ರಾಮ ನವಮಿ ಆಚರಣೆ ವೇಳೆ ನಡೆದ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಶಾಂತಿಯುತ ಆಚರಣೆ ಅರ್ಧಕ್ಕೆ ಮೊಟಕುಗೊಂಡ ಘಟನೆಗಳು ನಡೆದಿತ್ತು. ಗಲಭೆ,ಹಿಂಸಾಚಾರ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳಿಂದ ಪರಿಸ್ಥಿತಿ ವಿಕೋಪಕ್ಕೆ ತಲುಪಿತ್ತು. ಹೀಗಾಗಿ ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಇದೀಗ ಹನುಮಾನ್ ಜಯಂತಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ನವದೆಹಲಿ(ಏ.05): ಪಶ್ಚಿಮ ಬಂಗಾಳ, ಬಿಹಾರದಲ್ಲಿ ರಾಮ ನವಮಿ ಆಚರಣೆ ಅಡ್ಡಿಪಡಿಸಲಾಗಿತ್ತು. ಶೋಭಯಾತ್ರೆ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಮುಸ್ಲಿಮ್ ಏರಿಯಾದಲ್ಲಿ ಶೋಭ ಯಾತ್ರೆ ಸಾಗುತ್ತಿದ್ದ ವೇಳೆ ಕಲ್ಲು, ಇಟ್ಟಿಗೆಗಳನ್ನು ತೂರಲಾಗಿತ್ತು. ಇದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಇಷ್ಟೇ ಅಲ್ಲ ಕೋಮುಗಲಭೆಯಾಗಿ ಮಾರ್ಪಟ್ಟಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಇದೀಗ ಹುನುಮಾನ್ ಜಯಂತಿ ಆಚರಣೆಗೂ ಮೊದಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಯಾ ರಾಜ್ಯಗಳು ಹನುಮಾನ್ ಜಯಂತಿ ಆಚರಣೆ ವೇಳೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಖಡಕ್ ಸೂಚನೆ ನೀಡಿದೆ. ಈ ಮೂಲಕ ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ನಡೆದ ಘಟನೆ ಮರುಕಳಿದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಸ್ಪಷ್ಟವಾಗಿ ಸೂಚಿಸಿದೆ.

ಎಪ್ರಿಲ್ 6 ರಂದು ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಒಂದು ದಿನ ಮೊದಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾವುದೇ ಅಹಿತಕರ ಘಟನೆ ನಡೆದಂತೆ ರಾಜ್ಯ ಸರ್ಕಾರ ಭದ್ರತೆ ನಿಯೋಜಿಸಬೇಕು ಎಂದು ಮಾರ್ಗಸೂಚಿ ಪ್ರಕಟಿಸಿದೆ. ಭಕ್ತರು ಹನುಮಾನ್ ಜಯಂತಿ ಆಚರಣೆಗೆ ಆಯಾ ರಾಜ್ಯ ಅವಕಾಶ ಮಾಡಿಕೊಡಬೇಕು. ಸೂಕ್ತ ಪೊಲೀಸ್ ಭದ್ರತೆ ನೀಡಬೇಕ ಎಂದಿದೆ.

ಭಾರತದ ಆಂತರಿಕ ವಿಚಾರಕ್ಕೆ ಮೂಗು ತೂರಿಸಿದ ಇಸ್ಲಾಮಿಕ್ ಸಂಘಟನೆ, ರಾಮ ನವಮಿ ಗಲಭೆಗೆ ನೋಟಿಸ್!

ಇದೇ ವೇಳೆ ಹನುಮಾನ್ ಜಯಂತಿ ಆಯೋಜಕರು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಶಾಂತಿಯುತವಾದಿ ಯಾವುದೇ ಗಲಭೆಗೆ ಆಸ್ಪದ ನೀಡದಂತೆ ಆಚರಣೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ಶಾಂತಿ ಸೌಹಾರ್ಧತೆಗೆ ಯಾರು ಭಂಗ ತರಬಾರದು. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Scroll to load tweet…

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಹಿಂಸಾಚಾರ ಮಂಗಳವಾರವೂ ಮುಂದುವರೆದಿತ್ತು. ಡಾರ್ಜಲಿಂಗ್‌ ಪ್ರವಾಸದಲ್ಲಿದ್ದ ರಾಜ್ಯಪಾಲ ಆನಂದ್‌ ಬೋಸ್‌ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆಯೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಜಿ20 ಸಭೆಗಾಗಿ ಡಾರ್ಜಲಿಂಗ್‌ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲ ಬೋಸ್‌, ಭಾನುವಾರ ಹಿಂಸಾಚಾರ ನಡೆದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರ ಇಲ್ಲಿ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಶಾಸಕ ಗಾಯಗೊಂಡಿದ್ದರು. ಇನ್ನು ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಲು ಆಗಮಿಸುತ್ತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ ಅವರನ್ನು ಪೊಲೀಸರು 2ನೇ ಬಾರಿಗೆ ತಡೆದಿದ್ದಾರೆ. ಈ ಹಿಂಸಾಚಾರಗಳ ಕರುತಾಗಿ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋಮು ಗಲಭೆಕೋರರಿಗೆ ತಲೆ ಕೆಳಗೆ ನೇತು ಹಾಕಿ ಶಿಕ್ಷೆ: ರಾಮನವಮಿ ಹಿಂಸಾಚಾರ ಬೆನ್ನಲ್ಲೇ ಅಮಿತ್ ಶಾ ಗುಡುಗು

ರಾಮನವಮಿ ಹಿಂಸಾಚಾರಕ್ಕೆ ಬಿಜೆಪಿ ನೇರ ಕಾರಣ ಎಂದು ಮತ್ತೊಮ್ಮೆ ಆರೋಪಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಿಂಸೆಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದರ ನಡುವೆಯೇ ಬಂಗಾಳದಲ್ಲಿ ನಡೆದಿರುವ ಹಿಂಸಾಚಾರದ ಕುರಿತಾಗಿ ಕೇಂದ್ರ ಗೃಹ ಸಚಿವಾಲಯದ ವಿವರವಾದ ಮಾಹಿತಿಯನ್ನು ಕೇಳಿದೆ.