ಶಿವಮೊಗ್ಗ ರೈಲ್ವೆ ನಿಲ್ದಾಣದ ಫಲಕಕ್ಕೆ ಸಂಸ್ಕೃತ ಭಾಷೆ ಸೇರ್ಪಡೆ.  ರೈಲ್ವೆ ನಿಲ್ದಾಣದ ಸೈನ್‌ ಬೋರ್ಡ್‌ನಲ್ಲಿ ಶಿವಮೊಗ್ಗ ಟೌನ್‌ ಎಂದು ಬರೆಯಲಾಗಿದೆ. 3 ಭಾಷೆ ಜೊತೆ ಇನ್ನೊಂದು ಭಾಷೆ ಸೇರ್ಪಡೆಯಾಗಿದೆ.

ಶಿವಮೊಗ್ಗ (ಫೆ.21)  ಜಿಲ್ಲೆಯ ಮುಖ್ಯ ರೈಲ್ವೆ ನಿಲ್ದಾಣದ ಸೈನ್‌ ಬೋರ್ಡ್‌ನಲ್ಲಿ ಶಿವಮೊಗ್ಗ ಟೌನ್‌ ಎಂದು 3 ಭಾಷೆ ಜೊತೆ ಇನ್ನೊಂದು ಭಾಷೆ ಸೇರ್ಪಡೆಯಾಗಿದೆ. ಈವರೆಗೂ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಊರಿನ ಹೆಸರು ಪ್ರಕಟಿಸಲಾಗಿತ್ತು. ಈಚೆಗೆ ರೈಲ್ವೆ ಇಲಾಖೆ ಸಂಸ್ಕೃತ ಭಾಷೆಯಲ್ಲೂ ಊರಿನ ಹೆಸರು ಪ್ರಕಟಿಸಿ ಗಮ​ನ ಸೆಳೆ​​ದಿದೆ. ಸಂಸ್ಕೃತದ ಬರಹ ಬಹುತೇಕ ಹಿಂದಿ ಭಾಷೆಯನ್ನೇ ಹೋಲುವಂತಿದೆ. ಹಾಗಾಗಿ ಸಂಸ್ಕೃತ ಗೊತ್ತಿಲ್ಲದವರು ಗೊಂದಲಕ್ಕೀಡಾಗಿದ್ದಾರೆ.

ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದ್ಯಾವ ಭಾಷೆ ಇದುವರೆಗೆ ನೋಡಿಲ್ಲವಲ್ಲ ಎಂದು ಕೇಳಿದ್ದಾರೆ. ಇನ್ನು ಕೆಲವರು ಕನ್ನಡ ನೆಲದಲ್ಲಿ ಸಂಸ್ಕೃತ ಹೇರುತ್ತಿರುವ ಲಕ್ಷಣಗಳು ಕಾಣುತ್ತಿವೆ ಎಂದು ಬೋರ್ಡ್ ಮೇಲೆ ಸಂಸ್ಕೃತ ಬರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣ ಬೋರ್ಡ್‌ ಗೆ ಸಂಸ್ಕೃತ ಸೇರಿಸಿರುವುದು ಹಿಂದಿ ಹೇರಿಕೆ ನಡುವೆ ಇದೀಗ ಸಂಸ್ಕೃತ ಹೇರುತ್ತಿದೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

Bengaluru: 20 ರೈಲ್ವೆ ನಿಲ್ದಾಣದಲ್ಲಿ ಶೀಘ್ರ ವಾಹನ ವಿದ್ಯುತ್‌ ಚಾರ್ಜಿಂಗ್‌ ಸೌಲಭ್ಯ