ಥ್ಯವನ್ನು 2.5 ಲಕ್ಷಕ್ಕೆ ಏರಿಸುವ ಉದ್ದೇಶ ಹೊಂದಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.  2023- 24ನೇ ಸಾಲಿನಲ್ಲಿ 7,000 ಕಿ.ಮೀ ಮಾರ್ಗದ ನೂತನ ರೈಲು ಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆಯನ್ನು ಸುಧಾರಿಸಲಾಗುವುದು’ ಎಂದರು.ಇನ್ನು ಪ್ರತಿ ನಿಮಿಷಕ್ಕೆ 4 ಲಕ್ಷ ಜನರ ದೂರುಗಳಿಗೆ ಸ್ಪಂದಿಸುವ ಹೆಲ್ಪ್‌ಲೈನ್‌ ಸಾಮರ್ಥ್ಯವನ್ನು 40 ಲಕ್ಷಕ್ಕೆ ಏರಿಕೆ ಮಾಡುವ ಗುರಿ ಇದೆ ಎಂದರು.‘2,000 ರೈಲು ನಿಲ್ದಾಣಗಳಲ್ಲಿ ದಿನದ 24 ಗಂಟೆಗಳಲ್ಲೂ ತೆರೆದಿರುವ ‘ಜನ್‌ ಸುವಿಧಾ’ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 4,500 ಕಿ.ಮೀ (ಪ್ರತಿ ದಿನ 12 ಕಿ.ಮೀ) ಮಾರ್ಗದ ರೈಲು ಹಳಿಗಳನ್ನು ಹಾಕುವ ಮಾಡುವ ಮೂಲಕ 2022- 23ರ ಗುರಿಯನ್ನು ಈಗಾಗಲೇ ಸಾಧಿಸಲಾಗಿದೆ’ ಎಂದರು.
 

Follow Us:
Download App:
  • android
  • ios